

ಸಿದ್ಧಾಪುರ ತಾಲೂಕಿನ ಅಕ್ಕುಂಜಿಯಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲುಗಡೆಗೆ ಸ್ಥಳಿಯರು ಆಗ್ರಹಿಸಿದ್ದಾರೆ. ಸಾಗರ,ಶಿರಸಿ ಮಾರ್ಗದ ಸಿದ್ಧಾಪುರ ಕಾವಂಚೂರು ಗ್ರಾಮ ಪಂಚಾಯತ್‍ನ ಅಕ್ಕುಂಜಿ ಗ್ರಾಮಸ್ಥರು ಮತ್ತು ಅಲ್ಲಿಗೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಕಣ್ಣೆದುರೇ ನೂರಾರು ಬಸ್ ಗಳು ಓಡಾಡಿದರೂ ಆ ಬಸ್ ಗಳಲ್ಲಿ ಸಂಚರಿಸುವ ಭಾಗ್ಯವಿಲ್ಲ.
ತಡೆರಹಿತ ಬಸ್ ಗಳು ಸೇರಿದಂತೆ ಸಿಟಿ. ಇಂಟರ್ ಸಿಟಿಬಸ್ ಗಳು ಇಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಈ ಗ್ರಾಮದ ಜನರು ದೂರದ ಕಾಂವಚೂರಿಗೆ ನಡೆದು ತೆರಳಬೇಕು. ಜನಸಾಮಾನ್ಯರೊಂದಿಗೆ, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಎದುರಿಗೆ ಬಸ್ ಹೋದರೂ ದೂರದ ಬಸ್ ನಿಲ್ದಾಣಗಳ ವರೆಗೆ ನಡೆದು ಹೋಗಿ ಅಥವಾ ಖಾಸಗಿ ವಾಹನಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಈ ಭಾಗಕ್ಕಿದೆ. ಹಾಗಾಗಿ ಶಿರಸಿ ಮತ್ತು ಸಾಗರ ಡಿಪೊಗಳಿಂದ ಬರುವ ಬಸ್ ಗಳು ಕಡ್ಡಾಯವಾಗಿ ಇಲ್ಲಿ ನಿಲುಗಡೆ ಮಾಡುವಂತೆ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿಯ ಸ್ಥಳಿಯರು ಸಂಬಂಧಿಸಿದವರನ್ನು ಆಗ್ರಹಿಸಿದ್ದಾರೆ.
ಇದೇ ತಿಂಗಳಲ್ಲಿ ತಡೆರಹಿತ ಮತ್ತು ತಡೆಸಹಿತ ಸಾರಿಗೆ ವಾಹನಗಳು ಈ ಬಸ್ ನಿಲ್ಧಾಣದಲ್ಲಿ ನಿಲುಗಡೆಆಗದಿದ್ದರೆ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸ್ಥಳಿಯರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಲ್ಲಿಯ ಗ್ರಾಮಸಮಿತಿ ಎಚ್ಚರಿಸಿದೆ.
ಶಿರಸಿ ಡಿಪೋ ಬಸ್ ಗಳು ಅಲ್ಲಿ ನಿಲ್ಲುತ್ತವೆ. ತಡೆರಹಿತ ಬಸ್ ಗಳು ಮತ್ತು ಸಾಗರ ಡಿಪೋ ಬಸ್ ಗಳು ಅಲ್ಲಿ ನಿಂತು ತೆರಳುತ್ತಿಲ್ಲ ಎಂದು ಸಾರಿಗೆ ಸಂಸ್ಥೆ ಮೂಲಗಳು ಮಾಹಿತಿ ನೀಡಿವೆ.
ಸಾರ್ವಜನಿಕರಿಗೆ ದೂರಸ್ಥ ಶಿಕ್ಷಣದ ಮೂಲಕ ಸಂಸ್ಕೃತ
ರಾಷ್ಟ್ರಿಯ ಸಂಸ್ಕೃತ ಸಂಸ್ಥಾನಮ್ ಮಾನಿತ ವಿಶ್ವವಿದ್ಯಾಲಯದ ರಾಜೀವಗಾಂಧೀ ಪರಿಸರ, ಸ್ವಾಧ್ಯಾಯಕೇಂದ್ರಮ್, ಮುಕ್ತಸ್ವಾಧ್ಯಾಯಪೀಠಮ್, ಶೃಂಗೇರಿ ವತಿಯಿಂದ 2019-2020 ನೇ ಸಾಲಿನಲ್ಲಿ ದೂರಸ್ಥ ಶಿಕ್ಷಣದ ಮೂಲಕ ಸಂಸ್ಕøತ ಕಲಿಯಬಯಸುವವರಿಗೆ ಆರು ತಿಂಗಳ ಅವಧಿಯ ಪ್ರಾಕ್‍ಶಾಸ್ತ್ರಿಸೇತು (ಸಂಸ್ಕøತಾವತರಣೀ) ಹಾಗೂ ಒಂದು ವರ್ಷದ ಅವಧಿಯ ಶಾಸ್ತ್ರಿಸೇತು (ಸಂಸ್ಕøತಾವಗಾಹನೀ) ಪಾಠ್ಯಕ್ರಮದ ವ್ಯವಸ್ಥೆ ಕಲ್ಪಿಸಲಾಗಿದ್ದು ಯಾವುದೇ ಉದ್ಯೋಗದಲ್ಲಿರುವವರು, ಗೃಹಸ್ಥರು, ಗೃಹಿಣಿಯರು ತಾಂತ್ರಿಕ/ವೈದ್ಯಕೀಯ/ಆಯರ್ವೇದ ವಿದ್ಯಾರ್ಥಿಗಳು ಅಥವಾ ಯಾರೇ ಆಸಕ್ತರು ಕೂಡ ಈ ಶಿಕ್ಷಣವನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಇದೇ ತಿಂಗಳು 31 ರ ಒಳಗಾಗಿ 9968403772 ದೂರವಾಣಿಗೆ ಕರೆ ಮಾಡಿ ವಿವರವನ್ನು ತಿಳಿದುಕೊಳ್ಳಬೇಕಾಗಿ ಕೋರಲಾಗಿದೆ.
ಅಂತರ್ಜಾಲದ ಮೂಲಕ ತಮ್ಮ ಹೆಸರನ್ನು ನೋಂದಾಯಿಸುವವರು ತಿತಿತಿ.msಠಿ.ಡಿsಞs.iಟಿ ಸಂಪಕಿರ್Àಸಬಹುದು ಎಂದು ಸ್ವಾಧ್ಯಾಯಕೇಂದ್ರದ ಸಂಯೋಜಕ ವೆಂಕಟೇಶಮೂರ್ತಿಯವರು ತಿಳಿಸಿರುತ್ತಾರೆ.
