ಈ ಅನಾಥರಕ್ಷಕನ ಕತೆ ಒಂಥರಾ ಸಿನೆಮಾಸ್ಟೋರಿ!

ಅನೇಕರ ಆಶಾಕಿರಣ ಪ್ರಚಲಿತ ಆಶ್ರಮ
ಸಿದ್ಧಾಪುರ ತಾಲೂಕಿನ ಶಿರಳಗಿ ಪಂಚಾಯತ್ ಮುಗದೂರಿನಲ್ಲಿರುವ ಪ್ರಚಲಿತ ಅನಾಥಾಶ್ರಮ ಅನೇಕರಿಗೆ ಆಶಾಕಿರಣವಾಗಿದೆ. ಮನೆಯಿಂದ ಹೊರಹಾಕಿದ ವೃದ್ಧರನ್ನು ,ಆಶ್ರಯಧಾತರಿರದ ಹಿರಿಯರನ್ನೂ ಪೋಶಿಸುವ ಸಂಸ್ಥೆಯಾಗಿ ಈ ಪ್ರಚಲಿತ ಆಶ್ರಯಧಾಮ ಕೆಲಸ ಮಾಡುತ್ತಿದೆ.
ಸಿದ್ಧಾಪುರ ತಾಲೂಕಿನಲ್ಲಿ ಆಶ್ರಯವಿಲ್ಲದೆ ಓಡಾಡುವ ಅನಾಥರು,ವಿಕಲಾಂಗರನ್ನು ಕರೆದೊಯ್ದು ಚಿಕಿತ್ಸೆ ನೀಡಿ ಸಲಹುವ ನಾಗರಾಜ್ ನಾಯ್ಕ ಈಗ ಬರೀ ಸಿದ್ಧಾಪುರ ಮಾತ್ರವಲ್ಲದೆ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗೂ ಬೇಕಾದವರಾಗಿದ್ದಾರೆ.ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಪೊಲೀಸರು ಅನಾರೋಗ್ಯ ಪೀಡಿತ, ಆಶ್ರಯದಾತರಿಲ್ಲದ ಜನರು ಕಂಡೊಡನೆ ಅವರಿಗೆ ನೆನಪಾಗುವುದೇ ಪ್ರಚಲಿತ ಆಶ್ರಯಧಾಮ.
ಈ ಆಶ್ರಯಧಾಮದ ನಾಗರಾಜ್ ನಾಯ್ಕರಿಗೆ ಸಂಪರ್ಕಿಸುವ ಪೊಲೀಸರು ಅಬಲರು, ಅಸಹಾಯಕರನ್ನು ನಾಗರಾಜರ ಆಶ್ರಯಧಾಮಕ್ಕೆ ಬಿಟ್ಟುಹೋಗುತ್ತಾರೆ.
ಹೀಗೆ ಹೊರಗಿನವರು ತಂದು ಬಿಟ್ಟವರು, ನಾಗರಾಜ್ ನಾಯ್ಕ ತಾವೇ ಹುಡುಕಿ ಕರೆತಂದವರು ಸೇರಿದ ಏನಕೇನ ಪ್ರಕಾರೇಣ ಆಶ್ರಯಧಾಮಕ್ಕೆ ಸೇರುವ ಅಸಹಾಯಕರಿಗೆ ನಾಗರಾಜ್ ಮತ್ತು ಮಮತಾ ನಾಯ್ಕರೇ ಪೋಷಕರು,ಪಾಲಕರು.


ಅನಾಥರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು ಅವರಿವರೆನ್ನದೆ ಬಡ, ಅಸಹಾಯಕ, ಅನಾಥರನ್ನು ಸ್ವಂತ ರಕ್ತಸಂಬಂಧಿಗಳಂತೆ ಆರೈಕೆ ಮಾಡುವ ನಾಗರಾಜ್ ನಾಯ್ಕ ಈಗ ಈ ಭಾಗದ ಅನಾಥರ ಆಶ್ರಯಧಾತರಾಗಿ ಕೆಲಸ ಮಾಡುತಿದ್ದಾರೆ.
ಒಳಬರುವವರು, ಹೊರಹೋಗುವವರು ಸೇರಿ ನಿರಂತರ ಎಂಟ್ಹತ್ತು ಜನರಿಗೆ ಊಟ,ವಸತಿಯ ಆಶ್ರಯ ಕಲ್ಫಿಸಿರುವ ನಾಗರಾಜ್ ನಾಯ್ಕ ಮೂಲತ: ಅಂಕೋಲಾದ ಪತ್ರಕರ್ತರು. ಎಳವೆಯಲ್ಲೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಆರೈಕೆಯಲ್ಲಿ ಬೆಳೆದ ನಾಗರಾಜ್ ರಿಗೆ ಪತ್ರಿಕೋಧ್ಯಮ,ಮತ್ಸೋಧ್ಯಮ ಬಿಟ್ಟರೆ ನಿಶ್ಚಿತ ಆದಾಯಮೂಲಗಳಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಅನಾಥರು, ಅಸಹಾಯಕರ ಸೇವೆ ಮಾಡುತ್ತಿರುವ ಇವರಿಗೆ ಸ್ಥಳಿಯರು, ರಾಜಕಾರಣಿಗಳು ಅನುಕೂಲ ಕಲ್ಫಿಸುವ ಬದಲು ತೊಂದರೆ ಕೊಟ್ಟಿದ್ದಾರೆ.
ಆರ್.ಎಸ್.ಎಸ್., ಬಿ.ಜೆ.ಪಿ., ಅನಂತಕುಮಾರ ಹೆಗಡೆ
ಮತ್ತು ಶಾಸಕ ಕಾಗೇರಿ ವಿಶ್ವೇಶ್ವರ ಹೆಗಡೆಗಳು ಈ ನಾಗರಾಜನಾಯ್ಕರ ಸೇವೆ, ಪರಿಶ್ರಮ ತ್ಯಾಗ ನೋಡದೆ ಅವರಿಗೆ ಹಲಗೇರಿಯಿಂದ ಒಕ್ಕಲೆಬ್ಬಿಸಿದ್ದರು.
ಇದೇ ಸಿದ್ಧಾಂತ, ಮನೋಭಾವದ ಧುರುಳರು ಈಗಿನ ಮುಗುದೂರಿನಲ್ಲಿಯೂ ದಾಂಧಲೆ ಎಬ್ಬಿಸಿ ತೊಂದರೆ ಮಾಡಿದರು .
ಆದರೆ ನಾಗರಾಜ್ ನಾಯ್ಕ ಈ ಧುರುಳರನ್ನು ನ್ಯಾಯಾಲಯ, ಹಿತೈಶಿಗಳ ನೈತಿಕ ನೆರವಿನಿಂದಲೇ ಎದುರಿಸಿ ಈಗ ಈ ಭಾಗದ ಆಪದ್ಬಾಂಧವರಾಗಿದ್ದಾರೆ.
ರಾಜಕೀಯ, ಸರ್ಕಾರಿ ನೆರವುಗಳಿಲ್ಲದೆ ಪರಿಶ್ರಮ, ಹಠದಿಂದ ಸೇವೆ ಮಾಡುತ್ತಿರುವ ನಾಗರಾಜ್ ನಾಯ್ಕ ಅಸಹಾಯಕರು ಅನಾಥರನ್ನು ಕರೆತಂದು ಆಸ್ಫತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಅವರ ಊಟ,ವಸತಿ ನೋಡಿಕೊಳ್ಳುತ್ತಾರೆ. ಅನಿವಾರ್ಯ ಪ್ರಸಂಗಗಳಲ್ಲಿ ಮೃತರಾದ ಅನೇಕರನ್ನು ಹೊತ್ತೊಯ್ದು ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.

ಇವರ ಈ ಸೇವೆಗೆ ಕೆಲವು ಬೆರಳೆಣಿಕೆಯ ಜನರು ಸಹಕರಿಸುವುದಿದೆ.
ಅಂಥ ಉದಾರಿಗಳ ನೆರವು ಸ್ಮರಿಸುವ ನಾಗರಾಜ ನಾಯ್ಕ ಹುಟ್ಟು ಸಹಜ ಸಾವು ನಿಶ್ಚಿತ ಆದರೆ ಸಾವು ಅನಾಥವಾಗಬಾರದು ಹಾಗಾಗಿ ಬದುಕು, ಸಾವುಗಳಲ್ಲೂ ನೆರವಾಗುವ ನಮ್ಮ ಪ್ರಯತ್ನ ಸಾಗಿದೆ. ಮುಂದೆ ಏನಾಗುವುದೋ ತಿಳಿದಿಲ್ಲ ಆದರೆ ನನಗೆ ಶಕ್ತಿ ಇರುವವರೆಗೆ ಈ ಕೆಲಸ ಮಾಡುತ್ತೇನೆ ಎನ್ನುತ್ತಾರೆ.
ಎನೋ ನಮ್ಮ ಶಕ್ತಿ ಇರುವವರೆಗೆ ಈ ಕೆಲಸ ಮಾಡುವುದು.
ಕೆಲವರು ಉಪೇಕ್ಷಿಸುತ್ತಾರೆ. ಇಲ್ಲಿ ಆಶ್ರಯ ಪಡೆದವರು ಮರಳಿ ಮನೆಗೆ ತೆರಳುವಾಗಲೂ ಅವರ ಸಂಬಂಧಿಗಳು ನಮ್ಮ ಕೆಲಸಕ್ಕೆ ನೆರವು ಮಾಡುವ ಮನಸ್ಸು ಮಾಡುವುದಿಲ್ಲ.
ಕಷ್ಟದಲ್ಲಿದ್ದವರಿಗೆ ನಾವು ನೆನಪಾಗುತ್ತೇವೆ. ನಮ್ಮ ಕಷ್ಟ ಮಾತ್ರ ಯಾರಿಗೂ ಅರ್ಥವಾಗುವುದಿಲ್ಲ.
-ನಾಗರಾಜ್ ನಾಯ್ಕ (ಪ್ರಚಲಿತ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ)
ಸಹಾಯಮಾಡಲಿಚ್ಛಿಸುವವರು ಈ ಖಾತೆಗೆ ನೆರವು ಒದಗಿಸಿ,ಸಹಕರಿಸಬಹುದು. ಪ್ರಚಲಿತ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್- 03083070000994(ಸಂ.ಸಂ.9481389187) ಸಿಂಡಿಕೇಟ್ ಬ್ಯಾಂಕ್ ಸಿದ್ಧಾಪುರ (ಉ.ಕ.) 0000308

ಯುವಕರ ರಾಜಕೀಯ ಪ್ರಜ್ಞೆಯಿಂದ ಉತ್ತಮಆಯ್ಕೆ, ನಾಯಕತ್ವಕ್ಕೆ ಅವಕಾಶ
ವಿದ್ಯಾರ್ಥಿಗಳು, ನವಯುವಕರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾದರೆ ಉತ್ತಮ ಆಯ್ಕೆ, ನಾಯಕತ್ವಕ್ಕೆ ಸಹಕಾರಿ ಎಂದು ನಿವೃತ್ತ ಪ್ರಾಂಶುಪಾಲ ಟಿ.ಜಿ. ಹೆಗಡೆ ಹೇಳಿದರು.
ಸಿದ್ಧಾಪುರ ಕೋಲಶಿರ್ಸಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಪಠ್ಯೇತರ ಚಟುವಟಿಕೆ, ಕಾಲೇಜು ಸಂಸತ್ ಉದ್ಘಾಟನೆ ಮತ್ತು ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಕೋಲಶಿರ್ಸಿ ಕನ್ನೇಶ್ ಮಾತನಾಡಿ ಪರಿಸರ, ವಾತಾವರಣ, ಭವಿಷ್ಯಗಳ ಹಿನ್ನೆಲೆಯಲ್ಲಿ ಯುವಕರ ಪಾತ್ರ ಗುರುತರವಾಗಿದೆ. ಉಜ್ವಲ ಭವಿಷ್ಯವೆಂದರೆ ನಾವು ರಕ್ಷಿಸಿಕೊಳ್ಳುವುದು, ನಾವೇ ರೂಪಿಸಿಕೊಳ್ಳುವುದು. ರೂಪಿಸಿಕೊಳ್ಳುವ, ರಕ್ಷಿಸಿಕೊಳ್ಳುವ ಸಾಧ್ಯತೆಗಳನ್ನು ಬಳಸಿಕೊಂಡು ಯುವಜನತೆ ತಮ್ಮ ಭವಿಷ್ಯ ಕಟ್ಟಿಕೊಳ್ಳುವುದು ದೇಶದ ಹಿತಕಾದಂತೆ ಎಂದು ಮಾರ್ಮಿಕವಾಗಿ ನುಡಿದರು.
ಅತಿಥಿಗಳೊಂದಿಗೆ ಗಿಡ ನೆಡುವ ಮೂಲಕ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ವನಮಹೋತ್ಸವ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಂಜುಂಡ ವನಮಹೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು.
ಉಪನ್ಯಾಸಕ ಮಂಜಪ್ಪ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಲಲಿತಾಲಲಕ್ಷ್ಮೀ ಭಟ್ ನಿರೂಪಿಸಿದರೆ, ಲೋಕೇಶ್ ನಾಯ್ಕ ವಂದಿಸಿದರು.ಪ್ರತಿಭಾವಂತರಿಗೆ ಬಹುಮಾನ ವಿತರಿಸಲಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *