

ನಾಣಿಕಟ್ಟಾ ಕಾಲೇಜಿನಲ್ಲಿ ವಿದ್ಯಾರ್ಥಿಸಂಸತ್ತಿಗೆ ಚುನಾವಣೆ
ರಮಾನಂದ ಟಿ ಗೌಡ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ
ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಯಿತು.
ಅಧಿಸೂಚನೆ ಹೊರಡಿಸುವುದರಿಂದ ಪ್ರಾರಂಭಗೊಂಡು ನಾಮಪತ್ರ ಸಲ್ಲಿಕೆ, ಪರಿಶೀಲನೆ, ಅಭ್ಯರ್ಥಿಗಳಿಗೆ ಚಿಹ್ನೆ ನೀಡುವುದು, ಮತ ಪತ್ರ ಮುದ್ರಣ, ಮತಗಟ್ಟೆ ಅಧಿಕಾರಿಗಳ ನೇಮಕ, ಚುನಾವಣೆ, ಮತ ಎಣಿಕೆ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸಲಾಯಿತು.
ಉ.ಕ.ಜಿಲ್ಲಾ ಪ.ಪೂ.ಶಿ.ಇಲಾಖೆಯ ಉಪನಿರ್ದೇಶಕ ಎಂ.ಜಿ.ಪೋಳ ವೀಕ್ಷಕರಾಗಿ ಆಗಮಿಸಿದ್ದರು. ಪ್ರಭಾರ ಪ್ರಾಚಾರ್ಯ ಎಂ.ಕೆ.ನಾಯ್ಕ ಚುನಾವಣಾ ಅಧಿಕಾರಿಯಾಗಿ, ಉಪನ್ಯಾಸಕರಾದ ಓಂಕಾರಪ್ಪ ಸಿ ವಿ (ರಿಟರ್ನಿಂಗ ಅಧಿಕಾರಿ) ನಾಗವೇಣಿ ನಾಯ್ಕ , ಶ್ರೀನಿವಾಸ ನಾಗರಕಟ್ಟೆ, ಮಾಲಾ ಎ, ಎ.ಎಲ್.ನಾಯ್ಕ ಮತ್ತು ಶೈಲಾ ಹೆಗಡೆ, (ಮತಗಟ್ಟೆ ಅಧ್ಯಕ್ಷಾಧಿಕಾರಿಗಳು) ಎಂ ಆಯ್ ಹೆಗಡೆ, ಎಂ ಎಂ ಭಟ್ಟ, ಆನಂದ ಡಿ.ಕೆ. ತನುಜಾ ನಾಯ್ಕ(ಮತಗಟ್ಟೆ ಅಧಿಕಾರಿಗಳು) ಕಾರ್ಯನಿರ್ವಹಿಸಿದರು.
ವಿದ್ಯಾರ್ಥಿಗಳಾದ ಮಧುರಾ ಎಂ ನಾಯ್ಕ, ಜಾನಕಿ ಗೌಡ, ತನುಶ್ರೀ.ಕೆ., ಯಶೋದಾ ಗೌಡ,ಲಿಖಿತಾ ನಾಯ್ಕ ಮತಗಟ್ಟೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿ ಮತದಾರರು ಉತ್ಸಾಹದಿಂದ ಗುಪ್ತಮತದಾನದಲ್ಲಿ ಪಾಲ್ಗೊಂಡರು. ಪ್ರಥಮ ಪಿಯುಸಿ ಕಲಾ ವಿಭಾಗದಿಂದ ಚೈತನ್ಯಾ ಎಂ.ಎನ್., ವಾಣಿಜ್ಯ ವಿಭಾಗದಿಂದ ದಿವ್ಯಾ ಮಂಜುನಾಥ ನಾಯ್ಕ, ವಿಜ್ಞಾನ ವಿಭಾಗದಿಂದ ದೀಕ್ಷಿತಾ ಯು. ನಾಯ್ಕ, ದ್ವಿತೀಯ ಪಿಯುಸಿ ಕಲಾ ವಿಭಾಗದಿಂದ ಸೌಮ್ಯಾ ಗಣಪತಿ ನಾಯ್ಕ, ವಾಣಿಜ್ಯ ವಿಭಾಗದಿಂದ ರಮಾನಂದ ಟಿ ಗೌಡ ಚುನಾವಣೆಯ ಮೂಲಕ ಆಯ್ಕೆಯಾದರೆ, ಪ್ರಥಮ ಪಿಯುಸಿ ಕಲಾ ವಿಭಾಗದಿಂದ ಪ್ರಜ್ವಲ್ ಧರ್ಮಾ ನಾಯ್ಕ, ವಾಣಿಜ್ಯ ವಿಭಾಗದಿಂದ ಪುನೀತ್ ಎಸ್ ನಾಯ್ಕ, ವಿಜ್ಞಾನ ವಿಭಾಗದಿಂದ ಪುರುಷೋತ್ತಮ ಆಯ್ ನಾಯ್ಕ, ದ್ವಿತೀಯ ಪಿಯುಸಿ ಕಲಾ ವಿಭಾಗದಿಂದ ಗಜಾನನ ಗೊಂಡ,ವಾಣಿಜ್ಯ ವಿಭಾಗದಿಂದ ಸ್ನೇಹಾ ಟಿ ಮಡಿವಾಳ, ವಿಜ್ಞಾನ ವಿಭಾಗದಿಂದ ವಿಜೇತಗೌಡ ಮತ್ತು ತನುಶ್ರೀ ಕ. ಅವಿರೋಧವಾಗಿ ಆಯ್ಕೆಯಾದರು.
ನಂತರ ನಡೆದ ಆಯ್ಕೆಯಾದ ಪ್ರತಿನಿಧಿಗಳ ಸಭೆಯಲ್ಲಿ ರಮಾನಂದ ಟಿ. ಗೌಡ ಸಂಸತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಳಿದ ಪ್ರತಿನಿಧಿಗಳು ನಾನಾ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದು ಕಾಲೇಜು ಸಂಸತ್ತಿನ ಉದ್ಘಾಟನೆಯ ವೇಳೆಯಲ್ಲಿ ಕರ್ತವ್ಯದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆ ಮತ್ತು ಮತದಾನದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿ ಸಂಸತ್ತಿನ ಈ ಚುನಾವಣೆ ಸಾಕ್ಷೀಕರಿಸಿತು.

