ಸಂತೃಸ್ತರಿಗೆ ತಲಾ 5 ಸಾವಿರ ನಗದು, ಆಹಾರ-ಧಾನ್ಯ ವಿತರಿಸಿದ ಭೀಮಣ್ಣನಾಯ್ಕ
ಅನಿಶ್ಚಿತತೆ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಸಂತೃಸ್ತರ ಭವಿಷ್ಯ ರೂಪಿಸುವುದ್ಹ್ಯಾಗೆ?
ಸರ್ಕಾರದ ಅನಿಶ್ಚಿತತೆ, ಗೊಂದಲದ ನಡುವೆ ಉತ್ತರಕನ್ನಡ ಜಿಲ್ಲಾಡಳಿತ ಮಳೆ,ಪ್ರವಾಹದ ತೊಂದರೆಗೆ ಪರಿಣಾಮಕಾರಿಯಾಗಿ ಸ್ಫಂದಿಸಿದೆ ಎಂದುಕಾಂಗ್ರೆಸ್ ಮುಖಂಡ ಭೀಮಣ್ಣ ನಾಯ್ಕ ಶ್ಲಾಘಿಸಿದ್ದಾರೆ.
ಇಂದು ಸಿದ್ಧಾಪುರ (ಉ.ಕ.) ಹಳ್ಳಿಬೈಲ್ ಮತ್ತು ಅಕ್ಕುಂಜಿ ಹಾಗೂ ಕಲ್ಯಾಣಪುರಗಳ ಪ್ರವಾಹ ಸಂತೃಸ್ತ 35 ಕುಟುಂಬಗಳಿಗೆ ಆಹಾರಧಾನ್ಯಗಳ ಜೊತೆಗೆ ತಲಾ 5 ಸಾವಿರ ವೈಯಕ್ತಿಕ ನೆರವು ನೀಡಿದ ಬಳಿಕ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಸರ್ಕಾರದ ಅನಿಶ್ಚಿತೆ ಮುಂದುವರಿದಿದೆ. ಜನರು ಕಷ್ಟ-ನಷ್ಟದಲ್ಲಿರುವ ಸಮಯದಲ್ಲಿ ಸರ್ಕಾರದ ಏಕವ್ಯಕ್ತಿ ಪ್ರದರ್ಶನ ನಡೆಯುತ್ತಿದೆ. ರಾಜ್ಯದ ಜನರ ಭಾವನೆಗಳಿಗೆ ವಿರುದ್ಧವಾಗಿ ವರ್ತಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಬಿ.ಜೆ.ಪಿ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಎಲ್ಲಾ ತಾಲೂಕುಗಳ ಸಂತೃಸ್ತರು, ಭಾದಿತರ ನೆರವಿಗೆ ನಿಂತಿದೆ. ಸರ್ಕಾರದ ಹುಡುಗಾಟದ ನಡುವೆ ಜಿಲ್ಲಾಡಳಿತ ಜನರಿಗೆ ಸಮಾಧಾನಕರವಾದ ನಿರ್ವಹಣೆ, ವ್ಯವಸ್ಥೆ ಮಾಡಿದೆ. ವೈಯಕ್ತಿಕ ಮತ್ತು ಪಕ್ಷದ ಆಶಯದಂತೆ ಭಾದಿತರಿಗೆ ನಮ್ಮ ಮಿತಿಯಲ್ಲಿ ನೆರವು ನೀಡುತಿದ್ದೇವೆ.ಸರ್ಕಾರ ಅವರ ಬದುಕು ಭದ್ರಗೊಳಿಸುವ ಜೊತೆಗೆ ಅವರ ಭವಿಷ್ಯರೂಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.