ಶಿವಮೊಗ್ಗ ನಗರದ ಸಂಸ್ಕøತ ಭಾರತೀ ಮತ್ತು ತರುಣೋದಯ ಸಂಸ್ಕøತ ಸೇವಾ ಸಂಸ್ಥೆಯ ವತಿಯಿಂದ ಸಂಸ್ಕøತೋತ್ಸವದ ಪ್ರಯುಕ್ತ ದಿನಾಂಕ: 08-09-2019 ರ ಭಾನುವಾರ ಬೆಳಿಗ್ಗೆ 9-00 ಗಂಟೆಗೆ ಸಂಸ್ಕøತ ವಿದ್ಯಾರ್ಥಿಗಳಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಸ್ಕøತದ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ಕರ್ನಾಟಕ ರಾಜ್ಯ ಮಟ್ಟದ “29 ನೇ ಸಂಸ್ಕøತ ಭಾಷಣ ಸ್ಪರ್ಧೆ” ಯನ್ನು ಶಿವಮೊಗ್ಗ ನಗರದÀ ಸಂಸ್ಕøತ ಭವನದಲ್ಲಿ ಏರ್ಪಡಿಸಲಾಗಿದೆ.
ನಿಯಮಗಳು: ಸಂಸ್ಕøತ ಭಾಷೆಯಲ್ಲೇ ಭಾಷಣ ಮಾಡಬೇಕು, ಭಾಷಣದ ಅವಧಿ 6 ನಿಮಿಷಗಳು ಮಾತ್ರ, 18 ವರ್ಷದಿಂದ 25 ವರ್ಷದ ಒಳಗಿನ ಸಂಸ್ಕøತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ದಿನಾಂಕ, 01-09-2019, ಒಂದು ವಿದ್ಯಾ ಸಂಸ್ಥೆಯಿಂದ 2 ವಿದ್ಯಾರ್ಥಿಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಹೊರ ಊರಿನಿಂದ ಬಂದ ಸ್ಪರ್ಧಿಗಳಿಗೆ ಒಂದು ಮಾರ್ಗದ ಬಸ್ ಪ್ರಯಾಣದ ಕನಿಷ್ಠ ವೆಚ್ಚದ ದರವನ್ನು ಕೊಡಲಾಗುವುದು, ಸ್ಪರ್ಧಿಗಳು ಭಾಷಣದ ಅನಂತರ ಆಶುಭಾಷಣದಲ್ಲಿ ಭಾಗವಹಿಸಲೇಬೇಕು, ರಾಜ್ಯಮಟ್ಟದ ಭಾಷಣ ಸ್ಪರ್ಧೆಯ ಫಲಿತಾಂಶಕ್ಕೆ ಆಶುಭಾಷಣದಲ್ಲಿ ಬಂದ ಅಂಕವನ್ನು ಸೇರಿಸಲಾಗುತ್ತದೆ. ಆಶುಭಾಷಣದ ಅವಧಿ ಎರಡು ನಿಮಿಷಗಳು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಪ್ರಥಮ ಬಹುಮಾನ ರೂ.5229=00, ದ್ವಿತೀಯ ಬಹುಮಾನ ರೂ.4229=00, ತೃತೀಯ ಬಹುಮಾನ ರೂ.3229=00, ನಾಲ್ಕನೇ ಬಹುಮಾನ ರೂ,2629=00, ಐದನೇ ಬಹುಮಾನ ರೂ.1529=00, ಆರನೇ ಬಹುಮಾನ ರೂ,1029=00, ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಕಾಲೇಜಿನ/ಪಾಠ ಶಾಲೆಯ ವತಿಯಿಂದ ಅಧಿಕೃತ ಪತ್ರದೊಂದಿಗೆ ದಿನಾಂಕ 01.09.2019 ರ ಒಳಗಾಗಿ ಅ.ನಾ.ವಿಜಯೇಂದ್ರರಾವ್, ಪ್ರಧಾನ ಕಾರ್ಯದರ್ಶಿ, ತರುಣೋದಯ ಸಂಸ್ಕøತ ಸೇವಾ ಸಂಸ್ಥೆ, ಸಂಸ್ಕøತ ಭವನ, ಶ್ರೀ ಲಕ್ಮೀನಾರಾಯಣ ದೇವಾಲಯ ಮಾರ್ಗ: (ಬಿ.ಬಿ.ರಸ್ತೆ), ಶಿವಮೊಗ್ಗ, ದೂರವಾಣಿ: 9448790127, ಇಲ್ಲಿಗೆ ಕಳುಹಿಸಿಕೊಡಬೇಕಾಗಿ ಸಂಸ್ಕøತ ಭಾರತಿ ಶಿವಮೊಗ್ಗ ನಗರ ಅಧ್ಯಕ್ಷರಾದ ಎನ್.ವಿ.ಶಂಕರನಾರಾಯಣ ಕೋರಿದ್ದಾರೆ.