

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವಿಸರ್ಜನೆಯಾಗುತ್ತದೆ. ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಕಾಂಗ್ರೆಸ್ ಅಧ್ಯಕ್ಷತೆಯಿಂದ ಹೊರನಡೆಯುತ್ತಾರೆ ಎನ್ನಲಾಗುತಿದ್ದ ಸಂದರ್ಭದಲ್ಲೇ ಭೀಮಣ್ಣ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಭೀಮಣ್ಣ ನಾಯ್ಕ ಎಸ್. ಬಂಗಾರಪ್ಪ ಗರಡಿಯ ನಾಯಕ. ಬಂಗಾರಪ್ಪನವರ ಅವಧಿಯಲ್ಲೇ ಭೀಮಣ್ಣರನ್ನು ಶಾಸಕ, ಸಂಸದ ಮಾಡಬೇಕೆಂದಿದ್ದ ಬಂಗಾರಪ್ಪ ಕನಸು ಕೊನೆಗೂ ನನಸಾಗಲೇ ಇಲ್ಲ. ಆದರೆ ಭೀಮಣ್ಣ ನಾಯ್ಕ ರಾಜಕಾರಣ,ಸಮಾಜಸೇವೆಯಿಂದ ಹಿಂದೆ ಸರಿದಿಲ್ಲ. ಶಿರಸಿ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯಲ್ಲಿ ದಾನಶೂರನೆಂದೇ ಹೆಸರುಗಳಿಸಿರುವ ಭೀಮಣ್ಣ ನಾಯ್ಕ ಒಮ್ಮೆ ಸಮಾಜವಾದಿಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದು ಬಿಟ್ಟರೆ ಉಳಿದ ಅವಧಿಯಲ್ಲಿ ಅವರದು ಪಕ್ಷದ ನೇತೃತ್ವ, ಸಂಘಟನೆ.
ಉದ್ಯಮಿಯಾಗಿ ಹೆಸರು ಮಾಡಿರುವ ಭೀಮಣ್ಣ ಬಂಗಾರಪ್ಪನವರ ಕೊನೆ ದಿನಗಳಲ್ಲಿ ಅವರನ್ನು ಬಿಟ್ಟು ಕಾಂಗ್ರೆಸ್ ಸೇರಿದವರು. ಆದರೆ ಕಾಂಗ್ರೆಸ್ ಅವರನ್ನು ಬಳಸಿಕೊಂಡು ಒಮ್ಮೆ ಶಿರಸಿ ಕ್ಷೇತ್ರದ ವಿಧಾನಸಭಾ ಅವಕಾಶ ನೀಡಿದ್ದು ಬಿಟ್ಟರೆ ಕಾಂಗ್ರೆಸ್ ನಿಂದ ಭೀಮಣ್ಣ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.
ಈಗ ಭೀಮಣ್ಣ ಕಾಂಗ್ರೆಸ್ ಮುಖಂಡರಾಗಿ,ಸಾಮಾಜಿಕ ಕಾರ್ಯಕರ್ತರಾಗಿ ಪ್ರವಾಹಪೀಡಿತ ಪ್ರದೇಶಗಳ ಭೇಟಿ ಮಾಡಿದ್ದಾರೆ. ಸಂತೃಸ್ತರಿಗೆ ಆಹಾರಧಾನ್ಯ, ಹಣ ನೀಡುವ ಮೂಲಕ ತಮ್ಮ ಕಳಕಳಿ ಪ್ರದರ್ಶಿಸಿದ್ದಾರೆ. ಕಾಲುಶತಮಾನಗಳಿಂದ ಜನಪ್ರತಿನಿಧಿಗಳು, ಸಚಿವರು,ಶಾಸಕರು, ಸಂಸದರು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೇ ತಿಣಕಾಡುತ್ತಿರುವ ಸಂದರ್ಭದಲ್ಲಿ ಸರ್ಕಾರದ ನೆರವಿಲ್ಲದೆ ವೈಯಕ್ತಿಕ ನೆರವಿನ ಮೂಲಕ ಎಂದಿನಂತೆ ಭೀಮಣ್ಣ ಸಂತೃಸ್ತರು, ಸ್ಥಳಿಯರ ಗಮನ ಸೆಳೆದಿದ್ದಾರೆ.
ಪ್ರಚಾರ, ಅನುಕೂಲ, ಲಾಭಕ್ಕಾಗಿ ಸೇವೆಯ ಸೋಗುಹಾಕಿ ಪ್ರಚಾರಪಡೆಯುತ್ತಿರುವವರ ನಡುವೆ ಭೀಮಣ್ಣ ನಾಯ್ಕ ತಮ್ಮ ಸೇವೆ, ದಾನಗಳಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ.



