

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 29ನೇ ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ದಿನಾಂಕ 18/7/19 ರಂದು “ಪ್ರಯೋಗಗೋಷ್ಠಿ” ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ಘಂಟೆಗೆ ಆರಂಭವಾಗುವ ಗೋಷ್ಠಿಯಲ್ಲಿ ವೇ|| ಬ್ರ|| ನಾರಾಯಣ ಭಟ್ಟ ಮೊಟ್ಟೇಪಾಲ ಇವರು ‘ಪೂಜಾದಿವಿಚಾರ’ವನ್ನು ಕುರಿತು ಮಾತನಾಡಲಿದ್ದಾರೆ. ಆಸ್ಥಾನ ವಿ|| ಶ್ರೀ ಭಾಲಚಂದ್ರ ಶಾಸ್ತ್ರಿಗಳವರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳುವರು.
ಹಿರಿಯ ವಿದ್ವಾಂಸರ ಉಪಸ್ಥಿತಿಯಲ್ಲಿ ಬೆಳಗಿ£ಂದ ಸಾಯಂಕಾಲದ ವರೆಗೆ ಗೋಷ್ಠಿಯಲ್ಲಿ ಪೂಜೆಯ ಕುರಿತಾದ ವಿಷಯಗಳು ಚರ್ಚೆಯಾಗಲಿದೆ. ಮಧ್ಯಾಹ್ನ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದಿವ್ಯಸಾ£್ನಧ್ಯವಿತ್ತು ಆಶೀರ್ವಚನ £ೀಡಲಿದ್ದಾರೆ. ಈ ಗೋಷ್ಠಿಗೆ ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದು ಕೊಳ್ಳಬೇಕಾಗಿ ಕೋರಲಾಗಿದೆ.
