

ಹಳ್ಳಿಬೈಲ್ ಶಾಲೆಯ ಸ್ವಾತಂತ್ರ್ಯೋತ್ಸವಕ್ಕೆ ರಂಗು ತಂದ ನಿರಾಶ್ರಿತರು
ಸಿದ್ಧಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ 73 ನೇ ಸ್ವಾತಂತ್ರ್ಯೋತ್ಸವ ಆಚರಣೆ ಈ ವರ್ಷ ಭಿನ್ನವಾಗಿತ್ತು.
ಈ ವಿಶೇಶ ಸ್ವಾತಂತ್ರ್ಯೋತ್ಸವಕ್ಕೆ ಕಾರಣ ಸ್ವಾತಂತ್ರ್ಯೋತ್ಸವದ ದಿನವೇ ರಕ್ಷಾಬಂಧನ ಹಬ್ಬ ಬಂದಿದ್ದು ಮತ್ತು ಅನಿವಾರ್ಯವಾಗಿ ಹಳ್ಳಿಬೈಲ್ ಪ್ರೌಢಶಾಲೆಯ ಆವರಣಕ್ಕೆ ಹೆಮ್ಮನಬೈಲ್ ನಿರಾಶ್ರಿತರು ಬಂದಿದ್ದು. ಪ್ರತಿವರ್ಷದಂತೆ ಈವರ್ಷ ಸರಳವಾಗಿಯೇ ಸ್ವಾತಂತ್ರ್ಯೋತ್ಸವ ನಡೆಯುತಿತ್ತು. ಆದರೆ, ಮಹಾಮಳೆ,ಪ್ರವಾಹದ ಕಾರಣಕ್ಕೆ ಸಂತೃಸ್ತರಾದವರು ಇದೇ ವಾರ ಈ ಶಾಲೆಯ ಹಳೆ ಕಟ್ಟಡದಲ್ಲಿ ಆಶ್ರಯ ಪಡೆದಿದ್ದರಿಂದ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕವೃಂದ ಅವರನ್ನು ಆಹ್ವಾನಿಸಿ, ರಾಖಿ ಕಟ್ಟಿ, ಸಿಹಿ ತಿನಿಸುವ ಮೂಲಕ 73 ನೇಸ್ವಾತಂತ್ರ್ಯೋತ್ಸವ ಆಚರಿಸಿದರು.
ಈ ಪ್ರೌಢಶಾಲೆಯ ಹಳೆ ಕಟ್ಟಡದಲ್ಲಿ ಹೆಮ್ಮನಬೈಲಿನ ನಾಲ್ಕೈದು ಕುಟುಂಬಗಳು ತಾತ್ಕಾಲಿಕ ವಸತಿ ವ್ಯವಸ್ಥೆ ಪಡೆದಿವೆ. ಅವರಲ್ಲಿ ಶಾಲಾ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳೂ ಸೇರಿದ್ದಾರೆ. ನೋವಿನಲ್ಲೂ ನಲಿವು ಎನ್ನುವಂತೆ ಹೆಮ್ಮನಬೈಲಿನ ನಿರಾಶ್ರಿತರು ತಮ್ಮ ನೋವು, ತೊಂದರೆ ರಗಳೆಗಳ ನಡುವೆಯೂ ಸ್ವಾತಂತ್ರ್ಯೋತ್ಸವ ಆಚರಿಸಿ ತಮ್ಮ ದೇಶಾಭಿಮಾನ ಮೆರೆದರು.

