

ಗೋವಾ ಮಂಗಳೂರು ಚತುಶ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಆಯ್.ಆರ್.ಬಿ. ಕಂಪನಿಯಿಂದ ಸ್ಥಳಿಯರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಲು ಇಂದು ಕುಮಟಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಕ.ರಾ.ವೇ. ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಥಳಿಯರು ಆಯ್.ಆರ್.ಬಿ. ಕಂಪನಿಯಿಂದ ಆಗುತ್ತಿರುವ ತೊಂದರೆ ತಪ್ಪಬೇಕು, ಸಂತೃಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅನರ್ಹತೆ ರದ್ದು ಅಸಂಭವ
ಹಿಂದಿನ ಸ್ಫೀಕರ್ ರಮೇಶ್ ಕುಮಾರ್ ಮಾಡಿರುವ 17 ಜನ ಶಾಸಕರ ಅಮಾನತ್ ಸುಪ್ರೀಂ ಕೋರ್ಟ್‍ನಲ್ಲಿ ರದ್ಧಾಗುವ ಸಾಧ್ಯತೆ ಕಡಿಮೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೆ ಅಮಾನತ್ ಬಗ್ಗೆ ಮೊದಲೇ ವಿಧಾನಸಭೆಯಿಂದ ನೋಟೀಸ್ ನೀಡಿರಲಿಲ್ಲ ಎನ್ನುವ ಕಾರಣದಿಂದ ನಮ್ಮ ಅನರ್ಹತೆ ರದ್ಧಾಗಿತ್ತು. ಈಗ ಪರಿಸ್ಥಿತಿ ಬೇರೆ ಇದೆ. ಅತೃಪ್ತಶಾಸಕರು ಅಧಿವೇಶನಕ್ಕೆ ಬರಬೇಕಿತ್ತು, ಅಧಿವೇಶನಕ್ಕೆ ಹಾಜರಾಗಿ ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವ ಅವಕಾಶವಿತ್ತು. ಆದರೆ ಮುಂಬೈ ನಲ್ಲಿ ಅಡಗಿಕುಳಿತು ಜನಾದೇಶ, ಸಂವಿಧಾನದ ಆಶಯ ಧಿಕ್ಕರಿಸಿದ್ದು ಸರಿ ಇಲ್ಲ. ಅವರ ಅನರ್ಹತೆ ರದ್ಧಾಗಬಾರದು ಎಂದು ಅವರು ಹೇಳಿದರು.

ರಾಜಕೀಯ ದೊಂಬರಾಟ