

ತಾ.ಪಂ. ಸಾಮಾನ್ಯ ಸಭೆ-
ಸಾರಿಗೆ ಸಂಸ್ಥೆಸಿಬ್ಬಂದಿಗಳ
ಬೆವರಿಳಿಸಿದ ಸದಸ್ಯರು
ಸಿದ್ಧಾಪುರ ತಾಲೂಕಿನಲ್ಲಿ ಸಾರಿಗೆ ಸಂಸ್ಥೆ ಬಸ್ ಅವ್ಯವಸ್ಥೆ, ರಾತ್ರಿನಿಲುಗಡೆ ಬಸ್‍ಗಳನ್ನು ರಾತ್ರಿಯೇ ಕೊಂಡೊಯ್ಯುವುದು ಸೇರಿದಂತೆ ರಸ್ತೆಸಾರಿಗೆ ಸಂಸ್ಥೆಯ ಬೇಜವಾಬ್ಧಾರಿಗಳ ಬಗ್ಗೆ ಧ್ವನಿ ಎತ್ತಿದ ಸದಸ್ಯರು, ಮತ್ತು ಪತ್ರಕರ್ತರಿಂದಾಗಿ ವಾಯವ್ಯ ರಸ್ತೆ ಸಾರಿಗೆ ವಿಭಾಗದ ನೌಕರರು ತಲೆತಗ್ಗಿಸುವಂತಾದ ಘಟನೆ ಇಂದು ತಾಲೂಕಾ ಪಂಚಾಯತ್ ಸಭಾಭವನದಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಘಟಿಸಿದೆ.
ತಾಲೂಕಿನಾದ್ಯಂತ ವಿಶೇಶವಾಗಿ ಹಾರ್ಸಿಕಟ್ಟಾ,ಹೆಗ್ಗರಣೆ ಮಾರ್ಗದಲ್ಲಿ ರಾತ್ರಿ ನಿಲುಗಡೆಯ ಬಸ್ ಗಳನ್ನು ರಾತ್ರಿಯೇ ತಾಲೂಕು ಕೇಂದ್ರಕ್ಕೆ ಮರಳಿ ತರಲಾಗುತ್ತಿದೆ, ಇದರಿಂದ ಸ್ಥಳಿಯರು, ವಿದ್ಯಾರ್ಥಿಗಳು,ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಪತ್ರಕರ್ತರು ಸಭೆಯ ಗಮನಕ್ಕೆ ತಂದರು.
ಅದಕ್ಕೆ ಪ್ರತಿಕ್ರೀಯಿಸಿದ ಡಿಪೋ ವ್ಯವಸ್ಥಾಪಕ ರವೀಂದ್ರ ಉತ್ತರಿಸಲು ತಡವರಿಸಿದರು. ನಂತರ ಸಂಬಂಧಿಸಿದ ಅಧಿಕಾರಿಯನ್ನು ಸಭೆಗೆ ಕರೆಸಬೇಕೆಂದು ಪಟ್ಟುಹಿಡಿದಾಗ ಸಾರಿಗೆ ನಿಯಂತ್ರಣಾಧಿಕಾರಿಗಳು ಸರಿಯಾದ ಉತ್ತರ ನೀಡಲಿಲ್ಲ. ಇದೇ ಸಮಯಕ್ಕೆ ಮಾತು ಪ್ರಾರಂಭಿಸಿದ ನಾಶಿರ್ಖಾನ್ ಕೆ.ಎಸ್.ಆರ್.ಟಿ.ಸಿ. ಬಗ್ಗೆ ಮಾತನಾಡಲು ನಾಚಿಕೆಯಾಗಿ ಸುಮ್ಮನೆ ಕೂತಿದ್ದೆ ವ್ಯವಸ್ಥೆಯೂ ಸರಿಯಾಗುವುದಿಲ್ಲ, ಅಧಿಕಾರಿಗಳೂ ಸರಿಯಾಗುವುದಿಲ್ಲ. ಈ ಸಭೆ ಮಾಡಿಯೂ ಉಪಯೋಗವಿಲ್ಲ ಎಂದು ಬೇಸರಿಸಿದರು. ಆಗ ಸಾರಿಗೆ ಅದಾಲತ್ ಮಾಡುವ ಮೂಲಕ ಸಾರಿಗೆ ಅವ್ಯವಸ್ಥೆ, ಗೊಂದಲ ಬಗೆಹರಿಸಲು ಸರ್ವಾನುಮತದ ಠರಾವು ಸ್ವೀಕರಿಸಲಾಯಿತು. ಹಾಲ್ಟಿಂಗ್ ಬಸ್ ಅಂದೇ ಮರಳುತ್ತಿರುವ ತೊಂದರೆಗೆ ಕಾರಣವಾದವರ ಮೇಲೆ ಕ್ರಮಜರುಗಿಸಿ,ಮಾಹಿತಿ ನೀಡುವಂತೆ ಆಗ್ರಹಿಸಲಾಯಿತು.

