ಪತ್ರಕರ್ತ ಎಂದರೆ ಜಸ್ಟ್ ವರದಿಗಾರ ಅಲ್ಲ


ಪತ್ರಕರ್ತನಾದವನಿಗೆ ಹೋರಾಟದ ಮನೋಭಾವವಿರಬೇಕು, ಸಾಹಿತ್ಯಕ, ಸಾಂಸ್ಕøತಿಕ ಕಾಳಜಿಯಿರಬೇಕು. ಪತ್ರಕರ್ತನಾದವ ಕಾಲಕ್ಕೆ ತಕ್ಕಂತೆ ಅಪ್‍ಗ್ರೇಡ್ ಆಗುತ್ತಾ ಹೋಗಬೇಕು. ಅಧ್ಯಯನ ಶೀಲನಾಗಿರಬೇಕು. ಅಂದಾಗ ಮಾತ್ರ ಶಬ್ಧ ಪ್ರಯೋಗ ಹಾಗೂ ಸಾಂದರ್ಭಿಕ ನುಡಿಗಟ್ಟುಗಳನ್ನು ಅರಿತು ಬರೆಯಲು ಸಾಧ್ಯವಾಗುತ್ತದೆ ಎಂದು ಹರಪನಳ್ಳಿಯ ಹಿರಿಯ ಸಾಹಿತಿ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ನುಡಿದರು.
ಅವರು ದಾಂಡೇಲಿ ಪ್ರೆಸ್ ಕ್ಲಬ್ ಹಮ್ಮಿಕೊಂಡಿದ್ದ ‘ಪತ್ರಿಕಾ ದಿನಾಚರಣೆ ಹಾಗೂ ಗೌರವ ಸನ್ಮಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಕರ್ತ ಎಂದರೆ ಕೇವಲ ವರದಿಗಾರಿಕೆ ಮಾಡುವುದಷ್ಟೇ ಅಲ್ಲ. ಸಮಾಜದೊಳಗಿರುವ ಆಗು ಹೋಗುಗಳ ಬಗ್ಗೆ ಜನರಿಗೆ ತಲುಪಿಸುವಂತಹ ಲೇಖನಗಳನ್ನು ಬರೆಯುವ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ತಳ ಸಮುದಾಯದ ಜನರ ಪ್ರಗತಿಗಾಗಿ ಲೇಖನಗಳ ಮೂಲಕ ಗಮನ ಸೆಳೆಯಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿ ಸಾಮರಸ್ಯದ ಬದುಕನ್ನು ಕಟ್ಟಿಕೊಡುವಂತಹ ಕೆಲಸವನ್ನು ಮಾಡಬೇಕು. ಇದೇ ಪತ್ರಕರ್ತನ ನಿಜವಾದ ಕೆಲಸ ಎಂದರು.
ಮುಖ್ಯ ಅತಿಥಿ ತಹಶೀಲದಾರ ಶೈಲೇಶ ಪರಮಾನಂದ ದಾಂಡೇಲಿ ಪ್ರೆಸ್‍ಕ್ಲಬ್ ಜನಪರ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಮಾತನಾಡಿ ಪತ್ರಕರ್ತನಾದವನ ಬದುಕು ಬಹಳ ಕಷ್ಟದ್ದು. ಆತ ತನ್ನ ಮೈಯ್ಯೆಲ್ಲಾ ಕಣ್ಣಾಗಿಸಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ. ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಪತ್ರಕರ್ತರಿಗೆ ಸರಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಒದಗಿಸುವಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ನಿರಂತರವಾಗಿ ಪ್ರಯತ್ನಿಸುತ್ತಲೇ ಬಂದಿದೆ. ದಾಂಡೇಲಿ ಪ್ರೆಸ್‍ಕ್ಲಬ್ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು, ಅದಕ್ಕೆ ಪತ್ರಿಕಾ ದಿನಾಚರಣೆಯ ದಿನ ಸೇರಿರುವ ಇಲ್ಲಿಯ ಜನರೇ ಒಂದು ನಿದರ್ಶನವಾಗಿದೆ ಎಂದರು. ವೆಸ್ಟ್‍ಕೋಸ್ಟ್ ಪೇಪರ್ ಮಿಲ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ. ಗಿರಿರಾಜ ಶುಭಾಶಯಕೋರಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಎಲ್ಲರ ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆಯ ಬರೆಯುವ ಪತ್ರಕರ್ತನಿಗೆ ನಿಜವಾಗಿಯೂ ಯಾವ ಭಧ್ರತೆಯೂ ಇರುವುದಿಲ್ಲ. ಆತನ ಬರಹಗಳೇ ಆತನಿಗೆ ನೈತಿಕ ಭದ್ರತೆಯಾಗಿರುತ್ತವೆ. ಆತನ ಲೇಖನಗಳಿಗೆ ಬರುವ ಪ್ರಶಂಸೆಗಳೇ ಆತನಿಗೆ ಪ್ರಶಸ್ತಿಗಳಾಗಿರುತ್ತವೆ. ಒಬ್ಬ ಪ್ರಾಮಾಣಿಕ ಪತ್ರಕರ್ತನಿಂದ ಎಲ್ಲರನ್ನೂ ಮೆಚ್ಚಿಸಿಕೊಂಡಿರಲು ಸಾದ್ಯವಿಲ್ಲ. ಎಲ್ಲ ರೀತಿಯ ವೈರುಧÀ್ಯಗಳನ್ನು ದಾಟಿ ಬರುವವನೇ ಗಟ್ಟಿಯಾದ ಪತ್ರಕರ್ತನಾಗಿ ನಿಲ್ಲಲು ಸಾದ್ಯ ಎಂದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ, ನಿವೃತ್ತ ಹಿರಿಯ ಶಿಕ್ಷಕಿ ಮರಿಯಾ ಪೆರರೋ, ಹಿರಿಯ ವೈದ್ಯ ಡಾ.ಎನ್.ಎ.ಖಾನ್‍ರನ್ನು ಸನ್ಮಾನಿಸಿ ಗೌರವಿಸಲಾಯಿತು. ಯು.ಎಸ್.ಪಾಟೀಲ ಸನ್ಮಾನಿತರ ಪರ ಅಭಿನಂದಿಸಿ ಮಾತನಾಡಿದರು.
ಮಾನಸಾ ಬಿ. ವಾಸರೆ ಪ್ರಾರ್ಥಿಸಿದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಸಂದೇಶ ಜೈನ್ ಸ್ವಾಗತಿಸಿ, ನಿರೂಪಿಸಿದರು. ಸದಸ್ಯ ಡಾ. ಬಿ.ಪಿ. ಮಹೇಂದ್ರಕುಮಾರ ಅತಿಥಿಗಳನ್ನು ಪರಿಚಯಿಸಿದರು.
ಖಜಾಂಚಿ ಗುರುಶಾಂತ ಜಡೇಹಿರೇಮಠ ವಂದಿಸಿದರು. ಸದಸ್ಯ ಕೃಷ್ಣಾ ಪಾಟೀಲ ಸಹಕರಿಸಿದರು. ವಿತರಕರಾದ ರಿಯಾಜ ನವಲಗುಂದ, ಅಕ್ಷಯ ಗೋಸಾವಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಿರಸಿ, ಯಲ್ಲಾಪುರ, ಜೋಯಿಡಾ, ಹಳಿಯಾಳದ ಪತ್ರಕರ್ತ ಸಂಘಟನೆಯ ಪ್ರಮುಖರು ಸೇರಿದಂತೆ ನಗರದ ಜನಪ್ರತಿನಿಧಿಗಳು, ಸಾಹಿತಿಗಳು, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಭಾಗವಹಿಸಿದ್ದರು.

ಮಾಧ್ಯಮ ನೀತಿ ಸಂಹಿತೆ ಬದಲಾಗಲ್ಲ
ಧ್ವನಿ, ಅರಿವು ಇಲ್ಲದವರಿಗೆ ನ್ಯಾಯ ಕೊಡಿಸುವುದೇ ಮಾಧ್ಯಮಗಳ ಹೊಣೆ,ಕರ್ತವ್ಯಗಳಾಗಿದ್ದು ಅದು ಯಾವ ಕಾಲದಲ್ಲೂ ಬದಲಾಗದು ಎಂದಿರುವ ಹಿರಿಯ ಪತ್ರಕರ್ತ ಮೋಹನ ಹೆಗಡೆ ಮುದ್ರಣಮಾಧ್ಯಮ ಎಲ್ಲಾ ಸವಾಲುಗಳೊಂದಿಗೆ ಮುನ್ನುಗ್ಗುತ್ತಲೇ ತನ್ನ ವ್ಯಾಪ್ತಿ,ಪ್ರಾಮುಖ್ಯತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದಿದ್ದಾರೆ. ಸಿದ್ಧಾಪುರ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ನಡೆದ ತಾಲೂಕಾ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಮತ್ತು ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 2.5 ಲಕ್ಷ ಕೋಟಿ ಆರ್ಥಿಕ ವಹಿವಾಟು ಹೊಂದಿರುವ ಮಾಧ್ಯಮ ಕ್ಷೇತ್ರ ಅನೇಕರಿಗೆ ಜೀವನೋಪಾಯ ಒದಗಿಸಿದ್ದು ಅನೇಕರ ಶ್ರಮದಿಂದ ಎಲ್ಲಾ ಬದಲಾವಣೆಗಳಿಗೆ ಒಗ್ಗಿಕೊಂಡು ಭಾರತದಲ್ಲಿ ಭರವಸೆ ಉಳಿಸಿಕೊಂಡಿದೆ ಎಂದರು. ಮೋಹನ ಹೆಗಡೆಯವರೊಂದಿಗೆ ಸ್ಥಳಿಯ ಪತ್ರಿಕಾ ವಿತರಕರಾದ ಮಾರುತಿ ನಾಯ್ಕ ಮತ್ತು ವಸಂತ ಮಡಿವಾಳರನ್ನು ಸನ್ಮಾನಿಸಿ ಗೌರವಿಸಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *