

ಕನಸಿನಕನ್ಯೆ, ಮೋಹಕತಾರೆ ಎನ್ನುವ ಅಭಿದಾನಗಳಿರುವ ಕನ್ನಡದ ನಟಿ ರಮ್ಯಾ ದುಬೈ ಗೆಳೆಯ ರಾಫೆಲ್ ರನ್ನು ಮದುವೆಯಾಗಲಿದ್ದಾರೆ ಎಂದು ಗುಲ್ಲೆದ್ದಿದೆ.
ಕಾಂಗ್ರೆಸ್ ಮುಖಂಡೆ, ಕನ್ನಡದ ಹೆಸರಾಂತ ನಟಿ ರಮ್ಯಾ ಕನ್ನಡ ಚಿತ್ರರಂಗದ ನಂ.1 ತಾರೆಯಾಗಿ ಮೆರೆದವರು.
ಅವರ ಚಿತ್ರರಂಗದ ಉತ್ತುಂಗದ ಅವಧಿಯಲ್ಲೇ ರಮ್ಯಾ ಮದುವೆ ಬಗ್ಗೆ ಗಾಸಿಪ್ ಹರಿದಾಡಿತ್ತು. ಆದರೆ ಈಗ ದುಬೈ ಉದ್ಯಮಿ, ರಮ್ಯಾ ಗೆಳೆಯ ರಾಫೆಲ್ ರಮ್ಯಾರನ್ನು ವರಿಸಲಿದ್ದಾರೆ ಎನ್ನುವ ಚಿತ್ರ-ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಹಾಸ್ಯ ನಟ ಜಗ್ಗೇಶ್ ಟ್ವೀಟ್ ಮಾಡಿ ರಮ್ಯಾ ರಿಗೆ ಶುಭ ಕೋರಿದ್ದೇ ದೊಡ್ಡ ಸುದ್ದಿಯಾಗಿದೆ.
