

ಸದಾ ವಿನೂತನ ಕಾರ್ಯಕ್ರಮಗಳ ಮೂಲಕ ಹೆಸರುಮಾಡುತ್ತಿರುವ ಸಿದ್ಧಾಪುರ ತಾಲೂಕಿನ ನೇರ್ಲಮನೆ (ಗೋಳಿಮಕ್ಕಿ) ಹಿ.ಪ್ರಾ.ಶಾಲೆ ಈ ವರ್ಷವೂ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ವರ್ಷ ಪ್ರಾರಂಭಿಸಿದೆ.
ಋತು ಸಂಭ್ರಮ ಮತ್ತು ಸ್ಫರ್ಧಾ ಸಂಭ್ರಮ ಹಾಗೂ ಹಸಿರು ಸಂಭ್ರಮ ಎನ್ನುವ ಶೀರ್ಷಿಕೆಗಳಡಿ ಮಕ್ಕಳಿಗೆ ನಾನಾ ಸ್ಫರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
ಹಸಿರುಸಂಭ್ರಮ ಕಾರ್ಯಕ್ರಮದ ಫಲಶೃತಿ1 ಯೋಜನೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪಾಲಕರಿಂದ ಗಿಡ ನೆಡಿಸುವ ವನಮಹೋತ್ಸವ ಆಚರಿಸಲಾಯಿತು. ಗ್ರಾಮೀಣ ಶಾಲೆಯಲ್ಲಿ ಇಂಥ ಕಾರ್ಯಕ್ರಮಗಳನ್ನು ನಡೆಸುತ್ತಾ ಅವುಗಳನ್ನು ದಾಖಲಿಸಲು ಹಸ್ತಪತ್ರಿಕೆ ಹೊರಡಿಸಿ, ವಿದ್ಯಾರ್ಥಿಗಳ ಪ್ರತಿಭೆ ಪೋಷಿಸುತ್ತಿರುವ ಪ್ರಯತ್ನಗಳ ಹಿಂದಿನ ಶಕ್ತಿ ಇಲ್ಲಿಯ ಮುಖ್ಯಾಧ್ಯಾಪಕ ಕೆ.ಜಿ.ನಾಯ್ಕ ಬಾಡ.




