

ಸಿದ್ಧಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ, ಪ್ರವಾಹ ಸಂತೃಸ್ತರಿಗೆ 10 ಸಾವಿರ ನೆರವುನೀಡಿಕೆ ಸೇರಿದಂತೆ ಅನೇಕ ವಿಚಾರಗಳ ಚರ್ಚೆಗೆ ಇಂದಿನ ತಾಲೂಕಾ ಪಂಚಾಯತ್ ಸಭೆ ಸಾಕ್ಷಿಯಾಯಿತು.
ಸುಷ್ಮಾಸ್ವರಾಜ್ ಸಾವಿನ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ತಾ.ಪಂ. ಸಾಮಾನ್ಯ ಸಭೆ ಇಂದು ನಡೆಯಿತು. ಸಭೆಯಲ್ಲಿ ತಾಲೂಕಿನ ಮಹಾಮಳೆ, ಪ್ರವಾಹ, ತೊಂದರೆಗಳ ಸಮಯದಲ್ಲಿ ಸಹಕರಿಸಿದ ಜನಪ್ರತಿನಿಧಿಗಳು, ಸ್ಥಳಿಯರು, ಅಧಿಕಾರಿಗಳು ಪತ್ರಕರ್ತರನ್ನು ಅಭಿನಂದಿಸಿದ ತಾ.ಪಂ. ಅಧ್ಯಕ್ಷ ಸುಧೀರ್ ಗೌಡರ್ ಮತ್ತು ಸದಸ್ಯ ನಾಶಿರ್‍ಖಾನ್ ಅನಿರೀಕ್ಷಿತ ಅವಗಢದಲ್ಲಿ ಸಾರ್ವಜನಿಕರು, ಆಡಳಿತ ವ್ಯವಸ್ಥೆ ಸೇರಿದಂತೆ ಇಡೀ ಸಮಾಜ ಸಂತೃಸ್ತರ ಪರವಾಗಿ ಮಿಡಿದಿದೆ. ಜೊತೆಗಿರುವವರು ತೊಂದರೆಯಲ್ಲಿದ್ದಾಗ ಇಂಥ ಸಹಕಾರ ಅವಶ್ಯ ಎಂದರು.
ಸಭೆಗೆ ಮಾಹಿತಿ ನೀಡಿದ ಕೃಷಿ ಅಧಿಕಾರಿ ಪ್ರಶಾಂತ್ ತಾಲೂಕಿನಲ್ಲಿ ವಾಡಿಕೆಯ2161ಮಿ.ಮೀ. ಮಳೆ ಬದಲು ಈವರೆಗೆ 3171 ಮಿಮೀ ಮಳೆ ಸುರಿದಿದೆ. ಮಾಹಿತಿ ನೀಡಿದ ಆಹಾರ ನಿರೀಕ್ಷಕ ಎನ್.ಆಯ್. ಗೌಡ ತಾಲೂಕಿನಲ್ಲಿ 36 ಕುಟುಂಬಗಳು ನಿರಾಶ್ರಿತರಾಗಿದ್ದು ಅವರಿಗೆ ತಾಲೂಕಿನ ಮೂರು ಕಡೆ ಸಂತೃಸ್ತರ ಕೇಂದ್ರಗಳನ್ನು ತೆರೆಯಲಾಗಿತ್ತು. ತಾಲೂಕಿನಲ್ಲಿ 2 ಜೀವಹಾನಿ, 2 ಜಾನುವಾರುಗಳ ಸಾವು ಸಂಭವಿಸಿವೆ. ಅವುಗಳಲ್ಲಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ, ಜಾನುವಾರು ಹಾನಿ ಬಗ್ಗೆ 52 ಸಾವಿರ ರೂ. ಪರಿಹಾರಕ್ಕಾಗಿ ಉಪವಿಭಾಗಾಧಿ ಕಾರಿಗಳಿಗೆ ವರದಿ ನೀಡಲಾಗಿದೆ. ತೊಂದರೆಗೊಳಗಾದ 72 ಮನೆಗಳಿಗೆ ಈವರೆಗೆ189500ರೂ. ನೀಡಲಾಗಿದೆ. ಸಂತೃಸ್ತರಿಗೆಆಹಾರ ಕಿಟ್ ಜೊತೆ 2 ಹಂತಗಳಲ್ಲಿ ತಲಾ ಹತ್ತುಸಾವಿರ ರೂಪಾಯಿ ನೀಡಲಾಗಿದೆ ಎಂದು ವಿವರ ನೀಡಿದರು.
ಸಿದ್ಧಾಪುರ ತಾಲೂಕಿನಾದ್ಯಂತ ಸುರಿದ ಮಳೆ, ಪ್ರವಾಹದ ಪರಿಣಾಮ ಅಂದಾಜು1301ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. ಈ ಹಾನಿಯ ಅಂದಾಜು 43 ಕೋಟಿ ಎಂದು ಪ್ರಾಥಮಿಕ ಸಮೀಕ್ಷೆ ಮಾಡಲಾಗಿದೆ. ತಾಲೂಕಿನ11640 ತೋಟಗಾರ ರೈತರಲ್ಲಿ11126 ರೈತರು ಬೆಳೆವಿಮೆ ಮಾಡಿಸಿದ್ದಾರೆ. ಇವರಿಗೆ ಕಳೆದ ವರ್ಷದ ಬೆಳೆವಿಮೆ ಪರಿಹಾರಸೆಪ್ಟೆಂಬರ್ 15 ರ ಒಳಗೆ ಬರಲಿದೆ. ಈ ವರ್ಷದ ಬೆಳೆಹಾನಿ ವಿಮಾ ಪರಿಹಾರ ಮುಂದಿನವರ್ಷ ದೊರೆಯಲಿದೆ.-ಮಹಾಬಲೇಶ್ವರ ಬಿ.ಎಸ್. (ಹಿ.ತೋ.ನಿ.)
