siddapur ಅಂಗೈಯಲ್ಲಿ- ಸತ್ಯ-ನಿಷ್ಟೂರ,ವಸ್ತುನಿಷ್ಟ ಸುದ್ದಿಗಳಿಗಾಗಿ ಲಾಗ್ ಇನ್ ಆಗಿ https://samajamukhi.net


ಸಾಧಕರ ಸಂವಾದ, ಸಮ್ಮಿಲನ ಜೊತೆಗೇ ಲೋಕಾಭಿರಾಮ!
ಶಿಕ್ಷಣ ಸಂಸ್ಥೆಗಳಿಲ್ಲದ, ಇದ್ದರೂ ವ್ಯವಸ್ಥಿತವಾಗಿಲ್ಲದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಸಾಧನೆ ಅನನ್ಯ. ಸಿದ್ದಾಪುರ ತಾಲೂಕು ಉತ್ತರ ಕನ್ನಡ ಜಿಲ್ಲೆಯ ಸರಾಸರಿ ಮನುಷ್ಯ-ವಾಹನ ಅನುಪಾತದಲ್ಲಿ ಜಿಲ್ಲೆಗೇ ಮೊದಲಿನ ಸ್ಥಾನದಲ್ಲಿದೆ. ವಾಹನ ಮತ್ತು ಮನುಷ್ಯರ ಜೀವವಿಮೆ ಅನುಪಾತವಾರು ಜಿಲ್ಲೆಗೆ ಸಿದ್ದಾಪುರ ನಂ.1, ಐ.ಎ.ಎಸ್. ಅಧಿಕಾರಿಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರವೆಂಬ ಬಡ ತಾಲೂಕಿನವರದೇ ಸಿಂಹಪಾಲು.
ಹೀಗೆ ಹೋರಾಟ, ಇತಿಹಾಸ, ಸಾಧನೆ, ಸಾಮಥ್ರ್ಯ ಎಲ್ಲದರಲ್ಲೂ ಮುಂದಿರುವ ಸಿದ್ಧಾಪುರದ ಹೆಮ್ಮೆಯ ಪುತ್ರನೊಬ್ಬ ಈಗ ಭಾರತಕ್ಕೆ ಅಮೇರಿಕಾದ ರಾಯಭಾರಿ. ಸಿದ್ಧಾಪುರ ತಾಲೂಕಿನ ಐಸೂರು ಮೂಲದ ರಾಜೇಶ್ ನಾಯ್ಕ ಹತ್ತು ವರ್ಷದ ಕೆಳಗೆ ರ್ಯಾಂಕ್ ನೊಂದಿಗೆ ಆಯ್.ಎ.ಎಸ್. ಪಾಸುಮಾಡಿದಾಗ ಹುಬ್ಬೇರಿಸಿದವರೇ ಹೆಚ್ಚು.ಇಲ್ಲಿ ಶ್ರೇಷ್ಠತೆಯ ವ್ಯಸನ, ಜಾತೀಯತೆ ಎಷ್ಟಿದೆಯೆಂದರೆ…. ಈ ಸಾಧಕನಿಗೆ ಈವರೆಗೆ ಇವರು ಕಲಿತ ಸ್ಥಳಿಯ ಸಂಸ್ಥೆಗಳೇ ಸನ್ಮಾನಿಸಿಲ್ಲ!.
ಆ ಕತೆ ಹಾಗಿರಲಿ, ಇದೇವಾರ ಎರಡು ದಿವಸ ರಾಜೇಶ್ ನಾಯ್ಕ ಹುಟ್ಟೂರು ಸಿದ್ದಾಪುರದಲ್ಲಿದ್ದರು. ಅವರ ಸ್ನೇಹಿತರಾದ ಮಂಗಳೂರು ಪಶ್ಚಿಮವಲಯದ ಡಿ.ಆಯ್.ಜಿ. ಕಡಕ್ ಆಫೀಸರ್ ಅರುಣ್ ಚಕ್ರವರ್ತಿಯವರೊಂದಿಗೆ ಎಳೆಯರೊಂದಿಗೆ ಸಂವಾದದಲ್ಲಿ ತೊಡಗಿಕೊಂಡರು. ಈ ಕಾರ್ಯವನ್ನು ಸಾಧ್ಯವಾಗಿಸಿದ್ದು ಸಿದ್ಧಾಪುರದ ಗುರುಫೌಂಡೇಶನ್, ಬೆಂಗಳೂರಿನ ಗಗನಕುಸುಮ ಮತ್ತು ನಿಭಾ ಫೌಂಡೇಶನ್‍ಗಳು. ಸಂವಾದದಲ್ಲಿ ಮಾಹಿತಿ ನೀಡಿದ ಈ ಅಧಿಕಾರಿಗಳು ಎಳೆಯರನ್ನು ಉತ್ತೇಜಿಸಿದರು, ಈ ಕಾರ್ಯಕ್ರಮದ ನಂತರ ಭಾನುವಾರ ರಾಜೇಶ್ ನಾಯ್ಕ ಸಮಾಜಮುಖಿಗಾಗಿ ಒಂದೆರಡು ಗಂಟೆ ಸಮಯ ನೀಡಿದ್ದರು. ಅವರೊಂದಿಗಿನ ಲೋಕಾಭಿರಾಮದ ಚರ್ಚೆ ಈಗ ಸಂಕ್ಷಿಪ್ತವಾಗಿ ಸಮಾಜಮುಖಿಯಲ್ಲಿ ಸಮಾಜಮುಖಿ ಪತ್ರಿಕೆ ಮತ್ತು
hಣಣಠಿ://sಚಿmಚಿರಿಚಿmuಞhi.iಟಿಗಳಲ್ಲಿ
ಬಂಕೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ
ಮತದಾನದ ಮಹತ್ವ ಪ್ರತಿಪಾದನೆ

(ಸಿದ್ಧಾಪುರ,)ಮತದಾನ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯವಾದುದು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವುದು ಅವಶ್ಯಕವಾಗಿದ್ದು ಇದರಿಂದ ಸುಭದ್ರ ಆಡಳಿತ ನೀಡುವುದರ ಜೊತೆಗೆ ದೇಶದ ಅಭಿವೃದ್ಧಿಯೂ ಸಾಧ್ಯವಿದೆ ಎಂದು ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಭಟ್ಟ ಹೇಳಿದರು.
ಅವರು ಇತ್ತೀಚೆಗೆ ಪಟ್ಟಣದ ಹೊಸೂರು ಶ್ರೀಬಂಕೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟಿಸಿ ಮಾತನಾಡುತ್ತಿದ್ದರು.

(ಸಿದ್ದಾಪುರ;) ಮಠವು ಸತ್ಕಾರ್ಯ ಮಾಡಬೇಕು. ಆ ಕಾರ್ಯ ಮಾಡಲು ಕಾರ್ಯಕರ್ತರು ಅವಶ್ಯ. ನಾವು ಮಾಡಿದ ಕಾರ್ಯ ಹಾಗೂ ಸೇವೆ ನಮ್ಮನ್ನು ಪರಿಚಯಿಸುತ್ತದೆ. ನಾವು ಹೆಜ್ಜೆಯನ್ನು ಮುಂದಿಡಬೇಕೇ ವಿನ: ಹಿಂದಕ್ಕೆ ಹೋಗಬಾರದು. ಶರೀರದಲ್ಲಿ ಚಟುವಟಿಕೆ ಇಲ್ಲದಿದ್ದರೆ ಅದು ಜಡವಾಗುತ್ತದೆ. ವಲಯ, ಮಂಡಲ ಪದಾಧಿಕಾರಿಗಳಿಗೆ ಸಕ್ರಿಯತೆ, ಕ್ರಿಯಾಶೀಲತೆ ಮುಖ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಶ್ರೀಗಳವರು ಹೇಳಿದ್ದಾರೆ.
ಅವರು ಗಿರಿನಗರ ಮಠದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತದಲ್ಲಿ ಸಿದ್ದಾಪುರ ಮಂಡಲದ ಹತ್ತು ವಲಯಗಳಿಂದ ಭಿಕ್ಷಾ ಸೇವೆ ಸ್ವೀಕರಿಸಿ ಮಂಡಲ ಪದಾಧಿಕಾರಿಗಳ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಠವು ರಾಮಾಯಣ ಮಹಾಸತ್ರ ನಡೆಸಿದಾಗ ಇದು ಮಹಾ ಕಾರ್ಯವೆನಿಸಿತು. ವಿಶ್ವಗೋಸಮ್ಮೇಲನ ಕೈಗೆತ್ತಿಕೊಂಡಾಗ ಅಭೂತಪೂರ್ವವೆಂಬ ಮಾತು ಕೇಳಿಬಂತು. ಗೋಸ್ವರ್ಗವನ್ನು ನಿರ್ಮಿಸಿ ಸಮರ್ಪಿಸಿದಾಗ ಇದು ದೇಶದ ಅತ್ಯದ್ಭುತವೆನಿಸಿತು. ಇದೀಗ ಅಶೋಕೆಯಲ್ಲಿ ದೇಶದಾದ್ಯಂತ ಪರಿಣಾಮ ಬೀರಬಲ್ಲ “ವಿಷ್ಣುಗುಪ್ತ ವಿಶ್ವವಿದ್ಯಾಪೀಠ”ದ ನಿರ್ಮಿತಿ ನಮ್ಮ ಮುಂದಿದೆ. ನಮ್ಮಲ್ಲಿ ನಿಷ್ಠಾವಂತ,ಬುದ್ಧಿವಂತ ಶಿಷ್ಯರಿದ್ದಾರೆ. ಮಠದ ಶಿಷ್ಯರು ಈ ವಿಶ್ವವಿದ್ಯಾಪೀಠದ ಕಾರ್ಯದಲ್ಲಿ ತ್ರಿಕರಣಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಕೈಲಾದ ಹೆಚ್ಚಿನ ಸೇವೆ ಸಲ್ಲಿಸಬೇಕು. ಹಿರಿಯರನ್ನು, ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬೇಕು. ಸ್ವಂತ ಬುದ್ಧಿಯಿಂದ ಕೆಲಸಮಾಡಬೇಕು ಎಂದು ಹೇಳಿದ ಅವರು ಸಕಲರಿಗೂ ಒಳಿತಾಗಲೆಂದು ಹರಸಿ ಫಲಮಂತ್ರಾಕ್ಷತೆ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ನವಚೇತನ ಚಾರಿಟೇಬಲ್ ಟ್ರಸ್ಟ ಫಾರ್ ಡಿಸೇಬಲ್ಡ ಸಂಘಟನೆ ಹೊರತಂದ “ವಿದ್ಯಾರ್ಥಿ ಮಿತ್ರ” ಸಂಚಿಕೆಯನ್ನು ಶ್ರೀಗಳವರು ಲೋಕಾರ್ಪಣ ಮಾಡಿದರು. ಟ್ರಸ್ಟಿನ ಮಂಜುನಾಥ, ಸುಮಲತಾ, ಸಾತ್ವಿಕ್, ಸಂಘಟಕರಾದ ಟೊಯೋಡಾ ಗೋಸೈ ಸೌತ್ ಇಂಡಿಯಾ ಪ್ರೈ ಲಿಮಿಟೆಡ್‍ನ ಅಧಿಕಾರಿಗಳಾದ ಸಹದೇವ ಕೆ.ವಿ., ರಾಜಾ ಆರ್.ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾಮಂಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಸಿದ್ದಾಪುರ, ವಿನಾಯಕ ಹೆಗಡೆ ಹರಗಿ, ಶ್ರೀಮತಿ ಚಂದ್ರಮತಿ ಹರಗಿ ಅವರುಗಳು ಶ್ರೀಗಳವರಿಗೆ ತುಲಾಭಾರ ಸೇವೆ ಸಲ್ಲಿಸಿದರು. ಸಿದ್ದಾಪುರ ಮಂಡಲ ನಿಕಟಪೂರ್ವ ಅಧ್ಯಕ್ಷ ಜಿ.ಎಸ್.ಭಟ್ಟ ಕಲ್ಲಾಳ, ಹಾಲಿ ಅಧ್ಯಕ್ಷ ಸುಬ್ರಾಯ ಹೆಗಡೆ ಸುಂಗೋಳಿಮನೆ, ಸಿದ್ದಾಪುರ ಮಂಡಲ ಹಾಗೂ ವಿವಿಧ ವಲಯಗಳ ಪದಾಧಿಕಾರಿಗಳು, ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಕಶಿಗೆಯಲ್ಲಿ ಏಕಾದಶಿ ತಾಳಮದ್ದಳೆ – ಕೃಷ್ಣ ಸಂಧಾನ,ಕರ್ಣಬೇಧನ
ಸಿದ್ದಾಪುರ. ತಾಲೂಕಿನ ಹೇಮಗಾರ ಕಶಿಗೆಯ ಕೇಶವ ನಾರಾಯಣ ದೇವಸ್ಥಾನದಲ್ಲಿ ಆಷಾಡಕೃಷ್ಣ ಏಕಾದಶಿ ರವಿವಾರದಂದು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಭುವನೇಶ್ವರಿ ತಾಳ ಮದ್ದಳೆ ಕೂಟದ ಸದಸ್ಯರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುಮ್ಮೇಳದಲ್ಲಿ ಭಾಗವತ ಕೇಶವ ಹೆಗಡೆ ಕೊಳಗಿ ಮತ್ತು ಮಾಧವ ಭಟ್ಟ ಕೊಳಗಿ ತಮ್ಮ ಮಧುರ ಕಂಠದಿಂದ, ಮದ್ದಳೆವಾದಕ ಶರತ್ ಹೆಗಡೆ ಜಾನಕೈ ತಮ್ಮ ಕೌಶಲದಿಂದ ಪ್ರೇಕ್ಷಕರ ಮನಗೆದ್ದರು . ಕೃಷ್ಣನ ಪಾತ್ರದಲ್ಲಿ ವಿ.ಶಂಕರ ಭಟ್ಟ ಬಾಲಿಗದ್ದೆ,ಸ್ವರ್ಣವಳ್ಳಿಮಠ, ಕೌರವನ ಪಾತ್ರದಲ್ಲಿ ಜಿ.ಕೆ.ಭಟ್ಟ ಕಶಿಗೆ, ವಿದುರನಾಗಿ ಗಣಪತಿ ಹೆಗಡೆ ಗುಂಜಗೋಡ ಕೃಷ್ಣ ಸಂಧಾನ ಪ್ರಸಂಗದ ವೈಚಾರಿಕ ಚಿಂತನ ನಡೆಸಿದರೆ, ನಂತರ ನಡೆದ ಕರ್ಣಬೇಧನ ಪ್ರಸಂಗದಲ್ಲಿ ಎಂ.ಕೆ.ನಾಯ್ಕ ಹೊಸಳ್ಳಿ ಕರ್ಣನಾಗಿ, ಜೈರಾಮ ಭಟ್ಟ ಗುಂಜಗೋಡ ಕುಂತಿಯಾಗಿ, ಗಣಪತಿ ಹೆಗಡೆ ಹೊನ್ನೆಕೈ ಗಂಗೆಯಾಗಿ ಮಾತೃಭಾವದ ಶಕ್ತಿ ಅಭಿವ್ಯಕ್ತಿಸಿದರು. ಜಿ.ಕೆ.ಭಟ್ಟ ಕಶಿಗೆ ಸ್ವಾಗತಿಸಿದರು.ತಾಳಮದ್ದಳೆ ಕೂಟದ ಪರವಾಗಿ ಜೈರಾಮ ಭಟ್ಟ ಮಾತನಾಡಿದರು. ಪ್ರಾಯೋಜಕತ್ವ ವಹಿಸಿದ್ದ ಗಜಾನನ ಭಟ್ಟ ಕಾರವಾರ ಕೃತಜ್ಞತೆಸಲ್ಲಿಸಿ ಮಾತನಾಡಿದರು.
ಬೇಬಿ ಪ್ರದರ್ಶನದಿಂದ ತಿಳುವಳಿಕೆ
(ಸಿದ್ದಾಪುರ;) ಮಕ್ಕಳ ಬೆಳವಣಿಗೆ ಮತ್ತು ಆರೈಕೆ, ತಾಯಂದಿರಲ್ಲಿ ಶುಚಿತ್ವ, ಮಕ್ಕಳ ಪೋಷಣೆ, ತಾಯ್ತನದಲ್ಲಿ ನಮ್ಮ ಕರ್ತವ್ಯಗಳ ಕುರಿತು ತಿಳುವಳಿಕೆ ನೀಡಲು ಅನುಕೂಲವಾಗಲು ಬೇಬಿ ಪ್ರದರ್ಶನದಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಲಿವೆ ಎಂದು ಬೇಡ್ಕಣಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಉಮೇಶ ಎನ್ ನಾಯ್ಕ ಹೇಳಿದರು.
ಅವರು ತಾಲೂಕಿನ ಕಡಕೇರಿ ಅಂಗನವಾಡಿ ಕೇಂದ್ರ 1 ರಲ್ಲಿ ನಡೆದ ಶಿಶು ಪ್ರದರ್ಶನಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಇಂದಿನ ಫ್ಯಾಷನ್ ಯುಗದಲ್ಲಿ ತಾಯಂದಿರಾದವರು ತಮ್ಮ ತಾಯ್ತನದ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಮಕ್ಕಳ ಆರೈಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ವೈದ್ಯರ ಸಲಹೆಯಂತೆ ಮಕ್ಕಳನ್ನು ಆರೈಕೆ ಮಾಡಿದರೆ ಮಕ್ಕಳಿಗೂ, ತಾಯಂದಿರಿಗೂ ಯಾವುದೇ ತೊಂದರೆಯಾಗದೆಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಗ್ರಾಮ ಪಂಚಾಯತ ಸದಸ್ಯ ಎ,ಬಿ, ನಾಯ್ಕ ಮಾತನಾಡಿ ಮಕ್ಕಳ ಬೌದ್ಧಿüಕ, ಮಾನಸಿಕ ಬೆಳವಣಿಗೆಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ಪತ್ರಕರ್ತ ಸುರೇಶ ಕಡಕೇರಿ ಮಾತನಾಡಿ ತಮ್ಮ ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಿಕೊಂಡರೆ ನೀವು ಮತ್ತು ನಿಮ್ಮ ಮಕ್ಕಳು ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ.
ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಈ ಕುರಿತ ಮಾಹಿತಿ ಲಭಿಸುತ್ತದೆ ಎಂದರು.
ನಾಣಿಕಟ್ಟಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ ಉದ್ಘಾಟನೆ.

ಸಿದ್ದಾಪುರ.ಜು,30- ತಾಲೂಕಿನ ನಾಣಿಕಟ್ಟಾದ ಸರಕಾರಿ ಪ.ಪೂ.ಕಾಲೇಜಿನಲ್ಲಿ 2019-20ನೇ ಸಾಲಿನ ವಿದ್ಯಾರ್ಥಿ ಸಂಸತ್ತು ಇತ್ತೀಚೆಗೆ ಉದ್ಘಾಟನೆಗೊಂಡಿತು. ಸ್ಥಳೀಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಸತ್ತನ್ನು ಎಂ.ಜಿ.ಸಿ.ಪದವಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಎಸ್.ಎಸ್.ಗುತ್ತಿಕರ ಉದ್ಘಾಟಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ವಿದ್ಯಾರ್ಥಿ ಸಂಸತ್ತು ವಿದ್ಯಾರ್ಥಿಗಳು ತಮ್ಮೊಳಗಿರುವ ಸಾಂಸ್ಕøತಿಕ, ಕ್ರೀಡಾ, ಹಾಗೂ ಲಲಿತಕಲೆಗಳ ಪ್ರತಿಭೆಯನ್ನು ಪ್ರಕಟಗೊಳಿಸಲು ವೇದಿಕೆಯನ್ನು ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳು ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಬಾಹ್ಯ ಆಕರ್ಷಣೆಗಳು ಸತ್ಯವಲ್ಲದಿರಬಹುದು. ಆಂತರಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಯತ್ನ ಬೇಕು ಎಂದರು.
ನೂತನವಾಗಿ ಸಂಸತ್ ಸದಸ್ಯರಾಗಿ ಆಯ್ಕೆಯಾದ ವಿದ್ಯಾರ್ಥಿಪ್ರತಿನಿಧಿಗಳು ರಮಾನಂದ ಟಿ ಗೌಡ(ಪ್ರಧಾನ ಕಾರ್ಯದರ್ಶಿ), ಸೌಮ್ಯಾ ಗಣಪತಿ ನಾಯ್ಕ(ಉಪ ಪ್ರಧಾನ ಕಾರ್ಯದರ್ಶಿ),ಗಜಾನನ ಗೊಂಡ(ಕ್ರೀಡಾ ಕಾರ್ಯದರ್ಶಿ), ಸ್ನೇಹಾ.ಟಿ.ಮಡಿವಾಳ(ಕ್ರೀಡಾ ಸಹಕಾರ್ಯದರ್ಶಿ),ಪ್ರಜ್ವಲ್. ಡಿ.ನಾಯ್ಕ.( ಕ್ರೀಡಾಸಹ ಕಾರ್ಯದರ್ಶಿ), ತನುಶ್ರೀ.ಕೆ.( ಸಾಂಸ್ಕøತಿಕ ಕಾರ್ಯದರ್ಶಿ) ಚೈತನ್ಯ.ಎಂ.ಎನ್.( ಸಾಂಸ್ಕøತಿಕ ಸಹ ಕಾರ್ಯದರ್ಶಿ), ಪುರುಷೋತ್ತಮ ಎನ್ ನಾಯ್ಕ (ಸಾಂಸ್ಕøತಿಕ ಸಹ ಕಾರ್ಯದರ್ಶಿ) ವಿಜೇತ.ವಿ.ಗೌಡ (ಸ್ವಚ್ಛತೆ,ಶಿಸ್ತು,ಪ್ರಾರ್ಥನೆ ಕಾರ್ಯದರ್ಶಿ) ದಿವ್ಯಾ ಮಂಜುನಾಥ ನಾಯ್ಕ(ಸ್ವಚ್ಛತೆ,ಶಿಸ್ತು,ಪ್ರಾರ್ಥನೆ ಸಹ ಕಾರ್ಯದರ್ಶಿ),ಪುನೀತ್.ಎಸ್.ನಾಯ್ಕ (ಪ್ರವಾಸ ಕಾರ್ಯದರ್ಶಿ),ದೀಕ್ಷಿತಾ ನಾಯ್ಕ ಪ್ರವಾಸ ಸಹ ಕಾರ್ಯದರ್ಶಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಉಪನ್ಯಾಸಕ ಓಂಕಾರಪ್ಪ ಸಿ ವಿ ಪ್ರಮಾಣವಚನ ಬೋಧಿಸಿದರು. ಪ್ರಧಾನ ಕಾರ್ಯದರ್ಶಿ ರಮಾನಂದ ಟಿ ಗೌಡ ತಮ್ಮ ಸಂಸತ್ತಿನ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತಾ.ಪಂ.ಸದಸ್ಯ ಮಹಾಬಲೇಶ್ವರ ಹೆಗಡೆ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳ ವಿವರ ಹಾಗೂ ಭಾವಚಿತ್ರವಿರುವ ಫಲಕ ಅನಾವರಣಗೊಳಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳು ಜಾಗೃತರಾಗಿರಬೇಕು.ಅನ್ಯಾಯ ನಡೆದಾಗ ಅದನ್ನು ಬರವಣಿಗೆಯ ಮೂಲಕ ಖಂಡಿಸಬೇಕು ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಜಿ.ಹೆಗಡೆ ಬೆಳ್ಳೆಕೇರಿವಿದ್ಯಾರ್ಥಿಗಳ ‘ಅರಳು’ ಕೈರಹ ಪತ್ರಿಕೆ ಬಿಡುಗಡೆ ಮಾಡಿದರು.ತ್ಯಾಗಲಿ ಗ್ರಾ.ಪಂ. ಉಪಾಧ್ಯಕ್ಷ ವಸಂತ ಹೆಗಡೆ, ಕಾ.ಅ.ಸ.ಸದಸ್ಯ ಚಂದ್ರಕಾಂತ ಹೆಗಡೆ, ಸಾಮಾಜಿಕ ಕಾರ್ಯಕರ್ತ ವಿ.ಎಂ.ಹೆಗಡೆ ತ್ಯಾಗಲಿ, ಪ್ರೌಢಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ದತ್ತಾತ್ರೇಯ ಹೆಗಡೆ, ಹಿರಿಯ ಶಿಕ್ಷಕಿ ಆಶಾ.ಬಿ. ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಹಾಗೂ ಉ.ಕ.ಜಿಲ್ಲಾ ಪ.ಪೂ.ಶಿ.ಇಲಾಖೆಯ ಉಪನಿರ್ದೇಶಕ ಎಂ.ಜಿ.ಪೋಳ ಮಾತನಾಡಿ ವಿದ್ಯಾರ್ಥಿಜೀವನದಲ್ಲಿ ನಾಯಿಯ ನಿದ್ರೆ, ಕಾಗೆಯ ಬುದ್ಧಿವಂತಿಕೆ, ಕೊಕ್ಕರೆಯ ಧ್ಯಾನ ಅಳವಡಿಸಿಕೊಳ್ಳಬೇಕು. ಮೊಬೈಲ್‍ನಿಂದ ದೂರವಿರಬೇಕು ಎಂದು ಸೂಚ್ಯವಾಗಿ ಹೇಳಿದರು. ನಿಶ್ಚಿತಾ,ಮಧುರಾ, ಇಂದಿರಾ ಮತ್ತು ತೇಜಸ್ವಿನಿ ಪ್ರಾರ್ಥನಾಗೀತೆ ಹಾಡಿದರು. ಕಾಲೇಜಿನ ಪ್ರಭಾರ ಪ್ರಾಚಾರ್ಯ ಎಂ.ಕೆ.ನಾಯ್ಕ ಸ್ವಾಗತಿಸಿದರು. ಎಂ.ಆಯ್.ಹೆಗಡೆ ವಂದಿಸಿದರು. ಆನಂದ.ಡಿ.ಕೆ. ಮತ್ತು ಕು.ದಿವ್ಯಾ ಎಂ ನಾಯ್ಕ ನಿರೂಪಿಸಿದರು. ವಿದ್ಯಾರ್ಥಿ ಶ್ರೀರಾಮ ಉದಯ ಗೌಡ ಭಕ್ತಿಗೀತೆ ಹಾಡಿದರು.

ಜನಪ್ರತಿನಿಧಿಗಳು-ಅಧಿಕಾರಿಗಳ ನಡುವಿನ ಘರ್ಷಣೆಗೆ ಕಾರಣವಾಗುತ್ತಿರುವ ನೀತಿ-ನಿಯಮ!
ಸರ್ಕಾರದ ನೀತಿ-ನಿಯಮಗಳು ಸರ್ಕಾರಿ ಅಧಿಕಾರಿಗಳು ಮತ್ತು ಸ್ಥಳಿಯ ಜನಪ್ರತಿನಿಧಿಗಳ ನಡುವಿನ ಘರ್ಷಣೆಗೆ ಅವಕಾಶ ಮಾಡುತ್ತಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಇಂದು ಬೇಡ್ಕಣಿ ಗ್ರಾ.ಪಂ.(sಸಿದ್ಧಾಪುರ ಉ.ಕ.) ಸಾಮಾನ್ಯ ಸಭೆಯಲ್ಲಿ ತಾಂತ್ರಿಕ ತೊಂದರೆಗಳ ಕಾರಣಕ್ಕೆ ಗ್ರಾ.ಪಂ. ಉಪಾಧ್ಯಕ್ಷರು ಮತ್ತು ಗ್ರಾಮೀಣಾಭಿವೃದ್ಧಿ ಅಧಿಕಾರಿಗಳ ನಡುವಿನ ಜಟಾಪಟಿಗೆ ಕಾರಣವಾಯಿತು.
ಸಾಮಾನ್ಯ ಸಭೆಯ ಮೊದಲು ಸಹಜ, ಮುಂಚಿತ ಚರ್ಚೆಯ ವೇಳೆ ಮಾಧ್ಯಮಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಬೇಡ್ಕಣಿ ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಾಯ್ಕ ಅಧಿಕಾರಿಗಳ ಅಸಹಕಾರ,ಸರ್ಕಾರದ ಕಠಿಣ ನಿಯಮಗಳಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಠರಾವಿನಲ್ಲಿ ನಮ್ಮ ಆಕ್ಷೇಪ, ಚರ್ಚೆಗಳನ್ನೂ ನಮೂದಿಸುವುದಿಲ್ಲ, ಸಾಮಾನ್ಯ ಸಭೆಯ ಠರಾವುಗಳಲ್ಲಿ ಚರ್ಚೆ, ವಿಷಯ ದಾಖಲಾತಿ ಆಗದಿದ್ದರೆ ಸಭೆಯ ಔಚಿತ್ಯವೇನು ಎಂದು ಪ್ರಶ್ನಿಸಿದರು. ನಂತರ ಸಭೆಗೆ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ ಸಭೆ ನಡೆಸಿದರೆ ಮಾಧ್ಯಮಗಳಲ್ಲಾದರೂ ದಾಖಲಾಗುತ್ತದೆ ಎಂದರು. ಅದಕ್ಕೆ ಸಭೆ ಸರ್ವಾನುಮತದ ಬೆಂಬಲ ವ್ಯಕ್ತಪಡಿಸಲಿಲ್ಲ.
ಸೂಚಿತ ದಾಖಲಾತಿಗಳಿಲ್ಲದಿದ್ದರೂ ಕನಿಷ್ಟ ಲಭ್ಯ ದಾಖಲೆಗಳ ಆಧಾರದಲ್ಲಿ ಮನೆ ಸಂಖ್ಯೆ ಇತ್ಯಾದಿ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದ ಉಪಾಧ್ಯಕ್ಷರ ಅನಿಸಿಕೆಗೆ ಗ್ರಾಮೀಣಾಭಿವೃದ್ಧಿ ಅಧಕಾರಿಗಳ ಪೂರಕ ಉತ್ತರ, ಸಹಕಾರ ದೊರೆಯಲಿಲ್ಲ. ಸದಸ್ಯರು, ಅಧಿಕಾರಿಗಳ ಬಹುಮತದ ನಿರ್ಣಯದಂತೆ ಮಾನವೀಯತೆ ಆಧಾರದಲ್ಲಿ ಅನುಕೂಲ ಮಾಡಲು ಅದರಿಂದ ಕಾನೂನು ನೀತಿ- ನಿಯಮಗಳಿಗೆ ಅಪಚಾರವಾಗದಂತೆ ಎಚ್ಚರ ವಹಿಸಲು ಸೂಚಿಸಲಾಯಿತು.
ಇ ಸ್ವತ್ತು ಸೇರಿದ ಕೆಲವು ಸರ್ಕಾರಿ ನಿಯಮಗಳು ಜನಸಾಮಾನ್ಯರಿಗೆ ಅನುಕೂಲಮಾಡಲು ತೊಡಕಾಗಿದ್ದು ಈ ತೊಂದರೆ ತಪ್ಪಿಸಲು ಸರ್ಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು. ಹೀಗೆ ಬೇಡ್ಕಣಿ ಗ್ರಾ,ಪಂ, ಸೇರಿದಂತೆ ತಾಲೂಕು, ಜಿಲ್ಲೆಯ ಬಹುತೇಕ ಸ್ಥಳಿಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ನಡುವಿನ ಘರ್ಷಣೆಗೆ ಕಾರಣವಾಗುತ್ತಿರುವ ಸರ್ಕಾರಿ ನೀತಿ-ನಿಯಮಗಳಿಂದ ಬಡಜನರಿಗೇ ತೊಂದರೆ ಆಗುತ್ತಿರುವ ವಾಸ್ತವವನ್ನು ಪ್ರತಿಬಿಂಬಿಸುವಲ್ಲಿ ಇಂದಿನ ಬೇಡ್ಕಣಿ ಗ್ರಾ.ಪಂ. ಘಟನೆ ದೃಷ್ಟಾಂತವಾಯಿತು.
ಸರ್ಕಾರದ ನಿರ್ಧೇಶನದ ಮೇರೆಗೆ ನಾವು ಕೆಲಸ ಮಾಡಬೇಕಾಗುತ್ತದೆ.ಸಭೆಯಲ್ಲಿ ಸರ್ವಾನುಮತದ ನಿರ್ಣಯಗಳ ಬಗ್ಗೆ ಮಾತ್ರ ಠರಾವಿನಲ್ಲಿ ದಾಖಲಿಸಲುಸಾಧ್ಯ
-ಪಿ.ಡಿ.ಓ. ಬೇಡ್ಕಣಿ ಗ್ರಾ.ಪಂ.

ಬಿಸಿಯೂಟದ ಕೋಣೆ ಮೇಲೆ ಬಿದ್ದ ಮರ,ಗಾಯ ಸಿದ್ದಾಪುರ,ಜು.30- ಸಿದ್ಧಾಪುರ ತಾಲೂಕಿನ ಕಾನಗೋಡು
ಹಿ.ಪ್ರಾ.ಶಾಲೆಯ ಬಿಸಿಯೂಟದ ಅಡುಗೆಮನೆ ಮೇಲೆ ಫಲಭರಿತ ಪಪ್ಪಾಯಿ ಮರ ಬಿದ್ದು ಭಾವಣಿಯ ಹೆಂಚು ಮುರಿದು ಹೋಗಿದೆ. ಅಡುಗೆತಯಾರಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿರುವುದರಿಂದ ಬಿಸಿಯೂಟ ತಯಾರಕರಿಗೆ ಸಣ್ಣ ಗಾಯಗಳಾಗಿದ್ದು ಅವರು ಸಿದ್ದಾಪುರ ತಾಲೂಕಾ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆಯ್.ಆರ್.ಬಿ. ಕಂಪನಿ ವಿರುದ್ಧ ಕ.ರಾ.ವೇ.ಪ್ರತಿಭಟನೆ
ಗೋವಾ ಮಂಗಳೂರು ಚತುಶ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಆಯ್.ಆರ್.ಬಿ. ಕಂಪನಿಯಿಂದ ಸ್ಥಳಿಯರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಲು ಇಂದು ಕುಮಟಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಕ.ರಾ.ವೇ. ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ಥಳಿಯರು ಆಯ್.ಆರ್.ಬಿ. ಕಂಪನಿಯಿಂದ ಆಗುತ್ತಿರುವ ತೊಂದರೆ ತಪ್ಪಬೇಕು, ಸಂತೃಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಅನರ್ಹತೆ ರದ್ದು ಅಸಂಭವ
ಹಿಂದಿನ ಸ್ಫೀಕರ್ ರಮೇಶ್ ಕುಮಾರ್ ಮಾಡಿರುವ 17 ಜನ ಶಾಸಕರ ಅಮಾನತ್ ಸುಪ್ರೀಂ ಕೋರ್ಟ್‍ನಲ್ಲಿ ರದ್ಧಾಗುವ ಸಾಧ್ಯತೆ ಕಡಿಮೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹಿಂದೆ ಅಮಾನತ್ ಬಗ್ಗೆ ಮೊದಲೇ ವಿಧಾನಸಭೆಯಿಂದ ನೋಟೀಸ್ ನೀಡಿರಲಿಲ್ಲ ಎನ್ನುವ ಕಾರಣದಿಂದ ನಮ್ಮ ಅನರ್ಹತೆ ರದ್ಧಾಗಿತ್ತು. ಈಗ ಪರಿಸ್ಥಿತಿ ಬೇರೆ ಇದೆ. ಅತೃಪ್ತಶಾಸಕರು ಅಧಿವೇಶನಕ್ಕೆ ಬರಬೇಕಿತ್ತು, ಅಧಿವೇಶನಕ್ಕೆ ಹಾಜರಾಗಿ ವಿಶ್ವಾಸಮತದ ವಿರುದ್ಧ ಮತ ಚಲಾಯಿಸುವ ಅವಕಾಶವಿತ್ತು. ಆದರೆ ಮುಂಬೈ ನಲ್ಲಿ ಅಡಗಿಕುಳಿತು ಜನಾದೇಶ, ಸಂವಿಧಾನದ ಆಶಯ ಧಿಕ್ಕರಿಸಿದ್ದು ಸರಿ ಇಲ್ಲ. ಅವರ ಅನರ್ಹತೆ ರದ್ಧಾಗಬಾರದು ಎಂದು ಅವರು ಹೇಳಿದರು.

ಕಾಗೇರಿ ಸ್ಫೀಕರ್
ರಾಜ್ಯ ವಿಧಾನಸಭೆಯ ಸ್ಫೀಕರ್ ಹುದ್ದೆಗೆ ನಾಳೆ (ಜು.31,ಬುಧವಾರ) ನಡೆಯಲಿರುವ ಚುನಾವಣೆಗೆ ಆಡಳಿತ ಪಕ್ಷ ಬಿ.ಜೆ.ಪಿ.ಯ ಅಭ್ಯರ್ಥಿಯಾಗಿ ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಸುರೇಶ್ ಕುಮಾರ್, ಜಗಧೀಶ್ ಶೆಟ್ಟರ್ ಸೇರಿದಂತೆ ಕೆಲವು ಹಿರಿಯ ಶಾಸಕರಲ್ಲಿ ವಿಶ್ವೇಶ್ವರ ಹೆಗಡೆ ಸಭಾಪತಿಯಾಗುವ ಬಗ್ಗೆ ನಿರೀಕ್ಷೆಗಳಿದ್ದವು.
ಹೆಗಡೆ ಸತತ 6 ಬಾರಿ ಗೆದ್ದು ಹಿರಿಯ ಶಾಸಕರಾದವರು.ಮೂರು ಬಾರಿ ಉತ್ತರ ಕನ್ನಡದ ಹಿಂದಿನ ಅಂಕೋಲಾ ವಿಧಾನಸಭಾ ಕ್ಷೇತ್ರ ಮತ್ತು ಈಗ ಸತತ ಮೂರು ಬಾರಿ ಶಿರಸಿ ಕ್ಷೇತ್ರ ಪ್ರತಿನಿಧಿಸುತಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *