ಜನಸಂಖ್ಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ, ಸೇವೆಗೆ ಸನ್ಮಾನ
ಶಿಕ್ಷಣ ಮತ್ತು ಜನಜಾಗೃತಿಯಿಂದ ಜನಸಂಖ್ಯೆ ಮತ್ತು ರೋಗ ನಿವಾರಣೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿರುವ ವಿಶ್ವ ಜನಸಂಖ್ಯಾ ದಿನಾಚರಣೆ ಸಭೆ ಭಾರತಕ್ಕಾಗಲಿ,ವಿಶ್ವಕ್ಕಾಗಲಿ ಜನಸಂಖ್ಯೆ ವಾಸ್ತವದಲ್ಲಿ ಸಮಸ್ಯೆಯೆ ಅಲ್ಲ ಎಂದು ಪ್ರತಿಪಾದಿಸಿದೆ.
ಇಲ್ಲಿಯ ರಾಘವೇಂದ್ರಮಠ ದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಡೆಂಗ್ಯೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ. ವಿಠ್ಠಲ್ ಭಂಡಾರಿ ಮಾನವ ಸಂಪನ್ಮೂಲ ಬಳಕೆಯಾಗದಿದ್ದರೆ ಸಮಸ್ಯೆ, ದೇಶದ ವ್ಯವಸ್ಥೆ ನೈಸರ್ಗಿಕ ಸಂಪನ್ಮೂಲ ಮತ್ತು ಜನಸಂಖ್ಯೆಯನ್ನು ಸರಿಯಾಗಿ ಬಳಸಿಕೊಂಡರೆ ಜನಸಂಖ್ಯೆ ಎಂದೂ ಸಮಸ್ಯೆಯೇ ಅಲ್ಲ ಎಂದರು.
ತಾಯಂದಿರಿಗೆ ಶಿಕ್ಷಣ, ತಿಳುವಳಿಕೆ ನೀಡುವುದು ಮತ್ತು ಸರ್ಕಾರದ ಕಡ್ಡಾಯ ನಿಯಮ ಜಾರಿಗಳಿಂದ ಜನಸಂಖ್ಯೆ ನಿಯಂತ್ರಿಸಬಹುದು ಎಂದ ಡಾ. ಲಕ್ಷ್ಮೀಕಾಂತ್ ನಾಯ್ಕ ಆರೋಗ್ಯ ಜಾಗೃತಿಗೆ ತಿಳುವಳಿಕೆ ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ಸೇವೆಗಾಗಿ ಶುಶ್ರೂಶಕಿ,ಆಶಾ ಕಾರ್ಯಕರ್ತೆಯರಾದ ಕುಸುಮಾ ಎಂ ನಾಯ್ಕ ಬಿಳಗಿ, ನೇತ್ರಾವತಿ ಸಿ. ನಾಯ್ಕ ಕ್ಯಾದಗಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.