ಶಿಸ್ತು-ಉತ್ತಮ ನಡವಳಿಕೆ ನಾಗರಿಕತ್ವದ ಲಕ್ಷಣ ಎಂದಿರುವ ಜಿ.ಪಂ.ಸದಸ್ಯ ಎಂ.ಜಿ.ಹೆಗಡೆ ಸೇವಾದಳ ಶಿಸ್ತು, ದೇಶಪ್ರೇಮ ಕಲಿಸುತ್ತದೆ. ಮಕ್ಕಳು ಸೇವಾದಳ, ಸ್ಕೌಟ್ಸ್ ನಂಥ ಶಿಸ್ತು ಕಲಿಸುವ ಸಂಸ್ಥೆಗಳ ಪ್ರಯೋಜನ ಪಡೆಯಬೇಕು ಎಂದು ಕರೆನೀಡಿದ್ದಾರೆ.
ಇಲ್ಲಿಯ ಶಂಕರಮಠ ಸಭಾಭವನದಲ್ಲಿ ನಡೆದ ಸೇವಾದಳ ನಾಯಕ ನಾಯಕಿಯರ ಮಿಲಾಪ್ ಮತ್ತು ಪುನಶ್ಚೇತನ ಶಿಬಿರದಲ್ಲಿ ಮಾತನಾಡಿದ ಅವರು ನಾಯಕ, ನಾಯಕಿಯರು ಶಿಸ್ತಿನಿಂದಿದ್ದರೆ ಅವರನ್ನು ಅನುಸರಿಸುವವರು ಶಿಸ್ತು ಕಲಿಯುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಅಕ್ಷರದಾಸೋಹ ಉಪನಿರ್ಧೇಶಕ ಚೈತನ್ಯಕುಮಾರ ಗಿಡನೆಡುವುದು, ಪರಿಸರ ಕಾಳಜಿ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದರು. ಮೀರಾಸಾಬ್ ಮಾತನಾಡಿದರು. ಜಿ.ಆಯ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೆ.ಬಿ.ನಾಯ್ಕ ಸ್ವಾಗತಿಸಿದರು. ಎಂ.ಆರ್.ಭಟ್ ಮತ್ತು ಸಂಘಡಿಗರು ನಿರೂಪಿಸಿದರು.