ಹುಚ್ಚಪ್ಪ ಮಾಸ್ತರ್ ಹರ್ಷದ ನೆನಪು

ನಿನ್ನೆ ರಾತ್ರಿ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಇನ್ನಿಲ್ಲವಾದರು ಎಂಬ ಸುದ್ದಿ ಬಂತು..

ವಾರದ ಕೆಳಗೆ ಅಪ್ಪನೊಂದಿಗೆ ಹಾಸಿಗೆ ಹಿಡಿದಿದ್ದ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಅವರನ್ನು ನೋಡಲು ಹೋದಾಗ ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಅಪ್ಪನನ್ನು ನೋಡಿದ್ದೇ ಗದ್ಗದಿತರಾಗಿದ್ದರು. ಅವರ ಅಂತಹ ಅನಾರೋಗ್ಯ ಸ್ಥಿತಿಯಲ್ಲೂ ಗಟ್ಟಿ ಧ್ವನಿಯಲ್ಲಿ ಮಾತಾಡಿದ ಅವರು, “ಉತ್ತರ ಕರ್ನಾಟಕದ ಸಣ್ಣಾಟಗಳು” ಅನ್ನುವ ಪುಸ್ತಕ ಬರೆದಿದ್ದೀನಿ ಎಂದರು. ನನ್ನನ್ನು ಕುರಿತು, “ಹರ್ಷಾ ನೀನು ಮತ್ತೇನು ಬರೆದೆ?” ಎಂದು ಕೇಳಿದರು. ಮತ್ತೆ ತಾವೇ ಮಾತು ಮುಂದುವರೆಸುತ್ತಾ, “ಮಲೆನಾಡಿನ ಗ್ರಾಮದೇವತೆಗಳು” ಎಂಬ ಪುಸ್ತಕ ಅರ್ಧ ಆಗಿದೆ, ಅದಕ್ಕೆ ಎಲ್ಲಾ ಫೀಲ್ಡ್ ಸ್ಟಡಿ ಮಾಡಿದ್ದು ಹಾಗೇ ಇದೆ… ಯಲಕುಂದ್ಲಿ ಬಳಿ ರಾಚಮ್ಮ, ದುರ್ಗಮ್ಮ ಹೀಗೆ ಎಂದು ನೆನಪಿಸಿಕೊಂಡು ಮಾತಾಡತೊಡಗಿದರು. ಅವರ ತೀವ್ರ ಅನಾರೋಗ್ಯ ಸ್ಥಿತಿಯಲ್ಲೂ ತಮ್ಮ ಓದು-ಬರವಣಿಗೆಗಳ ಬಗ್ಗೆ ಕನಸುತ್ತಿದ್ದ ರೀತಿ ಕಂಡು ನಮಗೆ ಆಶ್ಚರ್ಯ ದುಃಖ ಎರಡೂ ಆಯಿತು. ಕೊನೆಗೆ ಅಪ್ಪ, ಅವರ ಮಾತುಗಳಿಗೆ ತಾನೂ ಒಂದಷ್ಟು ಸೇರಿಸಿ, “ನಿನ್ನ ಅಧ್ಯಯನವನ್ನು ಒಂದು ಪುಸ್ತಕ ಮಾಡ್ತೀನಿ, ನಮ್ಮ ಜಾನಪದ ಕಣಜದಿಂದಲೇ ಪ್ರಕಟಣೆ ಮಾಡೋಣ, ಯೋಚನೆ ಮಾಡಬೇಡ” ಎಂದರು….

ನಾವೆಲ್ಲ ಚಿಕ್ಕವರಿದ್ದಾಗಲೇ ತಾಳಗುಪ್ಪ ಸಮಿಪದ ಹಿರೇಮನೆ ಎಂಬ ಊರಿನಲ್ಲಿ ಗಿರಿಜನ ವಸತಿ ಶಾಲಯಲ್ಲಿ ಮೇಸ್ಟ್ರಾಗಿ ನೇಮಕಗೊಂಡು ಅಲ್ಲಿಯೇ ನೆಲೆಸಿದ್ದ ಹುಚ್ಚಪ್ಪ ಮಾಸ್ತರ ಅವರು ನಾಡು ಕಂಡ ಅಪರೂಪದ ಜಾನಪದ ವಿದ್ವಾಂಸ. ಅದ್ಭುತ ಹಾಡುಗಾರ. ಒಂದು ಕಾಲದಲ್ಲಿ ಮಲೆನಾಡು ಸೀಮೆಯಲ್ಲಿ ಜಾನಪದ ಕ್ರಾಂತಿಯನ್ನೇ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಜಾನಪದ ರಂಗಸಂಕುಲ ಕುಗ್ವೆ ಎಂಬ ಸಂಘಟನೆ ಕಟ್ಟಿಕೊಂಡು, ಹಳ್ಳಿಗಳ ಹುಡುಗರಿಗೆ ತರಬೇತಿ ನೀಡಿ ಕೋಲಾಟದ ಹುಚ್ಚು ಹಿಡಿಸಿದ್ದರು. ಪತ್ತಾರ ಮಾಸ್ತರರ ಸಂಗ್ಯಾ ಬಾಳ್ಯಾ ಸಂಗೀತ ನಾಟಕವನ್ನು ಹೆಗ್ಗೋಡಿನ ಕೆ ವಿ ಸುಬ್ಬಣ್ಣ ಮೊದಲ ಸಲ ನಿರ್ದೇಶನ ಮಾಡಿದಾಗ ಇಡೀ ನಾಟಕದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ, ತಮ್ಮ ವಿಶಿಷ್ಟ ದಾಟಿಯಲ್ಲಿ ನಮ್ಮ ಭಾಗದಲ್ಲಿ ಜನಪ್ರಿಯತೆ ಉತ್ತುಂಗಕ್ಕೆ ಕೊಂಡೊಯ್ದರು. ನನ್ನ ಮತ್ತೊಬ್ಬ ದೊಡ್ಡಪ್ಪ – ಹುಚ್ಚಪ್ಪ ಮಾಸ್ತರ ಅವರ ತಮ್ಮ- ದಿವಂಗತ ಹನುಮಂತಪ್ಪ ಆಗ ಇವರೊಂದಿಗೆ ಹಾಡುಗಾರಿಕೆ ನಡೆಸುತ್ತಿದ್ದುದು ನನಗಿನ್ನೂ ನೆನಪಿದೆ. ಚಿಕ್ಕವನಾಗಿದ್ದ ನನಗೆ ಕಿರಿ ದೊಡ್ಡಪ್ಪ ಬಂದು ಸಂಗ್ಯಾ – ಬಾಳ್ಯಾ ನಾಟಕದ ಹಾಡುಗಳನ್ನು ಹಾಡುವುದನ್ನು ಕಲಿಸುತ್ತಿದ್ದರು. ಅಣ್ಣನಂತೆಯೇ ತಾನೂ ಅದ್ಭುತವಾಗಿ ಹಾಡುತ್ತಿದ್ದ ಹನುಮಂತಪ್ಪ ಅವರಿಗೆ ನಾನೂ ಹಾಡು-ಜಾನಪದಗಳಲ್ಲಿ ತೊಡಗಿಕೊಳ್ಳಬೇಕೆಂಬ ಬಯಕೆಯಿತ್ತು. ಆದರೆ ನಾನು ಪಿಯುಸಿಯಲ್ಲಿದ್ದಾಗಲೇ ಅವರು ಹೃದಯಾಘಾತದಿಂದ ನಿಧನರಾಗಿದ್ದು ನನಗೆ ಬದುಕು ನೀಡಿದ್ದ ದೊಡ್ಡ ಆಘಾತವಾಗಿತ್ತು.

ಹುಚ್ಚಪ್ಪ ಮಾಸ್ತರ ಅವರ ಹಾಡುಗಾರಿಕೆ ಅನನ್ಯವಾಗಿತ್ತು. ಸೋಬಾನೆ ಹಾಡುಗಳನ್ನು ಅವರು ಹಾಡತೊಡಗಿದರೆ ಅವರ ಕಂಠಸಿರಿಗೆ ಮರುಳಾಗದವರು ಯಾರೂ ಇರಲಿಲ್ಲ. ದುರದೃಷ್ಟವಶಾತ್ ಅವರ ಹಾಡುಗಾರಿಕೆಯ ಧ್ವನಿಮುದ್ರಣ ಲಬ್ಯವಿಲ್ಲವಾಗಿದೆ. ಹಾಡುಗಾರಿಕೆಯಲ್ಲಿ ಅವರಿಗೆ ಯಾವಾಗಲೂ ಸಾಥ್ ನೀಡುತ್ತಿದ್ದುದು ದೊಡ್ಡಮ್ಮ ಗೌರಮ್ಮ. ಚಿತ್ತಾರ ಬರೆಯುವುದರಲ್ಲಿಯೂ ಸಿದ್ಧಹಸ್ತರಾಗಿರುವ ಗೌರಮ್ಮ ಹುಚ್ಚಪ್ಪ ಮಾಸ್ತರ್ ಅವರ ಎಲ್ಲಾ ಸಾಧನೆಗಳ ಹಿಂದಿನ ಶಕ್ತಿಯಾಗಿರುವ ಗಟ್ಟಿ, ದಿಟ್ಟ ಮಹಿಳೆ.

ಕಳೆದ ಎಂಟತ್ತು ವರ್ಷಗಳ ಈಚೆಗೆ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಅವರೊಂದಿಗೆ ಹಲವು ಸಂದರ್ಭಗಳಲ್ಲಿ ಮಾತುಕತೆಯಾಡುವ ಅವಕಾಶ ನನಗೆ ಸಿಕ್ಕಿತ್ತು. ಈ ನಿಕಟ ಸಂಪರ್ಕದಲ್ಲಿ ಜಾನಪದ, ಸಂಸ್ಕೃತಿ ಚಿಂತನೆಗಳಲ್ಲಿ ಅವರ ತಿಳುವಳಿಕೆ ಕಂಡು ನನಗಾಗಿರುವ ಸಂತೋಷ ಅಷ್ಟಿಷ್ಟಲ್ಲ.. ನಾನು ಬರೆದ ಯಾವುದಾದರೂ ಲೇಖನ ಪತ್ರಿಕೆಗಳಲ್ಲಿ ಓದಿರುತ್ತಿದ್ದ ಅವರು ನೆನಪಿಟ್ಟುಕೊಂಡು ನನ್ನ ಬರವಣಿಗೆ ಕುರಿತು ಸಹ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಜನಮಾನಸದಲ್ಲಿ ಸಾಂಸ್ಕೃತಿಕ ವಿವೇಕ ಜಾಗೃತವಾಗಬೇಕು ಎಂದು ಸದಾ ಬಯಸುತ್ತಿದ್ದ ಅವರು ತಮ್ಮ ಓದು, ಓಡಾಟಗಳಲ್ಲಿ ತಾವು ದಕ್ಕಿಸಿಕೊಂಡಿರುವ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸಬೇಕು ಎಂಬ ತೀವ್ರ ಹಂಬಲ ಹೊಂದಿದ್ದರು. ಈ ನಿಟ್ಟಿನಲ್ಲಿ ಕಳೆದ ಒಂದು ದಶಕದಲ್ಲಿ ಅವರು ಹಸಲರ ಬುಡಕಟ್ಟಿನ ಕುರಿತು ಬರೆದ ಒಂದು ಕೃತಿ, ದೀವರ ಸಮುದಾಯದ ಬಗ್ಗೆ ಬರೆದ ಕೃತಿಗಳು, ಕಾಗೋಡು ಸತ್ಯಾಗ್ರಹದ ಕುರಿತು ಸಂಪಾದಿತ ಕೃತಿ ಪ್ರಕಟವಾಗಿವೆ. ಜಾನಪದ ಹಾಗೂ ಸಂಸ್ಕೃತಿ ಚಿಂತನೆಗಳ ಕುರಿತ ಅಪರೂಪದ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಪುಸ್ತಕಗಳ ನಿರ್ವಹಣೆ ಇರಲಿ, ಅವರ ಓದು, ಬರೆಹ ಯಾವುದರಲ್ಲೇ ಇರಲಿ ಅತ್ಯಂತ ಶಿಸ್ತಿನ ಜೀವನ ನಡೆಸಿ ತಮ್ಮ ಜೀವನ ಪಯಣವನ್ನು ಮುಗಿಸಿದ್ದಾರೆ. 
ಜಾನಪದ-ಸಂಸ್ಕೃತಿ ವಿದ್ವಾಂಸರಾಗಿ, ಪ್ರಗತಿಪರ ಚಿಂತಕರಾಗಿ ತಾವು ಬಿಟ್ಟು ಹೋದ ಪರಂಪರೆ-ಚಿಂತನೆಗಳ ಮೂಲಕ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಯಾವತ್ತೂ ನಮ್ಮೊಂದಿಗೆ ಜೀವಿಸುತ್ತಿರುತ್ತಾರೆ. 
ದೊಡ್ಡಪ್ಪ ತೋರುತ್ತಿದ್ದ ಕಕ್ಕುಲಾತಿ, ಅಭಿಮಾನ ಯಾವತ್ತೂ ನನ್ನಲ್ಲಿ ಅಚ್ಚಳಿಯದೇ ಇರುತ್ತದೆ.

-ಹರ್ಷಕುಮಾರ ಕುಗ್ವೆ,ಸಾಗರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *