
ಸಿದ್ದಾಪುರ; ಭೀಕರ ಪ್ರವಾಹದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಶ್ರೀರಾಮಚಂದ್ರಾಪುರ ಮಠ ತನ್ನ ಸಹಾಯಹಸ್ತ ಚಾಚಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಭಾನ್ಕುಳಿಯಲ್ಲಿ ಇರುವ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಸ್ವ-ಇಚ್ಛೆಯಿಂದ ಆರಂಭಿಸಿದೆ. ಯಾವುದೇ ಸರ್ಕಾರಿ ನೆರವು ಅಥವಾ ಪ್ರತಿಫಲಾಪೇಕ್ಷೆ ಇಲ್ಲದೆ ಮಠ ತನ್ನ ಕರ್ತವ್ಯ ಎಂದು ಭಾವಿಸಿ ಈ ಕೇಂದ್ರ ಆರಂಭಿಸುತ್ತಿದೆ ಎಂದು ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದ್ದಾರೆ.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ರಾಮಾಯಣ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು ಶನಿವಾರ ಆಶೀರ್ವಚನದಲ್ಲಿ ಈ ವಿಷಯ ಪ್ರಕಟಿಸಿ
ರಾಜ್ಯದ ಜನ ಭೀಕರ ಪ್ರವಾಹದಿಂದ ತತ್ತರಿಸಿದ್ದಾರೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಬೇಕಾದ ಸಮಯವಿದು. ಗೋಸ್ವರ್ಗದಲ್ಲಿ ಸಾವಿರಾರು ಮಂದಿಗೆ ಆಶ್ರಯ ನೀಡಲು ಸ್ಥಳಾವಕಾಶವಿದೆ. ಊಟೋಪಚಾರ ಒದಗಿಸಲು ವ್ಯವಸ್ಥೆಯಿದೆ. ಪ್ರವಾಹ ಸಂತ್ರಸ್ತರು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಇದನ್ನು ಬಳಸಿಕೊಳ್ಳಬಹುದು. ಗೋಸ್ವರ್ಗವು ನೆರೆ ಸಂತ್ರಸ್ತರ ಪಾಲಿಗೂ ಸ್ವರ್ಗವಾಗಬೇಕು ಎನ್ನುವುದು ನಮ್ಮ ಬಯಕೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಇನ್ನೂ ಯಾವ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬ ಬಗ್ಗೆ ಮಠದಿಂದ ಚಿಂತನೆ ನಡೆದಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
………………………………………………………………………………………………………………………………………………………………………
ಪರಿಹಾರ ಸಾಮಗ್ರಿ ಸಂಗ್ರಹ: ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಸಂಗ್ರಹಕ್ಕೆ ಕೂಡಾ ಶ್ರೀಮಠ ವ್ಯವಸ್ಥೆ ಮಾಡಿದೆ. ಮಂಗಳೂರಿನ ನಂತೂರು ಶ್ರೀಭಾರತೀ ಸಮೂಹಸಂಸ್ಥೆಯ ಸೇವಾಸಮಿತಿ ಕಚೇರಿ, ಮಾಣಿಮಠ ಕಚೇರಿ, ಉತ್ತರ ಕನ್ನಡ ಜಿಲ್ಲೆಯ ಕೆಕ್ಕಾರು ಮಠ ಕಚೇರಿ, ಅಪ್ಸರಕೊಂಡ ಮಠದ ಕಚೇರಿ, ಭಾನ್ಕುಳಿ ಗೋಸ್ವರ್ಗ ಆವರಣದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಗುತ್ತದೆ.
ಎಲ್ಲರ ನಡಿಗೆ ಸಂತೃಸ್ತರ ಕಡೆಗೆ, ಭಾದಿತರ ನಡಿಗೆ ಮನೆ ಕಡೆಗೆ
ಕಳೆದ ವಾರದ ಮಳೆ, ಪ್ರವಾಹಗಳಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಗಳೆಲ್ಲಾ ಪ್ರವಾಹದ ಮಹಾಪೂರದಲ್ಲಿ ಮುಳುಗಿವೆ.
ಈ ಪ್ರವಾಹ ಸಂತೃಸ್ತರ ನೆರವಿಗೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ಏಕವ್ಯಕ್ತಿ ಸರ್ಕಾರದಿಂದಾಗಿ ಜನರಿಗೆ ಸರಿಯಾದ ಸರ್ಕಾರದ ಸ್ಫಂದನ ನೆರವು ದೊರೆಯದ ಅಸಮಧಾನದ ನಡುವೆ ಸೆಲಿಬ್ರಿಟಿಗಳು, ಸಂಘ ಸಂಸ್ಥೆಗಳು ಭಾದಿತರ ಕಣ್ಣೊರೆಸುವ ಕೆಲಸ ಮಾಡುತ್ತಿವೆ.
ಉತ್ತರ ಕರ್ನಾಟಕದಲ್ಲಿ ಸ್ವಂತ ಶಿವರಾಜಕುಮಾರ ಮತ್ತು ಪುನೀತ್ ರಾಜಕುಮಾರ ನೆರವಿಗೆ ಧಾವಿಸಿದ್ದು ನಾವು ಸ್ಟಾರ್‍ಡಮ್ ಅನುಭವಿಸಲು ಕಾರಣ ಕನ್ನಡದ ಜನತೆ ಹಾಗಾಗಿ ನಾವು, ನಮ್ಮ ಅಭಿಮಾನಿಗಳು ಕಷ್ಟದಲ್ಲಿರುವ ಜನರ ಸೇವೆಗೆ ಧಾವಿಸುತ್ತೇವೆ ಎಂದಿದ್ದಾರೆ. ನಟ ವಿಜಯರಾಘವೇಂದ್ರ ಸೇರಿದಂತೆ ಅನೇಕ ನಟ,ನಟಿಯರು ಸಂತೃಸ್ತರ ಜೊತೆಗೆ ನಾವಿದ್ದೇವೆ ಎಂದು ಸಾರಿದ್ದಾರೆ.
ಇನ್ಫೋಸಿಸ್ ಸುಧಾಮೂರ್ತಿ ಸೇರಿದಂತೆ ಪ್ರಮುಖ ಉದ್ಯಮಿಗಳು ಕರ್ನಾಟಕದ ಪ್ರವಾಹ ಸಂತೃಸ್ತರ ನೆರವಿಗೆ ನಿಂತಿದ್ದಾರೆ. ಉತ್ತರಕನ್ನಡದಲ್ಲೂ ಸ್ಥಳಿಯ ಸಂಘ ಸಂಸ್ಥೆಗಳು ಸಂತೃಸ್ತರ ನೆರವಿಗೆ ಬಂದಿವೆ. ಶನಿವಾರ ಜಿಲ್ಲಾ ಕಾಂಗ್ರೆಸ್ ಸಮೀತಿ ಸಂತೃಸ್ತರ ಕೇಂದ್ರಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ.
ಶಿರಸಿ ಎ.ಪಿ.ಎಂ.ಸಿ. ಅಧ್ಯಕ್ಷ ಸುನಿಲ್ ನಾಯ್ಕ ತಂಡ ತಾವು ಸಂಗ್ರಹಿಸಿದ ವಸ್ತುಗಳನ್ನು ಸಂತೃಸ್ತರ ಶಿಬಿರಗಳಿಗೆ ತೆರಳಿ ನೀಡಿದೆ. ಇಂದು ಆಳ್ವಾ ಫೌಂಡೇಶನ್ ಮತ್ತು ಭಾರತೀಯ ವೈದ್ಯಕೀಯ ಸಂಘಗಳು ಸಂತೃಸ್ತರನ್ನು ಸಂದರ್ಶಿಸಿ, ಉಪಚಾರ ನೀಡಿದ್ದಾರೆ.
ಸಿದ್ಧಾಪುರ ತಾ.ಪಂ. ಸದಸ್ಯ ನಾಶಿರ್‍ಖಾನ್ ಸಂತೃಸ್ತರೊಂದಿಗೆ ಕ್ಯಾಂಪ್ ಫೈರ್ ಮಾಡಿ ಹಾಡಿ ರಂಜಿಸುವ ಮೂಲಕ ಸಂತೃಸ್ತರ ಬವಣೆಗೆ ಮನೋರಂಜನೆಯ ಔಷದೋಪಚಾರ ಮಾಡಿದ್ದಾರೆ. ಅಂದಹಾಗೆ ಇಂದು ಮಳೆಯ ಆರ್ಭಟ ತಗ್ಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಂತೃಸ್ತರ ನಡಿಗೆ ಮನೆಕಡೆಗೆ ಎನ್ನಲಡ್ಡಿಯೇನಿಲ್ಲ.
