

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ #ifa ಆಶ್ರಯದಲ್ಲಿ ಯಲ್ಲಾಪುರ ತಾಲೂಕಿನ ಆನಗೋಡ ಹಿಪ್ರಾಶಾಲೆಯಲ್ಲಿ ನಡೆಯುತ್ತಿರುವ “ಹಕ್ಕಿಗಳು ಹಾರುತಿವೆ ನೋಡಿದಿರಾ?!” ಯೋಜನೆಯಲ್ಲಿ ಶಿಕ್ಷಕ ವೃಂದದವರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗಿದ್ದು, ದಿನಾಂಕ ೨೭ ಜುಲೈ ೨೦೧೯ ರಂದು ಶಿಕ್ಷಕಿ ಕುಸುಮಾ ನಾಯಕ ಅವರು “ಪಕ್ಷಿಗಳ ವರ್ಗೀಕರಣ” ಕುರಿತು ಮಕ್ಕಳೊಂದಿಗೆ ಮಾತುಕತೆ ನಡೆಸಿದರು. “ಭೂ ವಿಜ್ಞಾನದಲ್ಲಿ ಪಕ್ಷಿ ಸಂಸ್ಕೃತಿ” ವಿಭಾಗದಲ್ಲಿ ಎರಡನೇ ಸೆಷನ್ ಇದಾಗಿದ್ದು ಮಕ್ಕಳಿಗೆ ಮನಮುಟ್ಚುವಂತೆ ವಿವರ ಚರ್ಚೆ ನಡೆಸಿದರು.
ಪಕ್ಷಿಗಳನ್ನು ೨೭ ಗಣಗಳಾಗಿ ವಿಂಗಡಿಸಲಾಗಿದ್ದು, ಒಂದು ಗಣದಲ್ಲಿ ಅನೇಕ ಕುಟುಂಬಗಳಿರುತ್ತವೆ. ಜಾತಿ ಕುಟುಂಬದ ನಂತರ ಬರುವ ವರ್ಗೀಕರಣ. ಜಾತಿಯೊಳಗೆ ಅನೇಕ ಪ್ರಭೇದಗಳಿರುತ್ತವೆ ಎಂದೂ ಕುಸುಮಾ ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಧ್ಯಾಪಕ ಸುಧಾಕರ ನಾಯಕ, ಗ್ರಾಂಟಿ ಗಣೇಶ ಪಿ. ನಾಡೋರ ಉಪಸ್ಥಿತರಿದ್ದರು. ೨೫ ಮಕ್ಕಳು ಭಾಗವಹಿಸಿದ್ದರು
