

ಹುಚ್ಚಪ್ಪಮಾಸ್ತರ್ ಎಂದೇ ಖ್ಯಾತರಾಗಿದ್ದ ಸಾಗರದ ಕುಗ್ವೆಯ ಜಾನಪದ ತಜ್ಞ ಹುಚ್ಚಪ್ಪ ಇಂದು ನಿಧನರಾಗಿದ್ದಾರೆ.
ಬುಡಕಟ್ಟು,ಅಲೆಮಾರಿ ಮಕ್ಕಳ ಶಿಕ್ಷಣ, ಜಾನಪದ ಅಧ್ಯಯನ, ಸಂಶೋಧನೆ,ದಾಖಲೀಕರಣಗಳ ಮೂಲಕ ಮಲೆನಾಡಿನ ನೆಲಮೂಲದ ಸಂಸ್ಕøತಿಯ ಅನನ್ಯತೆಗಳನ್ನು ದಾಖಲಿಸಿ, ತಬ್ಬಲಿ ಜಾತಿಗಳ ಶ್ರೋಯೋಭಿವೃದ್ಧಿಗೆ ಶ್ರಮಿಸಿದ್ದ ಹುಚ್ಚಪ್ಪ ಕನ್ನಡ ಮತ್ತು ಕರ್ನಾಟಕ ಜಾನಪದದ ಪ್ರಮುಖ ಶಕ್ತಿಯಾಗಿದ್ದರು.
ಸಾಗರ,ಸೊರಬ ಸೇರಿದಂತೆ ಶಿವಮೊಗ್ಗ, ಉತ್ತರಕನ್ನಡ, ಮಂಗಳೂರು ಜಿಲ್ಲೆಗಳ ಜಾನಪದದ ಜ್ಞಾನಕೋಶದಂತಿದ್ದ ಹುಚ್ಚಪ್ಪ ಕಾಳೇಗೌಡ ನಾಗವಾರ,ಹಿ.ಚಿ.ಬೋರಲಿಂಗಯ್ಯ ಸೇರಿದಂತೆ ದೇಶದ ಜಾನಪದ ಮತ್ತು ದೇಶೀ ಸಾಹಿತ್ಯದ ಪ್ರಮುಖರ ಒಡನಾಡಿಯಾಗಿ ಜಾನಪದ ಕ್ಷೇತ್ರ ಮತ್ತು ಸಾಹಿತ್ಯದ ಕೃಷಿ ಮೂಲಕವೇ ಪ್ರಸಿದ್ಧಿ, ಮನ್ನಣೆ ಪಡೆದಿದ್ದ ಅವರು ಅಪಾರ ಅಭಿಮಾನಿಗಳು, ಶಿಷ್ಯರು, ಸಂಬಂಧಿಗಳನ್ನು ಬಿಟ್ಟು ಅಗಲಿದ್ದಾರೆ.
ಝೇವಿಯರ್ ರುಜಾರ್ ಫರ್ನಾಂಡಿಸ್ ನಿಧನ
ಹಿರಿಯ ಸಾಮಾಜಿಕ ಕಾರ್ಯಕರ್ತ ಝೇವಿಯರ್ ರುಜಾರ್ ಫರ್ನಾಂಡಿಸ್(79) ಮಂಗಳವಾರ ಸಂಜೆ ಸಿದ್ಧಾಪುರ ಪಟ್ಟಣದ ರವೀಂಧ್ರನಗರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಈ ಹಿಂದೆ ಸ್ಥಳೀಯ ಕ್ಯಾಥೋಲಿಕ್ ಚರ್ಚಿನ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರದಲ್ಲೂ ಚರ್ಚನ ಹಾಗೂ ಚರ್ಚ ಕಾಂಪ್ಲೆಕ್ಸನ ಅಭಿವೃದ್ಧಿಯಲ್ಲಿ ಸಕ್ರೀಯರಾಗಿದ್ದರು.
ಪರಿಣಿತ ಟೈಲರ್ ಕೂಡ ಆಗಿದ್ದ ಅವರು ವಿದೇಶಗಳಲ್ಲೂ ಕಾರ್ಯನಿರ್ವಹಿಸಿದ್ದರು. ಎಲ್ಲ ಸಮಾಜದ ಜನರ ಜೊತೆ ಉತ್ತಮ ಬಾಂಧವ್ಯ, ಆತ್ಮೀಯತೆ ಇಟ್ಟುಕೊಂಡಿದ್ದ ಅವರು ಜನಾನುರಾಗಿಯಾಗಿದ್ದರು. ಅವರ ಅಂತ್ಯಕ್ರಿಯೆ ಜು.18ರಂದು ನಡೆಯಲಿದೆ.
