
ಯಾವ ಜನ್ಮದ
ನೆರಳು ನೀನು
ಕಾಯುವೆ ಯಾಕೆ
ನನ್ನ ಬೆನ್ನು..
ಯಾವ ದಾರಿಯ
ಹೊಂಗನಸಿನ ಹೊರಳು
ಬೆಳಗಿನ ಜಾವದ
ನಕ್ಷತ್ರವೇ ಮರುಳು..
ಬದುಕಿನ ಬವಣೆಗಳಲ್ಲಿ
ಕಳೆದೋಗುವ ಮೊದಲು
ಬಿಗಿದಪ್ಪಿದೆ ಬಾಚಿ
ಚೇತರಿಸಿಕೊಳ್ಳಲು ಅಳಿಲು..
ಆದರೆ ಮತ್ತೆಮತ್ತೆ
ಬೆರೆತೋದೆ ನಾ ನಿನ್ನಲ್ಲೂ
ಸಮಾಧಾನದ ಕೋಲ್ಮಿಂಚು
ಬದುಕುಳಿಯುವ ಭರವಸೆಯಲ್ಲೂ..
ಆಡದ ಮಾತುಗಳಲ್ಲಿ
ಶಬ್ದಗಳಾದವು ಮೌನ
ಕಣ್ಣಂಚಿನಲ್ಲಿ ತೊಟ್ಟಿಕ್ಕುವ
ಹನಿಗಳಾದವು ಮನನ..
ನಾನೆಲ್ಲಿ ಇರುವೆನೋ
ಕೈಗೂಡದ ತುಡಿತಗಳಲ್ಲೂ
ನೀ ನನ್ನೊಳಗಿರುವೆಯೋ
ಭೇಟಿಯಾಗದ ಭೇಟಿಗಳಲ್ಲೂ..
ಬೇರೆಯವಳೇ ಆದರೂ
ನೀ ಇಂದು
ನಿನ್ನವನಾಗಿಯೇ ಉಳಿಯುವೆ
ನಾ ಎಂದೂ..
ಹಾಗೆ ಹೋದರೂ
ಹೀಗೆ ಬಂದು
ಆಶ್ಚರ್ಯ ಒಲವಿಗೆ
ಎಂತಹ ಧನ್ಯತೆಯೆಂದು..
*ಬಸವರಾಜ ಕಾಸೆ*
7829141150
pradeepbasu68@gmail.com
