ನಾಳೆ ಏನೇನು?

ನಾಳೆ ಕರೆಂಟಿಲ್ಲ-
ಹೆಸ್ಕಾಂ ಸಿದ್ಧಾಪುರ ಉಪವಿಭಾಗ ಮತ್ತು ಶಿರಸಿ ವಿಭಾಗದ ತುರ್ತು ದುರಸ್ಥಿ ಹಿನ್ನೆಲೆಯಲ್ಲಿ ಆ.22 ಗುರುವಾರ ಮುಂಜಾನೆ 8 ರಿಂದ ಸಾಯಂಕಾಲ 4ರ ವರೆಗೆ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಬಾಲಭವನದಲ್ಲಿ ಎ.ಜಿ.ಪೈ ಶೃಂದ್ಧಾಂಜಲಿ ಸಭೆ
ಸಿದ್ಧಾಪುರ,ಆ.21- ಎ.ಜಿ.ಪೈ ಮಳಗಿ ಇತ್ತೀಚೆಗೆ ನಿಧನರಾಗಿದ್ದಾರೆ.
ಇವರು ಪತ್ನಿ, ನಾಲ್ವರು ಪುತ್ರರು, ಕುಟುಂಬದವರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಎ.ಜಿ.ಪೈ ಮೂಲತಹ ಸಿದ್ದಾಪುರದವರಾಗಿದ್ದು, ಮಾಜಿಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ, ಕಡವೆ ಶ್ರೀಪಾದ ಹೆಗಡೆ, ದಿ.ಜಿ.ಎಸ್ ಹೆಗಡೆ ಅಜ್ಜಿಬಳ, ವಿ.ಎಸ್.ಸೋಂದೆ ಹಾಗೂ ಇನ್ನೂ ಅನೇಕ ಉತ್ತರಕನ್ನಡ ಜಿಲ್ಲೆಯ ರಾಜಕೀಯ-ಸಾಮಾಜಿಕ-ಪ್ರಗತಿಪರ ಕೃಷಿಕರ ಒಡನಾಡಿಗಳಾಗಿದ್ದರು.
ಕೃಷಿಕರ ಮತ್ತು ಬಡವರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದು ವೆನಿಲಾ ಅಭಿವೃದ್ಧಿ ಟ್ರಸ್ಟಿನ ಸಂಸ್ಥಾಪಕ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದರು.
ಜಿಲ್ಲೆ ಮತ್ತು ರಾಜ್ಯದಲ್ಲಿ ವೆನಿಲ್ಲಾ ಬೆಳೆಯನ್ನು ಪರಿಚಯಿಸಿ ಅಭಿವೃದ್ಧಿಪಡಿಸಿ, ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಿಕೊಡುವಲ್ಲಿ ಅವರ ಪ್ರಯತ್ನ ಸ್ಮರಣೀಯ. ಜಿಲ್ಲೆಯಾದ್ಯಂತ ಅನೇಕ ಕೃಷಿ ವಿಚಾರ-ವಿನಿಮಯ ಕೇಂದ್ರ ಮತ್ತು ವೆನಿಲ್ಲಾ ಬೆಳೆಗಾರರ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಜಿಲ್ಲೆಯ ಕೃಷಿಕರ ಸಂಘಟನೆಗೆ ಜೀವ ತುಂಬಿದ್ದರು.
ಎ.ಜಿ.ಪೈ ಅಗಲಿರುವುದು ತುಂಬಲಾರದ ನಷ್ಟವಾಗಿದ್ದು. ಅವರ ಆತ್ಮಕ್ಕೆ ಚಿರಶಾಂತಿ ಕೋರಿ, ಅಗಲುವಿಕೆಯ ದು:ಖ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಹಾಗೂ ಹಿತೈಶಿಗಳಿಗೆ ಭಗವಂತ ಕರುಣಿಸಲೆಂದು ಪ್ರಾರ್ಥಿಸಲು ಆ. 22-08-2019 ರ ಗುರುವಾರ ಬೆಳಿಗ್ಗೆ 10.30ನಿಮಿಷಕ್ಕೆ ಸಿದ್ದಾಪುರದ ಲಯನ್ಸ ಭವನ (ಬಾಲಭವನ ಶಿರಸಿ ರಸ್ತೆ) ದಲ್ಲಿ ಶೃದ್ಧಾಂಜಲಿ ಸಭೆಯನ್ನು ಇಟ್ಟುಕೊಳ್ಳಲಾಗಿದ್ದು ಈ ಸಭೆಗೆ ನಮ್ಮ ಜಿಲ್ಲೆಯ ಅವರ ಅಭಿಮಾನಿಗಳು-ಬಂಧುಗಳು ಮತ್ತು ವೆನಿಲ್ಲಾ ಬೆಳಾಗಾರರು ಹಾಗೂ ಕೃಷಿ ವಿಚಾರ ವಿನಿಮಯ ಕೇಂದ್ರದ ಸದಸ್ಯರು ಆಗಮಿಸಲು ವೆನಿಲ್ಲಾ ಅಭಿವೃದ್ಧಿ ಟ್ರಸ್ಟಿನ ಟ್ರಸ್ಟಿಗಳಲ್ಲೊಬ್ಬರಾದ ಭಾಸ್ಕರ ಹೆಗಡೆ ಕೊಡಗೀಬೈಲು ಮಾಧ್ಯಮಗಳ ಮೂಲಕ ಕೋರಿದ್ದಾರೆ.

ತ್ವರೆಮಾಡಿ ಕೊನೆಯ ಎರಡು ದಿವಸಗಳು ಮಾತ್ರ
ನಿಮ್ಮ ಹೂಡಿಕೆಗೆ ಗರಿಷ್ಠ ಬಡ್ಡಿ ನೀಡುವ ಜೀವನ್‍ಶಾಂತಿ & ಜೀವನ್ ಅಕ್ಷಯ ಪಾಲಸಿಗಳಲ್ಲಿ ಹೂಡಿಕೆಮಾಡಲು ಆ.23 ರ ವರೆಗೆ ಎರಡು ದಿವಸಗಳ ವರೆಗೆ ಮಾತ್ರ ಅವಕಾಶ. ಹೂಡಿಕೆ,ಪಾಲಸಿ(ಎಲ್.ಐ.ಸಿ.) ಮಾಡುವ ಆಸಕ್ತರು 8277517164 ಸಂಖ್ಯೆಗೆ ಕರೆಮಾಡಿ. ನೆನಪಿಡಿ ವಿಶ್ವದ ಗರಿಷ್ಟ ಬಡ್ಡಿ ನೀಡುವ ಎರಡೂ ಯೋಜನೆಗಳು 23 ರ ನಂತರ ಲಭ್ಯವಿಲ್ಲ.
ಮಳೆನಿಂತುಹೋದಮೇಲೆ!-ಭಾಗ-03
ಮಳೆಮಾಪನ ಯಂತ್ರಗಳ ಬಗ್ಗೆ ಅನುಮಾನ, ವಿಶೇಷ ಪ್ಯಾಕೇಜ್‍ಗೆ ಒತ್ತಾಯ
ಸಿದ್ಧಾಪುರ ತಾಲೂಕಿನಲ್ಲಿ ಆಗಷ್ಟ್ ತಿಂಗಳಲ್ಲಿ ಸುರಿದ ಗರಿಷ್ಟ ಮಳೆ ತಾಲೂಕಿನ ಕೃಷಿ ಮತ್ತು ಕೃಷಿ ಉತ್ಫನ್ನದ ಮೇಲೆ ದುಷ್ಫರಿಣಾಮ ಬೀರಿದೆ. ಈ ಬಗ್ಗೆ ಕೃಷಿಕರು ಮರುಕಪಟ್ಟು ಗೋಳಾಡುತಿದ್ದರೆ, ಕೆಲವು ಕೃಷಿಕರ ಸಹಕಾರಿ ಸಂಘಗಳು ತಮ್ಮ ಬೆಳೆ ಹಾನಿ ಮತ್ತು ತೊಂದರೆಗೆ ಸ್ಫಂದಿಸುವಂತೆ ಸರ್ಕಾರವನ್ನು ಆಗ್ರಹಿಸುತಿದ್ದಾರೆ. ಮೊನ್ನೆ ಈ ಬಗ್ಗೆ ಮಾಧ್ಯಮಗೋಷ್ಠಿ ಕರೆದ ತ್ಯಾಗಲಿ ಸೇವಾ ಸಹಕಾರಿ ಸಂಘ ತಮ್ಮ ವ್ಯಾಪ್ತಿ ಮತ್ತು ತ್ಯಾಗಲಿ ಪಂಚಾಯತ್ ನ ಕೃಷಿಕರು ಮತ್ತು ಕೃಷಿಗೆ ಮಳೆಯಿಂದಾದ ಹಾನಿ ಬಗ್ಗೆ ವಿವರ ನೀಡಿ ಸರ್ಕಾರ ರೈತರಿಗೆ ಸಹಕರಿಸದಿದ್ದರೆ ರೈತರ ಬದುಕು ಕಷ್ಟ ಎಂದು ವರದಿ ನೀಡಿತು.
ಈ ಭಾಗದ ರೈತರ ಪರವಾಗಿ ಮಾತನಾಡಿದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ ತಮ್ಮ ಸಂಘದ ವ್ಯಾಪ್ತಿಗೆ ಬರುವ ಕೃಷಿಕರ ಒಟ್ಟೂ 650 ಎಕರೆ ಕೃಷಿ ಭೂಮಿಯಲ್ಲಿ 300 ಎಕರೆ ಅಡಿಕೆ ಬೆಳೆ ಮತ್ತು ಕ್ಷೇತ್ರಕ್ಕೆ ಹಾನಿಯಾಗಿದೆ. 325 ಎಕರೆ ಭತ್ತದ ಗದ್ದೆ ಕ್ಷೇತ್ರದಲ್ಲಿ ಬಹುತೇಕ ಕಡೆ ನಾಟಿಗೆ ಅವಕಾಶ ಸಿಕ್ಕಿಲ್ಲ, ಕೆಲವೆಡೆ ಬಿತ್ತಿದ ಬೀಜ, ಅಗೆ ನಾಟಿ ಮಾಡಿದ ಸಸಿ ಕೂಡಾ ನಾಶವಾಗಿದೆ ಎಂದರು.
ಸೈಕಲ್ ನೀಡುವ ಹಿಂದೆ ಕಲಿಕೆಯ ಉತ್ತೇಜನದ ಉದ್ಧೇಶ
ಸಿದ್ಧಾಪುರ,ಆ.21-ಸರ್ಕಾರ ವಿಶೇಶ ಸೌಲಭ್ಯಗಳ ಮೂಲಕ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೂ ಅನುಕೂಲ ಮಾಡುತ್ತಿರುವುದು ಸಮಾನತೆಗೆ ಅನುಕೂಲ ಎಂದಿರುವ ತಾಲೂಕಾ ಪಂಚಾಯತ್ ಅಧ್ಯಕ್ಷ ಸುಧೀರ್ ಗೌಡರ್ ಹಿಂದೆ ಬಡವ ಬಲ್ಲಿದನೆಂಬ ಭೇದವಿರಲಿಲ್ಲ ಈಗ ಈ ಭೇದವನ್ನು ಅಳಿಸಲು ಸರ್ಕಾರ ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಇಂದು ಇಲ್ಲಿಯ ಎಸ್.ವಿ. ಪ್ರೌಢಶಾಲೆಯಲ್ಲಿ ಸರ್ಕಾರದ ಬೈಸಿಕಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಈ ಮೇಲಿನಂತೆ ನುಡಿದರು. ಕಾರ್ಯಕ್ರಮದ ಅತಿಥಿಯಾಗಿದ್ದ ಜಿ.ಪಂ. ಸದಸ್ಯೆ ಸುಮಂಗಲಾ ನಾಯ್ಕ ಮಾತನಾಡಿ ಶಿಕ್ಷಣದಿಂದ ಅಭಿವೃದ್ಧಿಯಾಗುತಿದ್ದು ಗ್ರಾಮೀಣ ಪ್ರತಿಭೆಗಳೂ ವಿಜೃಂಬಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ತಾ.ಪಂ. ಸ್ಥಾಯಿಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಸೈಕಲ್ ಕೊಡುವ ಪ್ರಕ್ರಿಯೆ ಹಿಂದೆ ಶಿಕ್ಷಣ ಮತ್ತು ಶಿಕ್ಷಣಕ್ಕೆ ಉತ್ತೇಜಿಸುವುದೇ ಆಗಿದೆ ಎಂದರು, ದೈಹಿಕ ಪರಿವೀಕ್ಷಕ ಕಮಲಾಕರ ನಾಯ್ಕ ಸ್ವಾಗತಿಸಿದರು. ಪಾಲೇಕರ್ ನಿರೂಪಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆರ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *