

ಮಹಾಮಳೆ ಪ್ರವಾಹದಿಂದ ಕಂಗೆಟ್ಟ ಜನರ ಬಳಿ ಜನಪ್ರತಿನಿಧಿಗಳು ತೆರಳುತ್ತಿರುವುದು ಸಾಮಾನ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಆಯಾ ಕ್ಷೇತ್ರದ ಶಾಸಕರು ತೆರಳಿ ಸಾಂತ್ವನ ಹೇಳಿ ನೆರವಾಗುತಿದ್ದಾರೆ. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕಳೆದ 2-3 ದಿವಸಗಳಿಂದ ನೆರೆ ಸಂತೃಸ್ತರ ಗ್ರಾಮಗಳಿಗೆ ಭೇಟಿ ಕೊಡುತಿದ್ದಾರೆ. ಮಳೆನಿಂತು, ಪ್ರವಾಹ ತಗ್ಗಿದ ಮೇಲೆ ಸಂತೃಸ್ತರನ್ನು ಕಾಣಲು ಹೋಗುತ್ತಿರುವ ಅನಂತಕುಮಾರ ಹೆಗಡೆಗೆ ಕಿತ್ತೂರಿನಲ್ಲಿ ನಿನ್ನೆ ಜನತೆ ಕ್ಲಾಸ್ ತೆಗೆದುಕೊಂಡಿದ್ದರು.
6 ಬಾರಿ ಸಂಸದನಾಗಿ ಈಗ ಬರುತಿದ್ದೀಯಾ? ಎಂದು ಜನರು ತರಾಟೆಗೆ ತೆಗೆದುಕೊಳ್ಳುತಿದ್ದಂತೆ ಕಂಗಾಲಾದ ಅನಂತ ಹೆಗಡೆ ವಿಡಿಯೋ ಮಾಡುತಿದ್ದ ಯುವಕರನ್ನು ಹೆದರಿಸಿ ಕಾಲುಕಿತ್ತ ಪ್ರಸಂಗ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅನಂತಕುಮಾರ ಹೆಗಡೆಗೆ ಧಿಕ್ಕಾರ- ಜನಪ್ರತಿನಿಧಿಯಾಗಿ ಉಡಾಫೆ, ಬೇಜವಾಬ್ಧಾರಿಯಿಂದ ವರ್ತಿಸುವ ಅನಂತಕುಮಾರ ಹೆಗಡೆಯವರಿಗೆ ಮುಂಡಗೋಡಿನಲ್ಲಿ ಇಂದು ಜನರು ಬೆವರಿಳಿಸಿದ ಪ್ರಸಂಗ ನಡೆದಿದೆ. ಮುಂಡಗೋಡಿನ ಚಿಗಳ್ಳಿ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿದ ಅನಂತಕುಮಾರ ಹೆಗಡೆ ವಿರುದ್ಧ ಜನತೆ ಧಿಕ್ಕಾರ ಕೂಗಿದರು. ಜನಪ್ರತಿನಿಧಿಯಾಗಿ ಜನರಿಗೆ ಸ್ಫಂದಿಸದ ಹೆಗಡೆಗೆ ಧಿಕ್ಕಾರ ಎಂದು ಜನತೆ ಅನಂತಕುಮಾರ ಹೆಗಡೆ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದರು. ಇದೇ ರೀತಿ ಉತ್ತರಕನ್ನಡ ಜಿಲ್ಲೆಯ ಕೆಲವೆಡೆ ಹೆಗಡೆ ನಡತೆ, ನಡವಳಿಕೆ ವಿರುದ್ಧ ಅಲ್ಲಲ್ಲಿ ಜನತೆ ವಿರೋಧ ವ್ಯಕ್ತಪಡಿಸುತ್ತಿರುವುದು ಈ ವಾರದ ವಿಶೇಶಸುದ್ದಿಗಳಲ್ಲೊಂದಾಗಿದೆ.
