ಕೊನೆಪ್ರಶ್ನೆ ಕೇಳಿಸಿಕೊಳ್ಳದೆ ಹೋದ ಜೋಗುರ್‍ಸರ್


ಡಾ.ಎಸ್.ಬಿ.ಜೋಗುರ್ ನಿಧನರಾಗಿದ್ದಾರೆ.
ಈ ಸುದ್ದಿ ಕೇಳಿದಾಗ ಬರಸಿಡಿಲು ಬಡಿದಂತಾಯಿತು. ಎಸ್.ಬಿ.ಜೆ. ಈಗಿನ ಪ್ರಸಿದ್ಧ ಬರಹಗಾರ, ಕತೆಗಾರ, ಉಪನ್ಯಾಸಕ ಇತ್ಯಾದಿ. ಇವೆಲ್ಲವಕ್ಕೂ ಅರ್ಹರಂತಿದ್ದವರು ಜೋಗುರ್.
ಜೋಗುರ್ ನಮ್ಮ ಆತ್ಮೀಯ ವಲಯ ಸೇರುವ ಮೊದಲು ಕಾರವಾರದ ಗ್ಯಾಸ್ (ಸರ್ಕಾರಿ ಪದವಿ ಮಹಾವಿದ್ಯಾಲಯ) ಕಾಲೇಜಿನಲ್ಲಿ ನಮಗೆ ಉಪನ್ಯಾಸಕರಾಗಿದ್ದರು. ಅದಕ್ಕಿಂತ ಮೊದಲು ಅವರು ಪತ್ರಕರ್ತರು, ಅಂಕೋಲಾದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸಮಾಡಿದ್ದರಂತೆ. ಒಮ್ಮೆ ಸ್ನೇಹಿತ ವಿಠ್ಠಲದಾಸ ಮಾತನಾಡುತ್ತಾ ಉತ್ತಮ ವಾಗ್ಮಿಯೆಂದು ಅವರನ್ನು ಉಪನ್ಯಾಸಕ್ಕೆ ಕರೆದರೆ ಅವರು ಸಂಘವನ್ನು ಜರಿಯುವುದೆ? ಎಂದು ಆಕ್ಷೇಪವೆತ್ತಿದ್ದರು.
ಜೋಗುರ್ ಸಂಘ ಮತ್ತು ಸಂಘದ ಸೋಗಲಾಡಿಗಳ ವಿರೋಧಿಯಾಗಿದ್ದರು, ಎನ್ನುವುದು ನಮಗೆ ನಂತರ ದೊರೆತ ಕಾಣೆ.್ಕ ಆದರೆ ಈ ಎಲ್ಲಾ ಪಾತ್ರಗಳ ಮೊದಲು ಜೋಗುರ್ ನಮ್ಮ ಗುರುಗಳು. ಅದು 1990 ರದಶಕದ ಕೊನೆಯ ಘಟ್ಟದ ಅವಧಿ. ಆ ಅವಧಿಯಲ್ಲಿ ರಾಜ್ಯಶಾಸ್ತ್ರದ ರಾವ್, ಸಮಾಜಶಾಸ್ತ್ರದ ರಮೇಶ್ ಮಾಂಗ್ಲೇಕರ್, ಕನ್ನಡದ ವಿ.ಜಿ.ಗಣೇಶ್, ಮಹೇಶ್ ನಾಯಕ, ಇಂಗ್ಲೀಷ್ ನ ರಾಜೇಂದ್ರ ನಾಯಕ್ ಇತ್ಯಾದಿ… ಅತ್ಯುತ್ತಮ ಉಪನ್ಯಾಸಕರಾಗಿದ್ದರು.
ಉತ್ತಮ ಉಪನ್ಯಾಸ, ಉಪನ್ಯಾಸಕರ ಪಾಠಗಳನ್ನು ತಪ್ಪಿಸಿಕೊಳ್ಳದ ನಮಗೆ ಕೆಲವು ಉಪನ್ಯಾಸಕರೊಂದಿಗಿನ ತಕರಾರುಗಳೂ ಅವಿಭಾಜ್ಯ ಅಂಗವಾಗಿದ್ದವು. ಅದೇ ಅವಧಿಯಲ್ಲಿ ತುಸುಗಿಡ್ಡಗಿದ್ದ, ಮೀಸೆ ತೆಗೆಯುತಿದ್ದ ನಮ್ಮಣ್ಣನಂಥ ಉಪನ್ಯಾಸಕ ನಮಗೆ ಸಮಾಜಶಾಸ್ತ್ರ ಭೋದಕರಾಗಿ ಬಂದಿದ್ದರು. ಸಮಾಜಶಾಸ್ತ್ರದ ಬಗ್ಗೆ ವಿಶೇಶ ಪ್ರೀತಿಯಿದ್ದ ನಮ್ಮ ಬಳಗಕ್ಕೆ ವಿಶೇಶವಾಗಿ ನನಗೆ ಅವರು ದಿನದಿಂದ ದಿನಕ್ಕೆ ಆಪ್ತವಾಗಿ ಗೋಚರಿಸತೊಡಗಿದರು.
ನೇರ ಮಾತು, ನಿಷ್ಠೂರತೆ ಹೇಳುವುದನ್ನು ಮುಲಾಜಿಲ್ಲದೆ ಕ್ವಚಿತ್ತಾಗಿ ಹೇಳುವ ಸಾತ್ವಿಕ ದಾಷ್ಟ್ಯ ಜೊತೆಗೆ ಅವರಿಗಿದ್ದ ಓದಿನ ಹಿನ್ನೆಲೆ ನಮ್ಮೆಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು.
ಕೆಲವೇ ದಿವಸಗಳಲ್ಲಿ ಅವರು ನಮಗೆ ಉತ್ತಮ ಶಿಕ್ಷಕರಾಗಿ ಕಂಡರು. ಅದಾಗಲೇ ಅವರ ದಿಲ್ ಕಿಬಾತ್ ಸ್ಥಳಿಯ ಕರಾವಳಿ ಮುಂಜಾವಿನಲ್ಲಿ ಪ್ರಕಟವಾಗತೊಡಗಿತ್ತು. ತೋರಿಕೆಯ ಶಿಸ್ತು-ಸಂಯಮಕ್ಕೆ ವಿರುದ್ಧವಾಗಿದ್ದ ಎಸ್.ಬಿ.ಜೆ. ಕೃತಕತೆಗಳಿಂದ ಬಹುದೂರವಿದ್ದ ಅವರ ವ್ಯಕ್ತಿತ್ವ ಅವರ ಬರಹ, ಮಾತು,ಶಿಸ್ತು, ನಡವಳಿಕೆ, ಬದ್ಧತೆಗಳಲ್ಲಿ ಇಣುಕುತಿತ್ತು.
ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುತ್ತಿದ್ದ ಯಂಗ್ ಎಂಡ್ ಎನರ್ಜೆಟಿಕ್ ಜೋಗುರ ಆಗ ಅರೆಕಾಲಿಕ ಉಪನ್ಯಾಸಕರು. ಅರೆಕಾಲಿಕ ಉದ್ಯೋಗಿಯಾಗಿ ಅವರು ಎರಡ್ಮೂರು ಕಡೆ ಕೆಲಸಮಾಡುತ್ತಾ ನಮ್ಮಂಥ ಕನಸು ಕಾಣುವ ಹುಡುಗರಿಗೆ ಒಂಥರಾ ಮಾದರಿಯಂತಿದ್ದರು. ಹೀಗೆ ನಮಗೆ ಅವರು ಉಪನ್ಯಾಸಕರಾಗಿ,ಉದ್ಯೋಗಿಯಾಗಿ ಮಾದರಿಯಾಗಿದ್ದ ದಿನಗಳು ಕಳೆದ ನಂತರ ಅವರು ಖಾಯಂ ಕಾಲೇಜು ಉಪನ್ಯಾಸಕರಾದರು.ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ಬರೆಯುತಿದ್ದ ಅವರು ಖಾಯಂ ನೌಕರರಾಗುವ ವರೆಗೆ ಅತ್ಯುತ್ತಮ ಬರಹಗಳನ್ನು ಬರೆದರೂ ಅವರ ಬರಹಗಳು ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ವಿರಳ.
ಕಳೆದ ದಶಕಗಳ ವರೆಗೂ ಸ್ಥಳಿಯ, ಸೀಮಿತ ಪ್ರಸಾರದ ಪತ್ರಿಕೆಗಳಿಗೆ ಸೀಮಿತರಾಗಿದ್ದ ಅವರು ವಿಜೃಂಬಿಸಲು ಖಾಯಂ ಉಪನ್ಯಾಸಕನ ಸರ್ಕಾರಿ ಹುದ್ದೆಯ ವಿಶೇಶಣ ಸೇರಬೇಕಾಗಿದ್ದು ಈ ಕಾಲದ ವಿಪರ್ಯಾಸ.
ಕೆಲವು ಕಥಾ ಸಂಕಲನಗಳು, ಪ್ರಬಂಧಗಳು, ಅಂಕಣಬರಹಗಳು,ಕಾದಂಬರಿ ಸೇರಿದ ವಿವಿಧ ಪ್ರಕಾರಗಳನ್ನು ಕನ್ನಡಕ್ಕೆ ಕೊಟ್ಟ ಅವರ ನಿರ್ಗಮನ ಬಹುಅವಸರದ್ದು, ಜೀವಪರ ಕಾಳಜಿ, ಜೀವನಪ್ರೀತಿ, ಜಾತ್ಯಾತೀತತೆಗಳ ಅರ್ಥ ಎನ್ನುವಷ್ಟು ಅನ್ವರ್ಥಕರಾಗಿದ್ದ ಜೋಗುರ್ ಸಾಹಿತಿಯಾಗಿ, ಉಪನ್ಯಾಸಕರಾಗಿ, ಕತೆಗಾರರಾಗಿ ನಮ್ಮನ್ನು ಹೆಚ್ಚು ಕಾಡುವುದು ವ್ಯಕ್ತಿಯಾಗಿ, ಒಬ್ಬ ವ್ಯಕ್ತಿ ಎಷ್ಟು ಸರಳವಾಗಿ, ವಿಶಿಷ್ಟವಾಗಿ ಬದುಕಬಹುದೆಂಬುದಕ್ಕೆ ದೃಷ್ಟಾಂತದಂತಿದ್ದ ಜೋಗುರ್ ಹುಸಿ ರಾಷ್ಟ್ರೀಯವಾದ, ಧಾರ್ಮಿಕತೆ,ಕೋಮುವಾದಿ ರಾಜಕಾರಣದ ಉಗ್ರವಿರೋಧಿಯಾಗಿದ್ದರು. ಸರ್ಕಾರದ ಖಾಯಂ ನೌಕರಿ ಸೇರಿದ ಮೇಲೆ ಈ ಸಿಟ್ಟನ್ನು ಸಾತ್ವಿಕವಾಗಿ, ಸೂಕ್ಷ್ಮವಾಗಿ ಅಭಿವ್ಯಕ್ತಿಸುವುದನ್ನು ರೂಢಿಸಿಕೊಂಡಿದ್ದ ಅವರು ಖಾಸಗಿಯಾಗಿದ್ದಾಗ ಸ್ಫೋಟಿಸುತಿದ್ದರು ಎಂದು ಕೇಳಿದ್ದೇನೆ. ಅರ್ಧ ದಶಕದ ಸ್ನೇಹಿತರು, ಕೆಲವು ಕಾಲದ ಗುರುಗಳು, ಒಂದೂವರೆ ದಶಕದಿಂದ ಸಂಪರ್ಕವ್ಯಾಪ್ತಿಯಿಂದ ದೂರವಾಗಿದ್ದ ಜೋಗುರ್ ಕ್ಯಾನ್ಸರ್ ಮಾರಿಗೆ ಬಲಿಯಾಗಿದ್ದು ನಮ್ಮಂತೆ ಅನೇಕರಿಗೆ ತಿಳಿದಿದ್ದು ಅವರ ಸಾವಿನ ನಂತರವೇ.
ಉತ್ತರ ಕನ್ನಡದ ಅಳಿಯ, ಬಿಜಾಪುರದ ಜವಾರಿ ಮಣ್ಣಿನ ಮಗನಾಗಿದ್ದ ಜೋಗುರ್ ಸಾವು ಅವರ ಅವಸರದ ನಡೆಯಂತಾಗಿದೆ. ಜೋಗುರ್ ರ ಓದು ಅವರ ಬದ್ಧತೆ, ಸಿದ್ಧಾಂತದ ಚರ್ಚೆ, ಸಂವಾದ ಅವರ ಉಸಿರು ಕಳೆದುಕೊಂಡ ಎದೆಗೆ ತಂಪು ನೀಡಬಹುದೇನೋ? ನಾನವರಿಗೆ ಕೇಳಲೇಬೇಕಿದ್ದ, ಕೇಳಲಾಗದ ಪ್ರಶ್ನೆ ಇಷ್ಟೇಕೆ ಅವಸರ ಮಾಡಿದಿರಿ ಸರ್, ನಮ್ಮ ಎದೆಯಲ್ಲಿ ನಿಮ್ಮ ಸ್ಫೂರ್ತಿಯ ಜ್ವಾಲೆ ಪ್ರಜ್ವಲಿಸುತ್ತಿರುವುದನ್ನು ಅರಿಯುವ ಮೊದಲೇ ಹೇಳದೆ ಹೋಗಿಬಿಟ್ಟಿರಲ್ಲ.
-ನಿಮ್ಮ ವಿದ್ಯಾರ್ಥಿ ಕನ್ನೇಶ್ವರ ನಾಯ್ಕ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *