

ನಿರಂತರ ಮಳೆ,ಗಾಳಿ ಹಿನ್ನೆಲೆಯಲ್ಲಿ ಆ.7 ರ ಬುಧವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಶಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಪ್ರಕಟಣೆ ತಿಳಿಸಿದೆ.
ಈ ವಾರದ ಕೊನೆಗೆ ಮಳೆನಾಡು!
ಈ ವಾರದ ಪ್ರಾರಂಭದಿಂದ ಆರಂಭವಾದ ಮಳೆ ಅಬ್ಬರ ಮಲೆನಾಡಿನ ಜನರನ್ನು ದಿಕ್ಕೆಡಿಸಿದೆ. ಕೊಡಗು, ಚಿಕ್ಕಮಗಳೂರು,ಶೃಂಗೇರಿ, ತೀರ್ಥಹಳ್ಳಿ ಹೊಸನಗರ, ಸಾಗರ ಸಿದ್ಧಾಪುರ,ಶಿರಸಿ,ಯಲ್ಲಾಪುರ,ದಾಂಡೇಲಿ, ಬೆಳಗಾವಿ,ಗೋವಾ ಸೇರಿದಂತೆ ಮಲೆನಾಡು, ಪಶ್ಚಿಮಘಟ್ಟಗಳ ಅಡಿಯಲ್ಲಿ ಈ ವಾರಪೂರ್ತಿ ಮಳೆ ತನ್ನ ರುದ್ರ ನರ್ತನ ನಡೆಸಲಿದೆ. ಆ.8,9, ಕ್ಕೆ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದ್ದು ಈ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಶಿಸಬೇಕಿದೆ ಎಂದು ಹವಾಮಾನ ಇಲಾಖೆಯ ಉನ್ನತ ಮೂಲಗಳು ವರದಿ ಮಾಡಿವೆ.
ಮಲೆನಾಡು, ಕರಾವಳಿಯ ಜನತೆ ಈ ಸಮಯದಲ್ಲಿ ಎಚ್ಚರದಿಂದಿರಲು, ತಾಲೂಕು ಮತ್ತು ಜಿಲ್ಲಾಡಳಿತಗಳು ಸಿದ್ಧತೆಯಲ್ಲಿರಲು ಸೂಚಿಸಲಾಗಿದೆ. ಮಳೆ ನಿಂತು ಹೋಗಬಾರದೆ!
ಶಿರಸಿಯಲ್ಲಿ 190 ಮಿ.ಮೀ.,ಸಿದ್ಧಾಪುರದಲ್ಲಿ 282ಮಿ.ಮೀ. ಮಳೆ ಸೇತುವೆಗಳ ಮೇಲೆಲ್ಲಾ ನೀರಿನ ಹೊಳೆ! ಅಲ್ಲಲ್ಲಿ ಭೂ ಕುಸಿತ ಭತ್ತ, ಅಡಿಕೆ,ಕ್ಷೇತ್ರಗಳೆಲ್ಲಾ ನೀರಿನಿಂದ ಭರ್ತಿ.ಜಿಲ್ಲಾಡಳಿತಕ್ಕೆ ಇದರ ನಿರ್ವಹಣೆಯೇ ಕಿರಿಕಿರಿ. ಜಿಲ್ಲೆಯ 8-10 ಕಡೆ ಗಂಜಿಕೇಂದ್ರ ಪ್ರಾರಂಭ ಮಳೆ ನಿಲ್ಲದಿದ್ದರೆ ನಿಂತ ನೆಲವೇ ಬಿರಿಯುವ ಭಯ. ಗಾಳಿಗೆ ಬಿದ್ದ ಮರಗಳು ಕರೆಂಟ್ ಕಂಬಗಳ ಲೆಕ್ಕ ಪಕ್ಕಾ ನೂರಾರು.


