

ಸಣ್ಣ ನೀರಾವರಿ, ಜಲಾನಯನ ಇಲಾಖೆಗಳ ಸರಣಿ ಹಗರಣ-
ಶಾಸಕರು,
ಸಂಸದರು, ಸಚಿವರ ಕಣ್ಣಿಗೆ ಮಣ್ಣೆರಚಿದರೆ ಅಧಿಕಾರಿಗಳು?
ಸಿದ್ಧಾಪುರದ ಆಸ್ಫತ್ರೆ ನಿರ್ವಹಣೆಯ ಶಾಸಕರ ಅಧ್ಯಕ್ಷತೆಯ ಆರೋಗ್ಯ ಸಮೀತಿಯಲ್ಲಿ ಅಗತ್ಯದಷ್ಟು ಹಣವಿಲ್ಲ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಕ್ರೀಯಾ ಯೋಜನೆ ಯಾರು ಮಾಡಿದರು ಎನ್ನುವ ಪ್ರಶ್ನೆ ನಿನ್ನೆ ಸಿದ್ಧಾಪುರ ತಾ.ಪಂ. ನಲ್ಲಿ ನಡೆದ ತಾ.ಪಂ. ಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಚರ್ಚೆಯಾಗಿದೆ.
ಸಭೆಗೆ ಮಾಹಿತಿ ನೀಡಿದ ತಾಲೂಕಾ ಆಸ್ಫತ್ರೆ ವೈದ್ಯಾಧಿಕಾರಿ ಡಾ ಶ್ರೀನಿವಾಸ್ ತಾಲೂಕಾ ಆಸ್ಫತ್ರೆಯಲ್ಲಿ ಡಯಾಲಿಸಿಸ್ ಗೆ ಕೊಡಬೇಕಾದ ಚುಚ್ಚುಮದ್ದಿನ ಹಣ ಮತ್ತು ಇತರ ನಿರ್ವಹಣೆಯ ಅನುದಾನದ ಕೊರತೆಯಾಗುತ್ತಿದೆ. ಅದಕ್ಕೆ ಹೆಚ್ಚಿನ ಹಣ ನೀಡಿ ಎನ್ನುವ ಬೇಡಿಕೆ ಇಟ್ಟರು.
ಇತರ ತಾಲೂಕುಗಳ ತಾಲೂಕು ಆಸ್ಫತ್ರೆಗೆ ಹೋಲಿಸಿದಾಗ ಸಿದ್ದಾಪುರದ ತಾಲೂಕಾ ಆಸ್ಫತ್ರೆ ಅನೇಕ ತೊಂದರೆ,ಕೊರತೆ ರಗಳೆಗಳ ನಡುವೆ ಉತ್ತಮ ಸೇವೆ ನೀಡುತ್ತಿದೆ.
ತಾಲೂಕಾ ಆಸ್ಫತ್ರೆ ಆರೋಗ್ಯ ಸಮಿತಿಗೆ ಉಪವಿಭಾಗಾಧಿಕಾರಿಗಳು ಮುಖ್ಯಸ್ಥರು! ಸ್ಥಳಿಯ ಶಾಸಕರು ಅಧ್ಯಕ್ಷರು. ಶಾಸಕರು ಮತ್ತು ಉಪವಿಭಾಗಾಧಿಕಾರಿಗಳು ಸೇರಿ ಇಲ್ಲಿ ಸಭೆ ನಡೆಸಿದ ಉದಾಹರಣೆಗಳಿಲ್ಲ.
ಶಾಸಕರು ಕಾಟಾಚಾರಕ್ಕೆಂದು ನಡೆಸುವ ಇತರ ಸಭೆಗಳಿಗಿಂತ ಇಲ್ಲಿಯ ಆರೋಗ್ಯ ಸಮೀತಿಯ ಸಭೆ ಕಳಪೆ. ಈ ಸ್ಥಿತಿಯಲ್ಲಿ ಪ್ರತಿಬಾರಿ ತಾ.ಪಂ. ಸಭೆಯಲ್ಲಿ ಬೈಯ್ಯಿಸಿಕೊಳ್ಳುತಿದ್ದ ವೈದ್ಯರು ಈ ಬಾರಿ ವಸ್ತುಸ್ಥಿತಿ ಹೇಳಿ ಬೆಕ್ಕಿಗೆ ಗಂಟೆ ಕಟ್ಟಿದ್ದಾರೆ. ಇದು ಶಾಸಕರ ವಿಫಲತೆಗೆ ಕೈಗನ್ನಡಿ.
ಇದರೊಂದಿಗೆ ಇನ್ನೊಂದು ಚರ್ಚೆಯಲ್ಲಿ ತಾ.ಪಂ.ಸದಸ್ಯರು ಸಣ್ಣ ನೀರಾವರಿ ಇಲಾಖೆಯ ಚಿಕ್ಕ ಅಧಿಕಾರಿಯ ಮೇಲೆ ಬ್ರಮ್ಹಾಸ್ತ್ರ ಪ್ರಯೋಗಿಸಿದ್ದಾರೆ.
ಸಿದ್ದಾಪುರ ತಾಲೂಕಿನಲ್ಲಿ ಒಂದೇ ಆರ್ಥಿಕ ವರ್ಷದಲ್ಲಿ ಹತ್ತುಕೋಟಿಗೂ ಅಧಿಕ ಕಾಮಗಾರಿ ನಡೆಸಿರುವ ಸಣ್ಣ ನೀರಾವರಿ ಇಲಾಖೆ ಸೌಜನ್ಯಕ್ಕೂ ಸ್ಥಳಿಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎನ್ನುವುದು ವಾಸ್ತವಿಕ ಸತ್ಯ. ಆದರೆ ಸಣ್ಣ ನೀರಾವರಿ ಇಲಾಖೆಯ ದೊಡ್ಡ ಯೋಜನೆಗಳ ಬಗ್ಗೆಯೂ 25-30 ವರ್ಷಗಳಿಂದ ಸಂಸದ, ಸಚಿವ, ಶಾಸಕರಾದ ಜನಪ್ರತಿನಿಧಿಗಳು ಗಮನಿಸುವುದಿಲ್ಲವೆ? ಒಂದು ವೇಳೆ ಗಮನಿಸುವುದಿಲ್ಲ ಎಂದಾದರೆ ಇವರನ್ನು ಆಯ್ಕೆ ಮಾಡಿರುವ ಉತ್ತರ ಕನ್ನಡದ ಜನ ಬೇಜವಾಬ್ಧಾರಿಗಳು, ಅವಿವೇಕಿಗಳು, ಮತಮಾರಿಕೊಳ್ಳುವ ನಾಮರ್ಧ ಹೇಸಿಗೆ ಪ್ರಾಣಿಗಳು ಎಂದರ್ಥ.
ಒಂದುವೇಳೆ ಈ ಬೇಜವಾಬ್ದಾರಿ, ಸೋಗಲಾಡಿ ಜನಪ್ರತಿನಿಧಿಗಳು ತಾಲೂಕಿನಲ್ಲಿ ವರ್ಷಕ್ಕೆ ನಡೆಯುವ ನೂರಾರು ಕೋಟಿ ವ್ಯವಹಾರ,ವಹಿವಾಟನ್ನೂ ನೋಡಿಯೂ ಸುಮ್ಮನೇ ಕೂತಿದ್ದಾರೆ ಎಂದರೆ ಇವರಷ್ಟು ಬ್ರಷ್ಟ ನಯವಂಚಕ, ನಿಷ್ಪ್ರಯೋಜಕ ಜನಪ್ರತಿನಿಧಿಗಳು ಬೇರೆ ಯಾರೂ ಇರಲು ಸಾಧ್ಯವಿಲ್ಲ ಎಂದರ್ಥ.
ಈ ವಾಸ್ತವದಲ್ಲಿ ಸಣ್ಣ ನೀರಾವರಿ ಇಲಾಖೆಯ 10-12 ಕೋಟಿ ಕಾಮಗಾರಿಗಳೊಂದಿಗೆ ಉಳಿದ ನೂರಾರು ಕೋಟಿ ಕಾಮಗಾರಿಗಳು ಈ ತಾಲೂಕಿನಲ್ಲಿ ನಡೆದಿವೆ.
ಈ ಕಾಮಗಾರಿಗಳ ಹಿಂದೆ ಸಂಸದರು, ಶಾಸಕರು,ಸಚಿವರ ಹಿಂಬಾಲಕರು. ಹಿತೈಶಿಗಳು ಓಡಾಡಿಲ್ಲ ಎಂದರೆ ಅದು ಸ್ವಲ್ಪವೂ ಸತ್ಯವಲ್ಲ. ಸಿದ್ಧಾಪುರದ ಮರಿ ಪುಡಾರಿಗಳು ಕಳಪೆ ಗುತ್ತಿಗೆದಾರರ ಒಕ್ಕೂಟ ರಚಿಸಿಕೊಂಡಿರುವುದು, ಅವರು ಹಿಡಿಯಾಸೆಗಾಗಿ ಮತಾಂಧ, ನಯವಂಚಕ ರಾಜಕಾರಣಿಗಳ ಬಾಲಬಡಿಯುವುದು, ಸಾರ್ವಜನಿಕ ಹಣ ಬರಗಾಲದಲ್ಲೂ ನೀರು ಪಾಲಾಗುವುದು, ಮಹಾಪೂರದಲ್ಲೂ ಆರಿ ಹೋಗುವುದು ಮಾಯದ ದೀಪದಂಥ ವಾಸ್ತವ.
ಈ ವ್ಯವಹಾರ ಹಗರಣಗಳೆಲ್ಲಾ ಕಣ್ಣಳತೆಯ ದೂರ, ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ನಡೆದಿರುವುದರಿಂದಲೇ ಎಲ್ಲವೂ ಎಲ್ಲದೂ ಗಪ್ ಚುಪ್ ಆಗಿದೆ.
ಒಂದರಿಂದ ಎರಡು, ಮೂರು ಕೋಟಿ ಹಣ ಅಗತ್ಯ, ಅನಿವಾರ್ಯವಿಲ್ಲದ ಕಡೆ ಸುರಿಯಲಾಗಿದೆ ಎಂದರೆ ಶಾಸಕರು, ಸಂಸದರು, ಸಚಿವರು ಬದುಕಿರುವ ಸಾಧ್ಯತೆ ಕಡಿಮೆ. ಹಾಗಾಗಿ ಸಣ್ಣ ನೀರಾವರಿ ಇಲಾಖೆ, ಹಿಂದಿನ ಜಲಾನಯನ ಸೇರಿದಂತೆ ತಾಲೂಕಿನ ಕೆಲವು ಇಲಾಖೆಗಳು ಅಲ್ಲಿಯ ಪ್ರಮುಖ ಒಳ-ಹೊರ ಕುಳಗಳನ್ನು ಬೀದಿಗೆ ತಂದರೆ ಶಾಸಕರು ಸಂಸದರು, ಸಚಿವರು ಅವರ ಗುತ್ತಿಗೆ ವ್ಯವಹಾರದ ರಾಜಕಾರಣ ಹೊರಬರುವ ಜೊತೆಗೆ ಮತಾಂಧ ಸೋಗಲಾಡಿಗಳು ನಡೆಸುತ್ತಿರುವ ಕಪಟ ನಾಟಕ ಬಯಲಿಗೆ ಬರುವುದರಲ್ಲಿ ಸಂಶಯವಿಲ್ಲ.
ಶಿರಸಿ ಕ್ಷೇತ್ರದ ಶಾಸಕರು, ಸಂಸದರಿಗೆ ಕನಿಷ್ಟ ಸಾರ್ವಜನಿಕ ಜವಾಬ್ಧಾರಿ, ಉತ್ತರ ದಾಯಿತ್ವಗಳಿದ್ದರೆ ಅವರು ಸಣ್ಣ ನೀರಾವರಿ, ಹಿಂದಿನ ಜಲಾನಯನ ಇಲಾಖೆಗಳ ಕರ್ಮಕಾಂಡ ಹೊರಹಾಕಲಿ. ಆಗ ದೇಶಪ್ರೇಮ, ಧರ್ಮರಾಜಕಾರಣದ ಅಯೋಗ್ಯರ ಯೊಗ್ಯತೆ,ಸರಳತೆ, ಸಂಪನ್ನತೆಗಳು ಹೊರಬರುತ್ತವೆ.
ವಿರೋಧ ಪಕ್ಷಗಳು ಸತ್ತಿರುವುದು, ಸಾಯಿಸಲು ಮತಾಂಧ ದುಷ್ಟಪರಿವಾರ ಪ್ರಯತ್ನಿಸುತ್ತಿರುವುದು ಇಂಥ ಲೂಟಿಯ ಕಾರಣಕ್ಕೇ.
ಈ ದುಷ್ಟ ಶಕ್ತಿಗಳಿಗೆ ಮತ ನೀಡದ ಪ್ರಬುದ್ಧರಾದರೂ ಈ ದುಷ್ಟಪರಿವಾರದ ಸಾಚಾತನಗಳನ್ನು ಹೊರಗೆಳೆದು ಮುಖಕ್ಕೆ ಮಸಿ ಬಳಿಯದಿದ್ದರೆ ಇವರ ದೇಶಪ್ರೇಮ, ರಾಷ್ಟ್ರೀಯತೆ ದೇಶದ ಜನಸಾಮಾನ್ಯರನ್ನು ಹುರಿದು ತಿನ್ನುವ ದಿನಗಳು ದೂರವಿಲ್ಲ.

