breaking news- ಬಾಳೂರಿನಲ್ಲಿ ಕಾಡುಕೋಣ ಸಾವು, ಬಿದ್ರಕಾನನಲ್ಲಿ ಕಾಳಿಂಗ ಸರ್ಪ ಸೆರೆ


ಸಿದ್ಧಾಪುರ (ಉ.ಕ.)ತಾಲೂಕಿನ ಬಿದ್ರಕಾನ ನಲ್ಲಿ ನಾಡಿಗೆ ಬಂದು ಭಯಹುಟ್ಟಿಸಿದ ಕಾಳಿಂಗ ಸರ್ಪವನ್ನು ಹಿಡಿಯಲು ಅಹೋರಾತ್ರಿ ಶ್ರಮಪಟ್ಟ ಅರಣ್ಯ ಇಲಾಖೆಯ ಪ್ರಯತ್ನ ಸುದ್ದಿಯಾದ ಬೆನ್ನಲ್ಲೇ ಇಂದು ಕಾಡುಕೋಣವೊಂದು ಮೃತಪಟ್ಟ ವಿದ್ಯಮಾನ ಹಸರಗೋಡು ಪಂಚಾಯತ್ ಬಾಳೂರಿನಲ್ಲಿ ನಡೆದಿದೆ.
ಈ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದ್ದು ಕಾಡುಕೋಣದ ಸಾವಿನ ಕಾರಣ ತಿಳಿದುಬಂದಿಲ್ಲ ಆದರೆ ಮಂಗಳವಾರ ಈ ವಿಚಾರ ಇಲಾಖೆಯ ಗಮನಕ್ಕೆ ಬಂದಿದೆ ಎಂದು ಮಾಹಿತಿ ನೀಡಲಾಗಿದೆ.

ತ್ವರೆಮಾಡಿ ಕೊನೆಯ ಎರಡು ದಿವಸಗಳು ಮಾತ್ರ
ನಿಮ್ಮ ಹೂಡಿಕೆಗೆ ಗರಿಷ್ಠ ಬಡ್ಡಿ ನೀಡುವ ಜೀವನ್‍ಶಾಂತಿ & ಜೀವನ್ ಅಕ್ಷಯ ಪಾಲಸಿಗಳಲ್ಲಿ ಹೂಡಿಕೆಮಾಡಲು ಆ.23 ರ ವರೆಗೆ ಎರಡು ದಿವಸಗಳ ವರೆಗೆ ಮಾತ್ರ ಅವಕಾಶ. ಹೂಡಿಕೆ,ಪಾಲಸಿ(ಎಲ್.ಐ.ಸಿ.) ಮಾಡುವ ಆಸಕ್ತರು 8277517164 ಸಂಖ್ಯೆಗೆ ಕರೆಮಾಡಿ. ನೆನಪಿಡಿ ವಿಶ್ವದ ಗರಿಷ್ಟ ಬಡ್ಡಿ ನೀಡುವ ಎರಡೂ ಯೋಜನೆಗಳು 23 ರ ನಂತರ ಲಭ್ಯವಿಲ್ಲ.
ಮಳೆನಿಂತುಹೋದಮೇಲೆ!-ಭಾಗ-03
ಮಳೆಮಾಪನ ಯಂತ್ರಗಳ ಬಗ್ಗೆ ಅನುಮಾನ, ವಿಶೇಷ ಪ್ಯಾಕೇಜ್‍ಗೆ ಒತ್ತಾಯ
ಸಿದ್ಧಾಪುರ ತಾಲೂಕಿನಲ್ಲಿ ಆಗಷ್ಟ್ ತಿಂಗಳಲ್ಲಿ ಸುರಿದ ಗರಿಷ್ಟ ಮಳೆ ತಾಲೂಕಿನ ಕೃಷಿ ಮತ್ತು ಕೃಷಿ ಉತ್ಫನ್ನದ ಮೇಲೆ ದುಷ್ಫರಿಣಾಮ ಬೀರಿದೆ. ಈ ಬಗ್ಗೆ ಕೃಷಿಕರು ಮರುಕಪಟ್ಟು ಗೋಳಾಡುತಿದ್ದರೆ, ಕೆಲವು ಕೃಷಿಕರ ಸಹಕಾರಿ ಸಂಘಗಳು ತಮ್ಮ ಬೆಳೆ ಹಾನಿ ಮತ್ತು ತೊಂದರೆಗೆ ಸ್ಫಂದಿಸುವಂತೆ ಸರ್ಕಾರವನ್ನು ಆಗ್ರಹಿಸುತಿದ್ದಾರೆ. ಮೊನ್ನೆ ಈ ಬಗ್ಗೆ ಮಾಧ್ಯಮಗೋಷ್ಠಿ ಕರೆದ ತ್ಯಾಗಲಿ ಸೇವಾ ಸಹಕಾರಿ ಸಂಘ ತಮ್ಮ ವ್ಯಾಪ್ತಿ ಮತ್ತು ತ್ಯಾಗಲಿ ಪಂಚಾಯತ್ ನ ಕೃಷಿಕರು ಮತ್ತು ಕೃಷಿಗೆ ಮಳೆಯಿಂದಾದ ಹಾನಿ ಬಗ್ಗೆ ವಿವರ ನೀಡಿ ಸರ್ಕಾರ ರೈತರಿಗೆ ಸಹಕರಿಸದಿದ್ದರೆ ರೈತರ ಬದುಕು ಕಷ್ಟ ಎಂದು ವರದಿ ನೀಡಿತು.
ಈ ಭಾಗದ ರೈತರ ಪರವಾಗಿ ಮಾತನಾಡಿದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತೀಹಳ್ಳಿ ತಮ್ಮ ಸಂಘದ ವ್ಯಾಪ್ತಿಗೆ ಬರುವ ಕೃಷಿಕರ ಒಟ್ಟೂ 650 ಎಕರೆ ಕೃಷಿ ಭೂಮಿಯಲ್ಲಿ 300 ಎಕರೆ ಅಡಿಕೆ ಬೆಳೆ ಮತ್ತು ಕ್ಷೇತ್ರಕ್ಕೆ ಹಾನಿಯಾಗಿದೆ. 325 ಎಕರೆ ಭತ್ತದ ಗದ್ದೆ ಕ್ಷೇತ್ರದಲ್ಲಿ ಬಹುತೇಕ ಕಡೆ ನಾಟಿಗೆ ಅವಕಾಶ ಸಿಕ್ಕಿಲ್ಲ, ಕೆಲವೆಡೆ ಬಿತ್ತಿದ ಬೀಜ, ಅಗೆ ನಾಟಿ ಮಾಡಿದ ಸಸಿ ಕೂಡಾ ನಾಶವಾಗಿದೆ ಎಂದರು.
ಈ ಭಾಗದಲ್ಲಿ ಬಹುತೇಕ ಜನರು ಕೃಷಿ ಆದಾಯವನ್ನೇ ಅವಲಂಬಿಸಿದ್ದು ಪ್ರತಿವರ್ಷ ಕಾಡುಪ್ರಾಣಿಗಳಿಂದ ತೊಂದರೆಯಾಗುತಿತ್ತು. ಈ ವರ್ಷ ಮಳೆ ಬೆಳೆ ಮತ್ತು ಕೃಷಿ ಕ್ಷೇತ್ರವನ್ನೇ ನಾಶ ಮಾಡಿದ್ದು ಸರ್ಕಾರ ವಿಶೇಶ ಪ್ಯಾಕೇಜ್ ಘೋಶಿಸುವ ಮೂಲಕ ತಮ್ಮ ಹಿತಕಾಯಬೇಕೆಂದು ಆಗ್ರಹಿಸಿದರು.
ಇದೇ ಗೋಷ್ಠಿಯಲ್ಲಿ ವಿವರ ನೀಡಿದ ತ್ಯಾಗಲಿ ಗ್ರಾ.ಪಂ. ಉಪಾಧ್ಯಕ್ಷ ವಸಂತ ಹೆಗಡೆ ‘ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಆದ ಕೃಷಿ ಮತ್ತು ಕೃಷಿ ಕ್ಷೇತ್ರದ ಹಾನಿಗಳ ಪ್ರಾಥಮಿಕ ವರದಿ ಸರ್ಕಾರಕ್ಕೆ ನೀಡಿದ್ದೇವೆ. ಬಿಟ್ಟುಹೋದವರು ಮತ್ತು ಸರ್ಕಾರದ ನೂತನಮಾನದಂಡಗಳಿಗನುಗುಣವಾಗಿ ಸಮೀಕ್ಷೆ ಮಾಡುವವರು ಸಮಗ್ರ ಹಾನಿ.ತೊಂದರೆಗಳ ಬಗ್ಗೆ ವಿವರ ನೀಡಬೇಕು ಎಂದರು.
ತ್ಯಾಗಲಿ ಪಂಚಾಯತ್‍ನ ಮಳೆ ಮಾಪನ ಯಂತ್ರಗಳಲ್ಲಿ ಬ್ರಿಟೀಷ್ ಕಾಲದ ಯಂತ್ರ ಸರಿಯಾಗಿದೆ.ಇಲ್ಲಿಯ ಮಳೆ ವಿವರ ಈ ಯಂತ್ರದಲ್ಲಿ ನಿಖರವಾಗಿ ದಾಖಲಾಗುತ್ತಿದೆ. ಹೊಸ ಯಂತ್ರದ ಮಳೆಮಾಪನ ನಿಖರವಾಗಿರುವ ಅನುಮಾನಗಳಿವೆ. ಬೆಳೆವಿಮೆ ಮಾನದಂಡಗಳಲ್ಲಿ ಮಳೆಮಾಪನಯಂತ್ರಗಳ ಪಾತ್ರ ಗುರುತರವಾಗಿರುವುದರಿಂದ ಈ ಯಂತ್ರಗಳ ನಿಖರತೆ ಬಗ್ಗೆ ಪರೀಕ್ಷೆ ಆಗಬೇಕು. ಮಳೆಮಾಪನ, ಸರಾಸರಿ ಮಳೆ ಅಳತೆ ನಮ್ಮ ಜಿಲ್ಲೆ, ತಾಲೂಕು ಪಕ್ಕದ ಪಂಚಾಯತ್‍ವ್ಯಾಪ್ತಿ ಒಳಗೊಳ್ಳದೆ ಹೊರ ಜಿಲ್ಲೆಯ ಪ್ರದೇಶಗಳನ್ನೂ ಒಳಗೊಳ್ಳುವುದರಿಂದ ಮಳೆಪ್ರಮಾಣದ ನಿಖರತೆ ವಸ್ತುನಿಷ್ಟವಾಗಿರುವುದು ಕಷ್ಟ.
-ಎನ್.ಬಿ.ಹೆಗಡೆ, ಮತ್ತೀಹಳ್ಳಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *