

ವಿದ್ಯಾರ್ಥಿಗಳು, ನವಯುವಕರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾದರೆ ಉತ್ತಮ ಆಯ್ಕೆ, ನಾಯಕತ್ವಕ್ಕೆ ಸಹಕಾರಿ ಎಂದು ನಿವೃತ್ತ ಪ್ರಾಂಶುಪಾಲ ಟಿ.ಜಿ. ಹೆಗಡೆ ಹೇಳಿದರು.
ಸಿದ್ಧಾಪುರ ಕೋಲಶಿರ್ಸಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಪಠ್ಯೇತರ ಚಟುವಟಿಕೆ, ಕಾಲೇಜು ಸಂಸತ್ ಉದ್ಘಾಟನೆ ಮತ್ತು ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಮಾತನಾಡಿ ಪರಿಸರ, ವಾತಾವರಣ, ಭವಿಷ್ಯಗಳ ಹಿನ್ನೆಲೆಯಲ್ಲಿ ಯುವಕರ ಪಾತ್ರ ಗುರುತರವಾಗಿದೆ. ಉಜ್ವಲ ಭವಿಷ್ಯವೆಂದರೆ ನಾವು ರಕ್ಷಿಸಿಕೊಳ್ಳುವುದು, ನಾವೇ ರೂಪಿಸಿಕೊಳ್ಳುವುದು. ರೂಪಿಸಿಕೊಳ್ಳುವ, ರಕ್ಷಿಸಿಕೊಳ್ಳುವ ಸಾಧ್ಯತೆಗಳನ್ನು ಬಳಸಿಕೊಂಡು ಯುವಜನತೆ ತಮ್ಮ ಭವಿಷ್ಯ ಕಟ್ಟಿಕೊಳ್ಳುವುದು ದೇಶದ ಹಿತಕಾದಂತೆ ಎಂದು ಮಾರ್ಮಿಕವಾಗಿ ನುಡಿದರು.
ಅತಿಥಿಗಳೊಂದಿಗೆ ಗಿಡ ನೆಡುವ ಮೂಲಕ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ವನಮಹೋತ್ಸವ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಂಜುಂಡ ವನಮಹೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು.
ಉಪನ್ಯಾಸಕ ಮಂಜಪ್ಪ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಲಲಿತಾಲಲಕ್ಷ್ಮೀ ಭಟ್ ನಿರೂಪಿಸಿದರೆ, ಲೋಕೇಶ್ ನಾಯ್ಕ ವಂದಿಸಿದರು.ಪ್ರತಿಭಾವಂತರಿಗೆ ಬಹುಮಾನ ವಿತರಿಸಲಾಯಿತು.



