

ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಕಳೆದ ಎರಡು ದಿವಸಗಳಿಂದ ನಿರಂತರವಾಗಿ ಸುರಿದ ಮಳೆ ಕರಾವಳಿ ಪ್ರದೇಶದಲ್ಲಿ ಪ್ರವಾಹ ಸೃಷ್ಟಿಸಿದೆ.
ಹೊನ್ನಾವರ ಕುಮಟಾಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಹೊನ್ನಾವರದಲ್ಲಿ ಮಳೆ, ಪ್ರವಾಹ ಸಂತ್ರಸ್ತರಿಗೆ ಶಾಲೆಗಳಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದೆ. ಮಳೆ,ಗಾಳಿ, ಪ್ರವಾಹ, ಮರ ಬೀಳುವ ಪ್ರಕೃತಿ ಅವಗಡಗಳಿಂದಾಗಿ ಕರಾವಳಿ, ಮಲೆನಾಡಿನ ನಾಲ್ಕೈದು ಜಿಲ್ಲೆಗಳು ತತ್ತರಿಸುತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೆ.ಎಸ್.ಆರ್.ಟಿ.ಸಿ.ನಾ.ನೌ.ಸಂಘದ ಪದಾಧಿಕಾರಿಗಳ ಆಯ್ಕೆ
ಸಿದ್ಧಾಪುರ ಕೆ.ಎಸ್.ಆರ್.ಟಿ.ಸಿ. ನಾಮಧಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆರ್.ಟಿ.ನಾಯ್ಕ ಅವರಗುಪ್ಪಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್.ಸಿ.ನಾಯ್ಕ ತ್ಯಾರ್ಸಿ ಉಪಾಧ್ಯಕ್ಷರಾಗಿ,
ಸಂಚಾಲಕರಾಗಿ ಆರ್.ಟಿ ನಾಯ್ಕ ಬೇಡ್ಕಣಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಮ್.ಎನ್. ನಾಯ್ಕ ಮನ್ಮನೆ ಮಂಜುನಾಥ ನಾಯ್ಕ ಮುಂಡ್ಗೆತಗ್ಗು ಸಹಕಾರ್ಯದರ್ಶಿ, ಖಜಾಂಜಿಯಾಗಿ ಎಂ.ಎಂ.ನಾಯ್ಕ ಹಸ್ವಂತೆಆಯ್ಕೆಯಾಗಿದ್ದಾರೆ.
ಈ ಆಯ್ಕೆ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಆರ್.ಟಿ.ನಾಯ್ಕ ಸಹೋದ್ಯೋಗಿಗಳೆಲ್ಲಾ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ನಿಕಟಪೂರ್ವ ಅಧ್ಯಕ್ಷ ಆರ್.ಟಿ.ನಾಯ್ಕ ಬೇಡ್ಕಣಿ ಪ್ರಾರಂಭಿಕ ಮೂರು ವರ್ಷದ ಅನುಭವ ಹಂಚಿಕೊಂಡರು. ನೂತನ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಯ್ಕ ಮನ್ಮನೆ ಸಂಘದ ಶ್ರೇಯೋಭಿವೃದ್ಧಿಗೆ ಸಹಕಾರ ಕೋರಿದರು.
ಗಮನ ಸೆಳೆದ ಸಸ್ಯಮೇಳ
ಶಿರಸಿಯ ಟಿ.ಎಸ್.ಎಸ್. ಪ್ರತಿವರ್ಷ ಶಿರಸಿ ಮತ್ತು ಸಿದ್ದಾಪುರಗಳಲ್ಲಿ ಸಸ್ಯ ಮೇಳ ನಡೆಸುತ್ತದೆ. ಈ ಮೇಳಗಳಲ್ಲಿ ಹೂವು,ಹಣ್ಣಿನ ಗಿಡಗಳನ್ನು ಮಾರಾಟಮಾಡಲಾಗುತ್ತದೆ.
ಶಿರಸಿಯಲ್ಲಿ ಕಳೆದ ವಾರದಿಂದ ಪ್ರಾರಂಭವಾಗಿರುವ ಸಸ್ಯ ಮೇಳ ಜು.25 ರ ವರೆಗೆ ಇರಲಿದೆ ಎಂದು ಟಿ.ಎಸ್.ಎಸ್. ಮೂಲಗಳು ತಿಳಿಸಿವೆ.


