

ಹಿಂದಿನ ಸ್ಫೀಕರ್ ರಮೇಶ್ ಕುಮಾರ್ ಮಾಡಿರುವ 17 ಜನ ಶಾಸಕರ ಅಮಾನತ್ ಸುಪ್ರೀಂ ಕೋರ್ಟ್ನಲ್ಲಿ ರದ್ಧಾಗುವ ಸಾಧ್ಯತೆ ಕಡಿಮೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೆ ಅಮಾನತ್ ಬಗ್ಗೆ ಮೊದಲೇ ವಿಧಾನಸಭೆಯಿಂದ ನೋಟೀಸ್ ನೀಡಿರಲಿಲ್ಲ ಎನ್ನುವ ಕಾರಣದಿಂದ ನಮ್ಮ ಅನರ್ಹತೆ ರದ್ಧಾಗಿತ್ತು. ಈಗ ಪರಿಸ್ಥಿತಿ ಬೇರೆ ಇದೆ. ಅತೃಪ್ತಶಾಸಕರು ಅಧಿವೇಶನಕ್ಕೆ ಬರಬೇಕಿತ್ತು, ಅಧಿವೇಶನಕ್ಕೆ ಹಾಜರಾಗಿ ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವ ಅವಕಾಶವಿತ್ತು. ಆದರೆ ಮುಂಬೈ ನಲ್ಲಿ ಅಡಗಿಕುಳಿತು ಜನಾದೇಶ, ಸಂವಿಧಾನದ ಆಶಯ ಧಿಕ್ಕರಿಸಿದ್ದು ಸರಿ ಇಲ್ಲ. ಅವರ ಅನರ್ಹತೆ ರದ್ಧಾಗಬಾರದು ಎಂದು ಅವರು ಹೇಳಿದರು.
ಕಾಗೇರಿ ಸ್ಫೀಕರ್
ರಾಜ್ಯ ವಿಧಾನಸಭೆಯ ಸ್ಫೀಕರ್ ಹುದ್ದೆಗೆ ನಾಳೆ (ಜು.31,ಬುಧವಾರ) ನಡೆಯಲಿರುವ ಚುನಾವಣೆಗೆ ಆಡಳಿತ ಪಕ್ಷ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಸುರೇಶ್ ಕುಮಾರ್, ಜಗಧೀಶ್ ಶೆಟ್ಟರ್ ಸೇರಿದಂತೆ ಕೆಲವು ಹಿರಿಯ ಶಾಸಕರಲ್ಲಿ ವಿಶ್ವೇಶ್ವರ ಹೆಗಡೆ ಸಭಾಪತಿಯಾಗುವ ಬಗ್ಗೆ ನಿರೀಕ್ಷೆಗಳಿದ್ದವು.
ಹೆಗಡೆ ಸತತ 6 ಬಾರಿ ಗೆದ್ದು ಹಿರಿಯ ಶಾಸಕರಾದವರು.ಮೂರು ಬಾರಿ ಉತ್ತರ ಕನ್ನಡದ ಹಿಂದಿನ ಅಂಕೋಲಾ ವಿಧಾನಸಭಾ ಕ್ಷೇತ್ರ ಮತ್ತು ಈಗ ಸತತ ಮೂರು ಬಾರಿ ಶಿರಸಿ ಕ್ಷೇತ್ರ ಪ್ರತಿನಿಧಿಸುತಿದ್ದಾರೆ.

