ಕೊಟ್ಟ ಕುದುರೆ ಏರಲಾರದವರಿಂದ ಬೇರೆ ಏನನ್ನು ನಿರೀಕ್ಷಿಸಬಹುದು?

ಉತ್ತರಕನ್ನಡದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಉತ್ತಮ ಕೆಲಸಗಾರರು, ಬನವಾಸಿ ಹೋಬಳಿಗೆ ಸ್ವತಂತ್ರ ಭಾರತದಲ್ಲಿ ಶಿವರಾಮ ಹೆಬ್ಬಾರ 5-6 ವರ್ಷಗಳಲ್ಲಿ ಮಾಡಿದ ಕೆಲಸಯಾರೂ ಮಾಡಿಲ್ಲ ಎನ್ನುತ್ತಾರೆ. ರಸ್ತೆ, ನೀರಾವರಿ ಯಂಥ ಅವಶ್ಯ ಕೆಲಸಗಳ ವಿಚಾರದಲ್ಲಿ ಶಿವರಾಮ ಹೆಬ್ಬಾರ್ ಸ್ಫಂದಿಸಿದ್ದಾರೆ ಎನ್ನುವ ಮೆಚ್ಚುಗೆ ಅವರ ಕ್ಷೇತ್ರದಲ್ಲಿ ಕೇಳಿ ಬರುತಿತ್ತು.
ಆದರೆ ಈಗ ಶಿವರಾಮ ಹೆಬ್ಬಾರ್ ರಾಜೀನಾಮೆ, ಪಕ್ಷಾಂತರದಿಂದ ಹಿಂದೆ ಶಿವರಾಮ ಹೆಬ್ಬಾರರನ್ನು ಹೊಗಳಿದವರೇ ಈಗ ತೆಗಳುವಂತಾಗಿದೆ.
ಶಿವರಾಮ ಹೆಬ್ಬಾರ ಬಹುಹಿಂದೆ ಲಾರಿ ಮೇಲೆ ಪ್ರಯಾಣಿಕರಾಗಿ ಓಡಾಡುತಿದ್ದ ಸಮಯದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆಗಿನಿಂದಲೂ ಸಂಘದ ಕಾರ್ಯಕರ್ತರೂ, ಜಾತಿವಾದಿಗಳಾದ ಕಾಗೇರಿ, ಅನಂತ ಜೊತೆಗೆ ಹೆಬ್ಬಾರರ ಆಂತರಿಕ ಸಂಘರ್ಷ ನಡೆದೆ ಇತ್ತು.
ಈ ಯುಗ ಕಳೆಯುತಿದ್ದಂತೆ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರಿ ಕಾಂಗ್ರೆಸ್ ನಿಂದ ಎರಡುಬಾರಿ ಶಾಸಕರಾಗಿದ್ದು ಈಗ ಚರಿತ್ರೆ.
ಈ ಬಾರಿ ಹೆಬ್ಬಾರ್ ಅಲ್ಪಂಅತರದಿಂದಲಾದರೂ ಗೆಲ್ಲಲು ಕಾರಣ ಅವರ ಜಾತಿ, ಮತ್ತು ಧರ್ಮಸ್ಥಳ ಸಂಘ!
ಹಿಂದೂ ಹೆಸರಲ್ಲಿ ಭಕ್ತರ ತಲೆಗೆ ಎಣ್ಣೆ ಸವರುತ್ತಿರುವ ಧರ್ಮಸ್ಥಳದ ಜೈನ ಹೆಗ್ಗಡೆಯ ಹಣಕಾಸಿನ ಧರ್ಮಸ್ಥಳ ಸಂಘ ಕಳೆದ ಚುನಾವಣೆಗಳಲ್ಲಿ ಬ್ರಾಹ್ಮಣರು ಮತ್ತು ಬಿ.ಜೆ.ಪಿ.ಗಳ ಆಯ್ಕೆಗೆ ತೆರೆಮರೆಯಲ್ಲಿ ನಡೆಸಿರುವ ಕಸರತ್ತು ಈಗ ಬಹಿರಂಗಗೊಂಡ ಸತ್ಯ.
ಈ ಲಾಭಪಡೆದ ಹೆಬ್ಬಾರ್ ಜಾತಿ, ಸಂಘ,ಹಣ ಬಳಸಿ ಗೆದ್ದದ್ದು ಬರೀ 4-5 ಸಾವಿರ ಮತಗಳ ಅಂತರದಿಂದ. ಇಂಥ ಹೆಬ್ಬಾರ್ ಈ ಬಾರಿ ಶಾಸಕರಾಗುತ್ತಲೇ ಸಚಿವನಾಗಬೇಕು ಎಂದು ಯತ್ನಿಸತೊಡಗಿದರು. ಆಗ ಅಡ್ಡ ಬಂದದ್ದು ಇದೇ ದೇಶಪಾಂಡೆ!
ಸಚಿವ ದೇಶಪಾಂಡೆ,ಎಸ್.ಎಂ. ಹೆಬ್ಬಾರ್ ವೈರತ್ವಕ್ಕೆ ಇತಿಹಾಸವಿದೆ. ದೇಶಪಾಂಡೆ ಮಾರ್ಗರೇಟ್ ಆಳ್ವ ಕುಟುಂಬದೊಂದಿಗೆ ಆಂತರಿಕ ಕಲಹ ಮಾಡುತಿದ್ದಾಗ ಆಳ್ವ ಹಿಂದೆ ನಿಂತ ಹೆಬ್ಬಾರ್ ಯಲ್ಲಾಪುರ ಟಿಕೇಟ್ ಗಿಟ್ಟಿಸಿದ್ದು ಈಗ ಹಳೆ ಕತೆ.
ಈಹೆಬ್ಬಾರ್ ಹಿಂದೆ ಬಿ.ಜೆ.ಪಿ. ಸಂಘದ ತೆಕ್ಕೆಯಲ್ಲಿದ್ದವರು. ಜೊತೆಗೆ ಜಾತಿ,ಸ್ವಾಮೀಜಿಗಳ ನೆರವು. ಇವುಗಳ ಸಹಾಯದಿಂದ ಅದಿರಿನಲ್ಲಿ ದುಡಿದ ಹೆಬ್ಬಾರ್ ರಿಗೆ ವಾಯವ್ಯ ಕರ್ನಾಟಕ ರಸ್ತೆ ನಿಗಮದ ಅಧ್ಯಕ್ಷತೆ ದೊರೆತಿದ್ದೂ ಲಾಭಿಯಿಂದಲೇ.
ಹೀಗೆ ನಾನಾ ಕಾರಣ ಪ್ರಯತ್ನಗಳಿಂದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿರುವ ಹೆಬ್ಬಾರ್ ಅವಧಿಯಲ್ಲಿ ಭಟ್ಕಳದ ಕುಸಿದು ಬೀಳುತ್ತಿರುವ ಬಸ್ ನಿಲ್ದಾಣದ ರಿಪೇರಿಯಾಗಲಿಲ್ಲ. ಒಂದೆಡೆ ನಿರ್ಮಾಣ ಹಂತದ ಕಾಮಗಾರಿಯ ಕಟ್ಟಡ ಹಿಂದೆ ಅವಿತಿರುವಂಥ ಸಿದ್ದಾಪುರದ ಬಸ್ ನಿಲ್ಧಾಣ ಕೊಚ್ಚೆಗುಂಡಿಯಂತಾಗಿದೆ. ಉತ್ತರಕನ್ನಡ ಜಿಲ್ಲೆಯ ಒಂದೆರಡು ಬಸ್ ನಿಲ್ದಾಣಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ 8-10 ಬಸ್ ನಿಲ್ಧಾಣಗಳ ಸ್ಥಿತಿ ಕೇಳುವುದೇ ಬೇಡ.
ಈ ಸಂದರ್ಭದಲ್ಲಿ ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಹೆಬ್ಬಾರ್ ಕನಿಷ್ಟಜಿಲ್ಲೆಯ ಬಸ್ ನಿಲ್ಧಾಣಗಳ ನಿರ್ಮಾಣ ಮಾಡಿ ಉತ್ತಮ ಹೆಸರು ಗಳಿಸಬಹುದಿತ್ತು. ಆದರೆ ಹೆಬ್ಬಾರ ಎಷ್ಟು ಅಧಿಕಾರ, ಅವಕಾಶ, ಹಣ ಅಂತಸ್ತಿನ ಹಿಂಎ ಬಿದ್ದಿದ್ದಾರೆಂದರೆ…… ಯಲ್ಲಾಪುರ ಶಾಸಕರಾಗಿರುವ ಅವರಿಗೆ ಅವರ ಕ್ಷೇತ್ರದ ಯಲ್ಲಾಪುರ,ಮುಂಡಗೋಡ ಬಸ್ ನಿಲ್ಧಾಣ, ಸಾರಿಗೆ ತೊಂದರೆ ಸರಿಪಡಿಸಲೇ ಸಮಯ, ಆಸಕ್ತಿ ಇಲ್ಲ.
ಇಂಥ ಹೆಬ್ಬಾರರ ತವರೂರು ಯಲ್ಲಾಪುರ ಬಸ್ ನಿಲ್ಧಾಣದಲ್ಲಿ ನಾಟಿ ಮಾಡಬೇಕೆಂದರೆ ಹೂಡಿ,ಹೊಡೆಯುವ ಅಗತ್ಯವೂ ಇಲ್ಲ. ಅಂಥ ಕೆಸರುಗುಂಡಿಯಾಗಿರುವ ಬಸ್ ನಿಲ್ಧಾಣದಲ್ಲಿ ಓಡಾಡುವುದು,ವಿಶ್ರಾಂತಿ ಪಡೆಯುವುದು ಕನಸಿನ ಮಾತು.
ಮಗ ವಿವೇಕ ಹೆಬ್ಬಾರ್ ರಕ್ಷಣೆಗಾಗಿ ಶಿವರಾಮ ಬಿ.ಜೆ.ಪಿ. ಸೇರುವ ಅನಿವಾರ್ಯತೆಯಲ್ಲಿದ್ದಾರೆ ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಅವರಿಗೆ ದೇಶಪಾಂಡೆ, ಅನಂತ ಹೆಗಡೆ, ಕಾಗೇರಿಯಂಥವರಿಂದ ಕಿರುಕುಳ ಹಾಗಾಗಿ ಅವರು ಸ್ವಾತಂತ್ರ್ಯ ಬಯಸಿ ಬಿ.ಜೆ.ಪಿ.ಕಡೆ ಹೊರಟಿದ್ದಾರೆ ಎನ್ನುವವರಿದ್ದಾರೆ. ಕಾಂಗ್ರೆಸ್ ಮತ್ತು ಹೆಬ್ಬಾರ್ ಹಿಂಬಾಲಕರಲ್ಲಿ ಬೆರಳೆಣಿಕೆಯ ಮುಖಂಡರನ್ನು ಹೊರತುಪಡಿಸಿದರೆ ಬಹುತೇಕ ಎಲ್ಲರೂ ಹೆಬ್ಬಾರ್ ಬಿ.ಜೆ.ಪಿ. ಹೆದರಿಕೆ,ಆಮಿಷಕ್ಕೆ ಬಲಿಯಾಗಿರುವುದನ್ನು ವಿರೋಧಿಸುವವರೇ ಹೆಚ್ಚು.
ಕೆಲವರಂತೂ ಕೊಟ್ಟ ಕುದುರೆ ಏರಲು ಬಾರದ ಹೆಬ್ಬಾರ್ ರಾಜಕಾರಣ ತ್ಯಜಿಸುವುದೇ ಒಳ್ಳೆಯದು ಎನ್ನುತಿದ್ದಾರೆ. ನಿವೃತ್ತಿ ಅಥವಾ ತ್ಯಾಗ ಅವರ ಆಯ್ಕೆ. ಆದರೆ ಮಧ್ಯಂತರದಲ್ಲಿ ಕೈ ಕೊಟ್ಟ ಹೆಬ್ಬಾರ್ ರನ್ನು ಜನತೆ ನಿವೃತ್ತಿ ಗೊಳಿಸಲು ಕಾಯುತ್ತಿರುವುದಂತೂ ಸತ್ಯ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *