
ಮೈಸೂರಿನಲ್ಲಿ ಬಿ.ಎಸ್.ಸಿ. ಓದುತ್ತಿರುವ ತಾಲೂಕಿನ ಹೊಸೂರಿನ ತೇಜಶ್ರೀ ಎಂ. ಗೋಲ್ಡನ್ ಗರ್ಲ್‍ಆಗಿ ಆಯ್ಕೆಯಾಗಿದ್ದಾಳೆ.
ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಮಲಬಾರ್ ಗೋಲ್ಡ್ ಮತ್ತು ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಸ್ಫರ್ಧೆಯಲ್ಲಿ ಆಯ್ಕೆಯಾದ ಮೊದಲ 5 ವಿದ್ಯಾರ್ಥಿನಿಯರಲ್ಲಿ ಈಕೆ ಸ್ಥಾನ ಪಡೆದಿದ್ದಾರೆ.
ಭಾರತೀಯ ಶಾಸ್ತ್ರೀಯ ನೃತ್ಯಗಳು, ಪಾಶ್ಚಾತ್ಯ ನೃತ್ಯ, ಫ್ಯಾನ್ಸಿಡ್ರೆಸ್ ಸೇರಿದಂತೆ ಹಲವು ಪ್ರತಿಭಾನ್ವೇಷಣೆ ಸ್ಫರ್ಧೆಗಳಲ್ಲಿ ಪಾಲ್ಗೊಂಡ ಅನೇಕ ವಿದ್ಯಾರ್ಥಿನಿಯರಲ್ಲಿ ತೇಜಶ್ರೀ ಭರತನಾಟ್ಯಂ ಪ್ರದರ್ಶಿಸಿ ಗೋಲ್ಡನ್‍ಗರ್ಲ್ ಗೌರವಕ್ಕೆ ಪಾತ್ರರಾದರು.
ಈ ಗೌರವವು ಇಪ್ಪತ್ತುಸಾವಿರ ನಗದು ಮತ್ತು ಪಾರಿತೋಷಕದೊಂದಿಗೆ ಪ್ರಶಸ್ತಿಪತ್ರ ಒಳಗೊಂಡಿದೆ. ತೇಜಶ್ರೀ ಎಂ. ಉಪನ್ಯಾಸಕ ಎಂ.ಕೆ.ನಾಯ್ಕ ಹೊಸಳ್ಳಿ ಮತ್ತು ಶಿಕ್ಷಕಿ ಮಹಾಲಕ್ಷ್ಮೀ ನಾಯ್ಕರ ದ್ವಿತೀಯ ಪುತ್ರಿ. ಮೈಸೂರಿನಲ್ಲಿ ಬಿ.ಎಸ್.ಸಿ. ಅಂತಿಮ ಪದವಿ ಓದುತ್ತಿರುವ ಇವರು ಹಿಂದೆ ಪ್ರತಿಭಾ ಕಾರಂಜಿ ಸೇರಿದಂತೆ ಕೆಲವು ರಾಜ್ಯಮಟ್ಟದ ಸ್ಫರ್ಧೆಗಳಲ್ಲಿ ಸ್ಥಾನ ಪಡೆದಿದ್ದರು. ಈಕೆ ಓದು, ಸಾಂಸ್ಕøತಿಕ ಚಟುವಟಿಕೆ ಸೇರಿದಂತೆ ಪಠ್ಯ-ಸಹಪಠ್ಯಗಳಲ್ಲಿ ಬಹುಮುಖಿಯಾಗಿ ಗುರುತಿಸಿಕೊಳ್ಳುತ್ತಿರುವುದಕ್ಕೆ ತಾಲೂಕಿನ ಜನತೆ ಸಂತಸ ಪಟ್ಟಿದ್ದಾರೆ.

