

ಯಲ್ಲಾಪುರ ಕ್ಷೇತ್ರದಿಂದ ಸ್ಫರ್ಧಿಸಲು ಸಿದ್ಧರಾಗುತ್ತಿರುವ ಅರ್ಧಡಜನ್ ನಾಯಕರು!
ಮೈತ್ರಿ ಮುಂದುವರಿಕೆ ಸಾಧ್ಯತೆ?
(ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಮೈತ್ರಿ ಫಲನೀಡುವುದು ಕಷ್ಟ ಎನ್ನುವ ಅನುಭವದ ನಂತರವೂ ಬರಲಿರುವ ಉಪಚುನಾವಣೆಗಳಲ್ಲಿ ಮತ್ತೆ ಮೈತ್ರಿ ಸಾಧ್ಯವೆ? ಎನ್ನುವ ಕುತೂಹಲ ಎಲ್ಲರಲ್ಲಿದೆ.)
ಉಪಚುನಾವಣೆ ನಡೆಯಲಿರುವ ಕ್ಷೇತ್ರ, ಜಿಲ್ಲೆಗಳ ಕಾಂಗ್ರೆಸ್ ಉಸ್ತುವಾರಿಗಳು-ಯಲ್ಲಾಪುರ- ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ಶಿವಾಜಿನಗರ- ಜಮೀರ್ ಅಹಮ್ಮದ್, ಸಿ.ಎಂ. ಇಬ್ರಾಹಿಂ. ಚಿಕ್ಕಬಳ್ಳಾಪುರ- ರಮೇಶ್ ಕುಮಾರ್, ಹೊಸಪೇಟೆ-ಡಿ.ಕೆ.ಶಿವಕುಮಾರ್, ಉಗ್ರಪ್ಪ
ಮಸ್ಕಿ- ಈಶ್ವರ್ ಖಂಡ್ರೆ, ಹೊಸಕೋಟೆ- ಕೃಷ್ಣಬೈರೇಗೌಡ,ಡಿ.ಕೆ.ಶಿ., ಕಾಗವಾಡ- ಸತೀಶ್ ಜಾರಕಿಹೊಳೆ, ಗೋಕಾಕ್- ಸತೀಶ್ ಜಾರಕಿಹೊಳೆ,ಶಿವಾನಂದ ಪಾಟೀಲ್, ಅಥಣಿ- ಎಂ.ಬಿ.ಪಾಟೀಲ್, ಹಿರೇಕೆರೂರು- ಎಚ್.ಕೆ.ಪಾಟೀಲ್, ಹುಣಸೂರು- ಮಹಾದೇವಪ್ಪ, ರಾಣೆಬೆನ್ನೂರು- ಎಚ್.ಎಂ. ರೇವಣ್ಣ ಕೆ.ಆರ್. ಪೇಟೆ- ಚೆಲುವರಾಯಸ್ವಾಮಿ, ಮಹಾಲಕ್ಷ್ಮೀ ಲೇಔಟ್- ಬಾಲಕೃಷ್ಣ, ಜಮೀರ್ ಅಹಮ್ಮದ್, ಯಶವಂತಪುರ- ಜಮೀರ್ ಅಹಮ್ಮದ್, ಎಂ.ಕೃಷ್ಣಪ್ಪ, ಕೆ.ಆರ್.ಪುರಂ- ಜಾರ್ಜ್, ರಾಮಲಿಂಗಾರೆಡ್ಡಿ, ರಾಜರಾಜೇಶ್ವರಿ ನಗರ- ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ
ಕರ್ನಾಟಕದ 17 ಶಾಸಕರ ಅನರ್ಹತೆ, ರಾಜೀನಾಮೆ ಪ್ರಹಸನ ಮತ್ತೊಂದು ಚುನಾವಣೆ ತಂದಿಟ್ಟಿರುವುದಂತೂ ಖಾತ್ರಿ.
ಈಗ ಈ 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಈ ಚುನಾವಣೆಗಳಲ್ಲಿ ಆಡಳಿತಾರೂಢ ಬಿ.ಜೆ.ಪಿ. ಗೆ ಎದುರಾಗಿ ಜಾತ್ಯಾತೀತ ಅಭ್ಯರ್ಥಿಗಳಾಗಿ ಸ್ಫರ್ಧಿಸಲಿರುವವರಿಗೆ ಮೈತ್ರಿ ನೆರವಾಗುತ್ತೋ ಎನ್ನುವ ಸ್ಪಸ್ಟತೆ ಇಲ್ಲ. ಆದರೆ ಕಾಂಗ್ರೆಸ್ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗುತ್ತಿರುವ ಅಭ್ಯರ್ಥಿಗಳ ಹೆಸರುಗಳನ್ನು ನೋಡಿದರೆ ಈ ಉಪಚುನಾವಣೆಯನ್ನು ಕಾಂಗ್ರೆಸ್, ಜೆ.ಡಿ.ಎಸ್. ಜೊತೆಗೂಡಿ ಎದುರಿಸುವ ವಿಷಯದಲ್ಲಿ ಅನುಮಾನಗಳಿದ್ದಂತೆ ಕಾಣುತ್ತಿಲ್ಲ.
ಕಾಂಗ್ರೆಸ್ ಸಭೆಯಲ್ಲಿ ಪ್ರಸ್ಥಾಪವಾದ ಹೆಸರುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಹೆಸರುಗಳನ್ನು ನೋಡಿದರೆ ಕಾಂಗ್ರೆಸ್, ಜೆ.ಡಿ.ಎಸ್. ಗಳು ಮತ್ತೆ ಜಂಟಿಯಾಗಿ ಚುನಾವಣೆ ಎದುರಿಸುವಲ್ಲಿ ಅನುಮಾನಗಳಿದ್ದಂತಿಲ್ಲ. ಯಲ್ಲಾಪುರ ಕ್ಷೇತ್ರದಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ನಿಂದ ಕಡಿಮೆ ಅಂತರದಲ್ಲಿ ಗೆದ್ದಿದ್ದರು. ಈಗ ಅವರು ಅಥವಾ ಮತ್ತ್ಯಾವುದೇ ಬಿ.ಜೆ.ಪಿ. ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಸ್ಫರ್ಧೆ ಮಾಡಬೇಕಾಗುತ್ತದೆ.
ಹಾಗಾಗಿ, ಕಾಂಗ್ರೆಸ್‍ನಿಂದ ಈಗಿನ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ, ಅವರ ಸಂಬಂಧಿ ಶಿರಸಿ ಎ.ಪಿ.ಎಂ.ಸಿ. ಅಧ್ಯಕ್ಷ ಸುನಿಲ್ ನಾಯ್ಕ, ಸಿ.ಎಫ್.ನಾಯ್ಕ ಮಾಳಂಜಿ, ಮಾಜಿ ಸಚಿವ ದೇಶಪಾಂಡೆ ಪುತ್ರ ಪ್ರಶಾಂತ್ ದೇಶಪಾಂಡೆ ಅಥವಾ ಜಾ.ದಳದ ಶಶಿಭೂಷಣ ಹೆಗಡೆ, ರವೀಂದ್ರನಾಥ ನಾಯ್ಕ ಹೆಸರುಗಳು ಕೇಳಿ ಬರುತ್ತಿವೆ.
ಶಿವರಾಮ ಹೆಬ್ಬಾರ್ ವಿರುದ್ಧ ಪ್ರಶಾಂತ ದೇಶಪಾಂಡೆ ಅಥವಾ ಭೀಮಣ್ಣ ನಾಯ್ಕ ಸ್ಫರ್ಧೆ ನೀಡಬಲ್ಲ ಅಭ್ಯರ್ಥಿಗಳು. ಇವರೊಂದಿಗೆ ಕೆಲವು ಹೆಸರುಗಳು ಅವುಗಳಲ್ಲಿ ಜಾ.ದಳದ ಶಶಿಭೂಷಣ ಹೆಗಡೆ ಮತ್ತು ಎ. ರವೀಂದ್ರ ಹೆಸರುಗಳು ಸೇರಿಕೊಂಡಿರುವುದು ಮೈತ್ರಿ ಸಾಧ್ಯತೆಯನ್ನು ಎತ್ತಿತೋರಿಸುವಂತಿವೆ.
ಪ್ರಶಾಂತ್ ದೇಶಪಾಂಡೆ ಒಮ್ಮೆ ಲೋಕಸಭೆಗೆ ಸ್ಫರ್ಧಿಸಿ ಸೋತವರು. ಭೀಮಣ್ಣ ನಾಯ್ಕ ಲೋಕಸಭೆ, ವಿಧಾನಸಭೆಗಳಿಗೆ ಸ್ಫರ್ಧಿಸಿ ಸೋತವರು. ಜಾದಳದ ಶಶಿಭೂಷಣ ಹೆಗಡೆ ಮತ್ತು ಎ.ರವೀಂದ್ರ ಯಾನೆ ರವೀಂದ್ರನಾಥ ನಾಯ್ಕ ವಿಧಾನಸಭೆಗೆ ಸ್ಫರ್ಧಿಸಿ ಸೋತವರು.
ಹೀಗೆ ಹಳೆಮುಖಗಳನ್ನಿಟ್ಟುಕೊಂಡು ಅತೃಪ್ತ ಶಾಸಕರನ್ನು ಮಣಿಸಲು ಯೋಜಿಸಿರುವ ಕಾಂಗ್ರೆಸ್ ಮತ್ತೆ ಜಾತ್ಯಾತೀತ ಜನತಾದಳದ ಮೈತ್ರಿ ಹೊಂದಾಣಿಕೆ ಬಯಸುತ್ತಿಲ್ಲ ಎನ್ನುವುದು ಸಧ್ಯದ ವರ್ತಮಾನ. ಆದರೆ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವ ಯೋಜನೆ ಹಾಕಿಕೊಂಡಿರುವ ಕುಮಾರಸ್ವಾಮಿ ಮತ್ತು ದೇವೇಗೌಡರು ಮತ್ತೊಮ್ಮೆ ಒಂದು ಕೈ ನೋಡೋಣ ಎಂದರೆ ಕರ್ನಾಟಕದಲ್ಲಿ ಮೈತ್ರಿ ಸಾಧ್ಯತೆಯನ್ನು ಪುನ: ಪರೀಕ್ಷೆಗೊಡ್ಡಿದಂತೆ. ಉತ್ತರಕನ್ನಡ, ಮತ್ತು ಉತ್ತರ ಕರ್ನಾಟಕದಲ್ಲಿ ಮೈತ್ರಿ ಪ್ರಯೋಗ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯಬಹುದೆ? ಎನ್ನುವ ಉತ್ತರಕ್ಕೆ ಕಾಯಬೇಕಷ್ಟೆ.
