

ದಲಿತರ ಸಬಲೀಕರಣ ಮತ್ತು ಪ್ರತಿಭಾ ಪಲಾಯನ ತಡೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ಎಂದಿರುವ ತಹಸಿಲ್ಧಾರ ಗೀತಾ ಸಿ.ಜಿ. ಮಹಿಳಾ ಸಬಲೀಕರ ಮತ್ತು ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕು. ಸ್ವಯಂ ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬಿಗಳಾಗಬೇಕು.ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ. ಅನೇಕ ಮಹನೀಯರ ಹೋರಾಟ,ತ್ಯಾಗ ,ಬಲಿದಾನ ದಿಂದ ದೊರಕಿದ್ದು,ಭವ್ಯ ಇತಿಹಾಸದ ಕಲ್ಪನೆ ಯುವಜನರಲ್ಲಿ ಮೂಡಬೇಕಿದೆ ಎಂದರು.
ಅವರು ಸಿದ್ದಾಪುರದ ಐತಿಹಾಸಿಕ ನೆಹರು ಮೈದಾನದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನೆರೆಯಲ್ಲಿ ನೊಂದವರಿಗೆ ನಾವೆಲ್ಲ ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬೋಣ ಎಂದ ಅವರು ನೆರೆ ಸಂದರ್ಭದಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮೀತಿಯಿಂದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮನ್ಮನೆಯ ಬಂಗಾರ್ಯ ರಾಮ ನಾಯ್ಕ, ಸಾಹಿತಿ ಆರ್.ಕೆ. ಹೊನ್ನೆಗುಂಡಿ,ರಾಷ್ಷ್ರೀಯ ವಾಲಿಬಾಲ್ ಆಟಗಾರ್ತಿ ರೇವತಿ ಎಂ. ನಾಯ್ಕ ಕಾನಗೋಡ, ಕರಾಟೆ ಪಟು ಆನಂದ ಕೃಷ್ಣ ನಾಯ್ಕ ಕೊಂಡ್ಲಿ, ಯೋಗ ಸಾಧಕರಾದ ಮಂಜುನಾಥ ಮತ್ತು ಶಿಲ್ಪ ದಂಪತಿಗಳನ್ನು, ಶಿಕ್ಷಕ ಶ್ರೀಕಾಂತ ಬಿ ನಾಯ್ಕ, ಸಿಡಿಪಿಓ ಕಚೇರಿಯ ಉದಯ ಎಂ.ಶಿರಾಲಿ, ಆರೋಗ್ಯ ಇಲಾಖೆಯ ಲಕ್ಷ್ಮೀ ಕೆ. ಗೌಡ, ಕಿರಿಯ ಇಂಜಿನೀಯರ್ ಪರುಶುರಾಮ ಆರ್. ಬೇವೂರ, ತಾ.ಪಂ.ಡಿ ದರ್ಜೆ ನೌಕರ ಭವಾನಿ ಕೊಂಡ್ಲಿ, ರನ್ನು ಸನ್ಮಾನಿಸಲಾಯಿತು.
ಎಸ್‍ಎಸ್‍ಎಲ್‍ಸಿಯಲ್ಲಿ ಸರಕಾರಿ ಶಾಲೆಗಳಲ್ಲಿ ಓದಿ ತಾಲೂಕಿಗೆ ಪ್ರಥಮ ಮೂರು ಸ್ಥಾನಗಳಿಸಿದ ಶಿರಗುಣಿ ಪ್ರೌಢಶಾಲೆ ಸಿಂಧು ಹೆಗಡೆ, ಪವಿತ್ರಾ ಭಟ್, ಹಾಳದಕಟ್ಟಾ ಪ್ರೌಢಶಾಲೆ ಮಹಮದ್ ಶರೀಪ್‍ರಿಗೆ ಸರಕಾರದ ವತಿಯಿಂದ ಲ್ಯಾಪ್ ಟ್ಯಾಪ್ ವಿತರಿಸಲಾಯಿತು.
ಪಥ ಸಂಚಲನದಲ್ಲಿ ಆರಕ್ಷಕರು, ಗೈಹರಕ್ಷಕ ದಳದವರು, ಸ್ಕೌಟ್ಸ್ ಹಾಗೂ ಗೈಡ್ಸ ಹಾಗೂ ವಿವಿಧ ಶಾಲೆಯ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.





