

ಮಲೆನಾಡಿನ ಮಳೆ ಸಾರ್ವಜನಿಕರು, ಸ್ಥಳಿಯರನ್ನು ಕಂಗೆಡಿಸಿದೆ. ಒಂದು ಗಂಟೆ ಕೆಳಗೆ ಜೋಗ (ಮಾವಿನಗುಂಡಿ-ಹೊನ್ನಾವರ) ಹೊನ್ನಾವರ ರಸ್ತೆ ಕುಸಿದಿದ್ದು, ಖಾಸಗಿ ವಾಹನ ಸಾಗಾಟ ನಿರ್ಬಂಧಿಸಲಾಗಿದೆ.
ಸರ್ಕಾರಿ ಸಾರಿಗೆ ವಾಹನ ಸಂಚಾರ ನಿರ್ಬಂಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಜೋಗದ ಹಳೆ ಬ್ರಿಟೀಷ್ ಬಗ್ಲೆ ಬಳಿ ಶರಾವತಿ ನೀರು ನುಗ್ಗಿ ಕಟ್ಟಡ ಬೀಳುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ರಾಜ್ಯ, ದೇಶದ ನಾನಾ ಭಾಗಗಳಿಂದ ಜೋಗ, ಉತ್ತರ ಕನ್ನಡ ಪ್ರವಾಸಕ್ಕೆ ಬರುವವರು ಪ್ರವಾಸ ಮುಂದೂಡುವುದು ಅವರ ಸುರಕ್ಷತೆ ದೃಷ್ಟಿಯಿಂದ ಯುಕ್ತ. ರಸ್ತೆ ಮೇಲೆ ಅಲ್ಲಲ್ಲಿ ಮರಗಳು ಬೀಳುತ್ತಿರುವುದರಿಂದ ಸ್ಥಳಿಯರು, ಪ್ರವಾಸಿಗರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದೆ.


