

ವಿಶೇಶಚೇತನರಿಗೆ ಹಾಲು,ಸಿಹಿ ಹಂಚಿ ನಾಗರ ಪಂಚಮಿ ಆಚರಣೆ
ನಿರಂತರ ಮಳೆ, ಮಹಾಪೂರಗಳ ನಡುವೆ ನಾಡಿನಾದ್ಯಂತ ಇಂದು ನಾಗರ ಪಂಚಮಿ ಆಚರಿಸಲಾಯಿತು.
ಬಹುತೇಕ ಕಡೆ ಕಲ್ಲುನಾಗರ, ಮೂರ್ತಿನಾಗರ, ಜೀವಂತನಾಗರ ದೇವರ ಆರಾಧನೆ ನಡೆದರೆ, ಕಾರವಾರದಲ್ಲಿ ನಗರದ ಗಣ್ಯರು ವಿಭಿನ್ನವಾಗಿ ನಾಗರಪಂಚಮಿ ಆಚರಿಸಿದರು.
ಇಲ್ಲಿಯ ಖುರಸಾವಾಡಾ ದಲ್ಲಿರುವ ಆಶಾನಿಕೇತನ ವಿಶೇಶಚೇತನ ಮಕ್ಕಳ ಶಾಲೆಗೆ ತರಳಿ ನಾಗಪಂಚಮಿ ಆಚರಿಸಿದ ಜನಶಕ್ತಿ ಸಂಘಟನೆಯ ಮುಖ್ಯಸ್ಥ ಮಾಧನ ನಾಯ್ಕ ನೇತೃತ್ವದ ತಂಡ ಇಲ್ಲಿಯ ಮಕ್ಕಳಿಗೆ ಸಿಹಿ-ಹಾಲು ವಿತರಿಸಿ, ಊಟ ಬಡಿಸುವ ಮೂಲಕ ನಾಗರಪಂಚಮಿ ಆಚರಿಸಿತು.
ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಕಲ್ಲು, ಕಲ್ಲಿನ ನಾಗರ ಮೂರ್ತಿಗೆ ಹಾಲು ಸುರಿದು ಹಾಳು ಮಾಡುವ ಬದಲು ಇಂಥ ಅಸಹಾಯಕ, ದುರ್ಬಲ ಮಕ್ಕಳು,ಹಿರಿಯರಿಗೆ ಹಾಲು,ಹಣ್ಣು- ಸಿಹಿ ವಿತರಿಸುವ ಮೂಲಕ ನಾಗರ ಪಂಚಮಿ ಆಚರಿಸಿದರೆ ಅದರಿಂದಲೂ ಫಲ ದೊರೆಯುತ್ತದೆ ಎಂದರು



