
ಸುತ್ತಲೂ ಕಾರುಕಗ್ಗತ್ತಲು
ನಡುವೆ ಅರ್ಧಚಂದ್ರಾಕೃತ್ತಿ .
ಮುತ್ತಿನಲ್ಲಿ ಮತ್ತೇರಿದೆ
ನಮ್ಮಿಬ್ಬರ ಈ ಪ್ರೀತಿ..!!
ನಭದ ತುಂಬೆಲ್ಲಾ
ಅಲಲ್ಲಿ ನಕ್ಷತ್ರಗಳ ಹಿಂಡು
ಹೃದಯದೊಳಗೆ ಹಾಡುತ್ತಿದವು
ಉಲ್ಲಾಸದಿ ಭಾವನೆಗಳ ದಂಡು..!!
ಪ್ರೇಮದ ಪಿಸು ಮಾತಲ್ಲಿ
ಮನ ಕದ್ದ ಕಳ್ಳ..
ಹಿಂಚು ಹಿಂಚಾಗಿ
ಹೃದಯ ಗೆದ್ದ ನನ್ನ ನಲ್ಲಾ..!!
ದೂರದಿ ಬೀಸಿದೆ
ತಂಗಾಳಿಯ ಚಾಮರ
ಆಗಸದಿ ನಗುತ್ತಿರುವ
ಪ್ರೇಮ ಚಂದಿರ..!!
ಕತ್ತಲೊಳಗೂ ಹೊಂಬೆಳಕ
ಛಾಯೆ ಮೂಡುತ್ತಿರಲು
ನಮ್ಮಿಬ್ಬರ ನಡುವೆ
ಪ್ರೇಮದ ಬೆಳದಿಂಗಳು ಅರಳಿರಲು
ನಿನ್ನ ಈ ಕಂಗಳೊಂದಿಗೆ ನಾ
ಮನ ಬಿಚ್ಚಿ ಮಾತನಾಡುತ್ತಿರಲು
ನಮಗಾಗಿಯೇ ಕಾಯುತ್ತಿತ್ತೇನೋ
ಎಂಬತ್ತಿದೆ ನಲ್ಲಾ ಈ ರಾತ್ರಿಯ ಇರುಳು..!!
.ರೇಖಾ.ಡಿ
