ಯುವಕರು ಅಪರಾಧ ಜಗತ್ತಿನೆಡೆ ಆಕರ್ಷಿತರಾಗುತ್ತಿರುವುದು ಕಳವಳಕಾರಿ

ಯುವಕರು ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುತಿದ್ದು ಸಾಧನೆಯ ಅವಧಿಯನ್ನೇ ಕಿರಿದು ಮಾಡುತಿದ್ದಾರೆ ಎಂದು ಅಭಿಪ್ರಾಯ ಪಟ್ಟಿರುವ ಪಶ್ಚಿಮ ವಲಯ ಡಿ.ಐ.ಜಿ. ಅರುಣ್ ಚಕ್ರವರ್ತಿ ಕಿರಿಯರು ಅಪರಾಧ, ಅನಾಚಾರಗಳಲ್ಲೂ ಮುಂದಿರುವುದು ನಮ್ಮ ಕಳವಳಕ್ಕೆ ಕಾರಣವಾಗಿದೆ ಎಂದರು.
ಸಿದ್ದಾಪುರದ ರಾಘವೇಂದ್ರಮಠದ ಸಭಾಭವನದಲ್ಲಿ ಸಮ್ಮಿಲನ,ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಧಿಸುವ ಮನೋಭಾವದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಸಂಪರ್ಕ ಜಗತ್ತು ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಆದರೆ ಈ ಅನುಕೂಲಗಳನ್ನು ಕೆಲವರು ದುರುಪಯೋಗಪಡಿಸಿಕೊಂಡು ಜೀವನ ಹಾಳುಮಾಡಿಕೊಳ್ಳುತಿದ್ದಾರೆ.
ಒಬ್ಬ ಅಧಿಕಾರಿಯಾಗಿ, ಒಬ್ಬ ಪಾಲಕನಾಗಿ ನನ್ನ ಕಳವಳ, ಕಳಕಳಿಯೆಂದರೆ ಪಾಲಕರು ಮಕ್ಕಳನ್ನು ಮುಕ್ತವಾಗಿ ಬಿಡುತ್ತಿಲ್ಲ. ಸ್ವತಂತ್ರ ಯುವಕರಿಗಿಂತ ಪಾಲಕರ ನಿಯಂತ್ರಣ, ಬಂಧನದಲ್ಲಿರುವ ಯುವಕರೇ ಅಪರಾಧ ಜಗತ್ತಿನೆಡೆಗೆ ಮುಖಮಾಡುತ್ತಾರೆ ಎಂದು ವಿವರಿಸಿದರು.
ವಿದ್ಯಾರ್ಥಿಗಳೊಂದಿಗೆ
ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಜಯಿಸುವವರು ಶ್ರಮ,ಸಂಯಮಕ್ಕೆ ಸಮಯ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಲೆನಾಡು, ಕರಾವಳಿಯಲ್ಲೆ ಹೆಚ್ಚು ಸಮಯ ಸೇವೆ ಸಲ್ಲಿಸಿದ ತಮಗೆ ಇಲ್ಲಿಯ ಶಾಂತಿ-ಸುವ್ಯವಸ್ಥೆ, ಸಾಮರಸ್ಯಕ್ಕೆ ಶ್ರಮಿಸಿದ ಸಮಾಧಾನವಿದೆ ಎಂದರು.

ಭಾರತದ ಅಮೇರಿಕಾ ರಾಯಭಾರಿ
ಕಛೇರಿ ಅಧಿಕಾರಿ ರಾಜೇಶ್ ಅಭಿಮತ
ಅಭಾವವೇ ವ್ಯಕ್ತಿ, ವಸ್ತು ಪರಿಸ್ಥಿತಿಯ ಮಹತ್ವ ತಿಳಿಸುತ್ತದೆ
ಶಾಂತಿ-ಸುವ್ಯವಸ್ಥೆಯ ಅಭಾವ ತಲೆದೋರಿದಾಗ ಶಾಂತಿ,ಸುವ್ಯವಸ್ಥೆ,ಸೌಹಾರ್ದತೆಯ ಮಹತ್ವದ ಅರಿವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ನಿಯೋಜಿತ ಭಾರತದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್ ನಾಯ್ಕ ಎಲ್ಲರನ್ನೂ ಒಳಗೊಳ್ಳುವ ಭಾರತದ ಸಂವಿಧಾನದ ಸೊಬಗು ಮಹತ್ತರವಾದದ್ದು, ಅದರ ವೈಶಿಷ್ಟ್ಯದಿಂದಾಗಿಯೇ ಭಾರತಕ್ಕೆ ವಿಶ್ವಸಮೂದಾಯದಲ್ಲಿ ಮತ್ತು ಒಳಗಿನ ಎಲ್ಲಾ ಗುಂಪು, ಪ್ರಾಂತ್ಯಗಳಲ್ಲಿ ಶ್ರೇಷ್ಠತೆಯ ಗೌರವವಿದೆ ಎಂದರು.
ಸಿದ್ಧಾಪುರದ ರಾಘವೇಂದ್ರಮಠದ ಸಭಾಭವನದಲ್ಲಿ ನಡೆದ ಸಮ್ಮಿಳನ-ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭಾರತದ ವೈವಿಧ್ಯತೆ, ವೈಶಿಷ್ಟ್ಯತೆಯ ಜೊತೆಗೆ ಸಮಾನತೆಯ ಆದರ್ಶ ಮುಂದುವರಿದ ದೇಶಗಳಲ್ಲಿಲ್ಲ, ಭಾರತ ಎಲ್ಲರ ಆಸೆ, ಆಶೋತ್ತರಗಳ ಸಾಕಾರಮೂರ್ತಿಯಾಗಿ ಜಗತ್ತಿಗೆ ಶಾಂತಿ-ಸೌಹಾರ್ದತೆ, ಸಮಾನತೆಯ ಸಂದೇಶವಾಹಕವಾಗಿರುವುದು ನಮ್ಮ ಹಿರಿಯರ ದೂರದೃಷ್ಟಿತ್ವ, ಉದಾರತೆಯ ಪ್ರಯತ್ನದಿಂದ ಎಂದರು.
ಸಾಮಾನ್ಯ ಅಸಾಮಾನ್ಯನಾಗಿ ಬೆಳೆಯುವುದು ವೈಯಕ್ತಿಕ ಶ್ರಮದಿಂದಾದರೂ ದೇಶದಲ್ಲಿ ಆ ವಾತಾವರಣ ಇರಬೇಕಾಗುತ್ತದೆ. ಪ್ರತಿಷ್ಠಿತ ಹಿನ್ನೆಲೆಯವರೊಂದಿಗೆ ಬುಡಕಟ್ಟುಗಳು, ಧಮನಿತ ಸಮೂದಾಯಗಳು ಸ್ಫರ್ಧೆಮಾಡುತ್ತಿರುವುದು ಭಾರತ ದೇಶ, ಸಂವಿಧಾನದ ಹೆಗ್ಗಳಿಕೆ. ಈ ವೈಶಿಷ್ಟ್ಯತೆಯ ರಕ್ಷಣೆಗಾಗಿ ಕೆಲಸಮಾಡಲು ಯುವಕರು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಹುಟ್ಟೂರ ಪ್ರೀತಿ, ಗೌರವ ಹತ್ತೂರ ಪ್ರೀತಿ, ಗೌರವಕ್ಕಿಂತ ಮಿಗಿಲು ಎಂದ ಅವರು ಹುಟ್ಟೂರಿನ ಅಭಿವೃದ್ಧಿ ಹೊಸಪೀಳಿಗೆಯ ಕನಸಿಗೆ ಶಕ್ತಿ ತುಂಬುವ ಜವಾಬ್ಧಾರಿಯಿಂದ ಇಂಥ ಕೆಲಸಗಳಾಗುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆಗೆ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಸಿದ್ದಾಪುರ ಹೊಸಮಂಜುವಿನ ಗಿರೀಶ್ ಪುಂಡಲೀಕ ನಾಯ್ಕ ಮತ್ತು ಅವರ ಮಾರ್ಗದರ್ಶಕ ಪಿ.ಟಿ. ವಾಲ್ಮಿಕಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಸಿದ್ಧಾಪುರದ ಗುರು ಫೌಂಡೇಶನ್,ಬೆಂಗಳೂರಿನ ಗಗನಕುಸುಮ
ಫೌಂಡೇಶನ್,ಬೆಂಗಳೂರಿನ ನಿಭಾ ಫೌಂಡೇಶನ್ ಗಳು ಆಯೋಜಿಸಿದ್ದವು. ತಾಲೂಕಾ ನಾಮಧಾರಿ ನೌಕರರ ಸಂಘ ಮತ್ತು ವಕೀಲ ಎನ್.ಡಿ. ನಾಯ್ಕ ಕುಟುಂಬ ಸಹಕರಿಸಿತ್ತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

2 Comments

Leave a Reply

Your email address will not be published. Required fields are marked *