ಹಲಾಲ್ ಕಾರಣಕ್ಕೆ ಜೀವಕೊಟ್ಟಮೂರ್ಖ?


ಕಾಡುಕೋಣನ ಹತ್ಯೆ, ಹಂದಿಯ ನೆಪ, ಇವುಗಳ ಹಿಂದಿದ್ದಾರಾ ಬೇಟೆಗಾರರು?
ಹಲಾಲ್ ಮಾಡಲು ಹೋಗಿ ಜೀವಕೊಟ್ಟನೆ?
ಹಿಂದಿನ ವಾರದ ಬಾಳೂರು ಅಪಘಾತ ಮತ್ತು ಕಾಡುಕೋಣನ ಹತ್ಯೆಯ ಕತೆ ಬೆನ್ಹತ್ತಿ ಹೋದರೆ ಒಂದೊಂದೇ ರಹಸ್ಯಗಳು ಬೆಳಕಿಗೆ ಬರುತ್ತವೆ. ಕಾಡುಕೋಣನ ಬೇಟೆಯಾಡುವ ಐದಾರು ಜನರ ಶಿರಸಿ ತಂಡದಲ್ಲಿ ಶಿರಸಿಯವರೊಂದಿಗೆ ಹೊರತಾಲೂಕು, ಜಿಲ್ಲೆಯವರೂ ಸೇರಿಕೊಂಡಿದ್ದಾರೆ. ಒಂದುವಾರದ ಹಿಂದೆ ಕಾಡುಕೋಣನ ಬೇಟೆಗೆ ಬಂದಿದ್ದ ತಂಡ ಕೋಣವೊಂದನ್ನು ಹೊಡೆದು ಉರುಳಿಸುವಲ್ಲಿ ಯಶಸ್ವಿಯಾಗಿದೆ. ಈ ಮಾಂಸವನ್ನು ಹೊರ ಊರುಗಳಲ್ಲಿ ಮಾರಬೇಕೆಂದರೆ ಅದಕ್ಕೆ ಹಲಾಲ್ ಮಾಡಬೇಕು. ಹಲಾಲ್ ಮಾಡದ ಯಾವುದೇ ಮಾಂಸ ಖರೀದಿಸದ ಒಂದು ಸಮೂದಾಯ ಮಾಂಸ ಹಲಾಲ್ ಮಾಡಿದ್ದೆ, ಅಥವಾ ಬೇರೆ ವಿಧಾನಗಳಿಂದ ಹತ್ಯೆ ಮಾಡಿದ್ದೆ ಎಂದು ದೃಢಪಡಿಸಿಕೊಳ್ಳುತ್ತದೆ. ಹೀಗೆ ಹಲಾಲ್ ಮಾಂಸ ಮತ್ತು ಧರ್ಮದ ಕಾರಣಕ್ಕೆ ಕಾಡುಕೋಣನ ಕತ್ತು ಕೊಯ್ಯಲು ಹೋದ ವ್ಯಕ್ತಿಗೆ ಕಾಡುಕೋಣ ಗುದ್ದಿದ್ದೇ ಅವರ ಸಾವಿಗೆ ಕಾರಣ ಎಂದು ಈಗ ಸ್ಥಳಿಯರು ಪಿಸುಗುಡುತಿದ್ದಾರೆ. ಯಾವುದೇ ಧರ್ಮದ ಅಂಧರು, ಮೂರ್ಖ ಭಕ್ತರು ಹೀಗೆ ಧಾರ್ಮಿಕ ಅವಿವೇಕ, ಅನೈತಿಕ ಧರ್ಮ ಪಾಲನೆಯ ಕಾರಣಕ್ಕೆ ಮನುಷ್ಯ, ಮನುಷ್ಯೇತರ ಪ್ರಾಣಿವರ್ಗದಿಂದಲೂ ಹುಳುಗಳಂತೆ ಸಾಯುವುದು ಎಲ್ಲಾ ಧರ್ಮಗಳ ಅಂಧಭಕ್ತರಿಗೆ ಅರ್ಥವಾಗುವುದ್ಯಾವಾಗ?
(ಸಿದ್ಧಾಪುರ,ಆ.28-) ಒಂದುವಾರದ ಕೆಳಗೆ ಅಂದರೆ ಹಿಂದಿನ ಸೋಮವಾರ ಬಾಳೂರಿನಲ್ಲಿ ಕಾಡುಕೋಣವೊಂದು ಸತ್ತಿರುವ ಸುದ್ದಿಯಾಯಿತು.
ಇದರ ಹಿಂದಿನ ದಿನ ಹುಬ್ಬಳಿರಸ್ತೆಯ ಶಿರಸಿ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಅಪ್ಪ ಸ್ಥಳದಲ್ಲೇ ಮೃತಪಟ್ಟರೆ,ಮಗ ಕಂಗಾಲಾಗಿ ಕಾಲುಕಿತ್ತಿದ್ದ.
ಈ ಪ್ರಕರಣ ಸಿದ್ಧಾಪುರ ಪೊಲೀಸ್ ಠಾಣೆ ಮೆಟ್ಟಿಲೇರುವಾಗ ಅದಾಗಲೇ ಒಂದು ದಿನ ಕಳೆದು ಹೋಗಿತ್ತು. ವಾಸ್ತವವೆಂದರೆ..
ಕಾಡುಕೋಣನ ಬೇಟೆಗೆ ಬಂದಿದ್ದ ಶಿರಸಿ ವ್ಯಕ್ತಿಗಳು ಕಾಡುಕೋಣನ ದಾಳಿಗೆ ಒಳಗಾದಾಗ ಮನುಷ್ಯ ಸತ್ತ ಪ್ರಕರಣ ಸಿದ್ಧಾಪುರ ಠಾಣೆಯಲ್ಲಿ ಕಾಡು ಹಂದಿಯ ದಾಳಿಗೆ ಬಲಿಯಾದ ವ್ಯಕ್ತಿ ಎಂದು ದಾಖಲಾಗುತ್ತದೆ.
ಇದೇ ಪ್ರಕರಣ ಕಾಡುಕೋಣನ ಸಾವು ಶಿರಸಿ,ಜಾನ್ಮನೆ ವ್ಯಾಪ್ತಿಯಲ್ಲಿ ಕಾಡುಕೋಣದ ಅಸಹಜ ಸಾವು
ಎಂದು ದಾಖಲಾಗುತ್ತದೆ. ಈ ಪ್ರಕರಣಗಳು ಗಲಿಬಿಲಿಯಾಗಲು, ಗೊಂದಲ ಹುಟ್ಟುಹಾಕಲು ಕಾರಣ ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ವ್ಯಾಪ್ತಿ ಬೇರೆಯಾಗಿರುವುದು.
ಶಿರಸಿ ಜಾನ್ಮನೆ ವ್ಯಾಪ್ತಿಯ ಕಾಡುಪ್ರಾಣಿ ಹಾವಳಿ, ದಾಳಿ ಶಿರಸಿಗೆ ಸಂಬಂಧಿಸಿದರೆ, ಮನುಷ್ಯ ಮೃತರಾದ ಪ್ರಕರಣ ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ.
ಹೀಗೆ ಒಂದೇ ಸಂದರ್ಭ, ಎರಡು ಪ್ರಕರಣಗಳ ಹಿನ್ನೆಲೆಯಲ್ಲಿ ವಿಳಂಬ, ಗೊಂದಲ ಆಗಿದ್ದು ಸಹಜ. ಆದರೆ ಈ ಎರಡೂ ಅಸಹಜ ಸಾವುಗಳ ಹಿಂದೆ ಒಂದು ಜಾಲ ಇರುವ ಬಗ್ಗೆ ಶಿರಸಿ-ಸಿದ್ಧಾಪುರ ಭಾಗದಲ್ಲಿ ಬೀದಿಚರ್ಚೆಗಳು ನಡೆಯುತ್ತಿವೆ.
ಉತ್ತರಕನ್ನಡದ ಜನರಿಗೆ ಬೇಟೆ ಹವ್ಯಾಸ ಮತ್ತು ಮನರಂಜನೆ. ಲಾಗಾಯ್ತಿನ ಈ ಅಭ್ಯಾಸ ಈಗ ಕಡಿಮೆಯಾಗುತ್ತಿದೆಯಾದರೂ ಕಾಡುಬೇಟೆ ಮಾಡುವ ಸ್ಥಳಿಯರು ಕಾಡುಕುರಿ, ಕಾಡುಕೋಳಿ, ಕಾಡುಹಂದಿಗಳನ್ನು ಬಿಟ್ಟು ಬೇರೆ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ.
ಆದರೆ ಹೊರಜಿಲ್ಲೆಗಳಿಂದ ಇಲ್ಲಿಗೆ ಬೇಟೆಗೆ ಬರುವ ಜನರಿದ್ದಾರಲ್ಲ ಅವರಲ್ಲಿ ಬಹುತೇಕರು ಮಾಂಸ, ಚರ್ಮ, ಕಾಡುಪ್ರಾಣಿಗಳ ಅಂಗಾಂಗಮಾರುವ ಹವ್ಯಾಸಿ ಬೇಟೆಗಾರರು.
ಸಿದ್ಧಾಪುರದ ಬಾಳೂರು, ಹೇರೂರು,ಹಾರ್ಸಿಕಟ್ಟಾ, ದೊಡ್ಮನೆ,ಮಾವಿನಗುಂಡಿ ಭಾಗಗಳಲ್ಲಿ ಕನಿಷ್ಟ ನೂರಾರು ಕಾಡುಕೋಣಗಳು ಓಡಾಡುತ್ತವೆ. ಅವು ಮಾಡುವ ಬೆಳೆಹಾನಿ ತೊಂದರೆಗೆ ಬೇಸತ್ತ ಸ್ಥಳಿಯರು ಅವುಗಳ ವಧೆಗೆ ಹೊರಗಿನ ವ್ಯಕ್ತಿಗಳಿಗೆ ಸಹಕರಿಸುತ್ತಾರೆ. ಹೀಗೆ ಕಾಡುಕೋಣ, ಕಾಡೆಮ್ಮೆಗಳ ಉಪಟಳದಿಂದ ಬೇಸತ್ತವರ ನೆರವು, ಸಹಾಯ ಪಡೆಯುವ ‘ಹೊಗಿನವರು’ ಇಲ್ಲಿ ಬಂದು ಕಾಡುಕೋಣನ ಬೇಟೆಯಾಡುತ್ತಿರುವುದು ಇಲ್ಲಿ ಮಾಮೂಲು. ಈ ಪರಂಪರೆಯ ಕೊಂಡಿಯಾದ ಶಿರಸಿ ಮೂಲದ ವ್ಯಕ್ತಿ ತನ್ನ ಮಗನೊಂದಿಗೆ ಬೇಟೆಗೆ ಬಂದು ಬಂದೂಕಿನಿಂದ ಕಾಡುಕೋಣನ ಹತ್ಯೆ ಮಾಡಿದ್ದಾನೆ. ಕಾಡುಕೋಣ ಸತ್ತಿರುವುದನ್ನು ಧೃಡಪಡಿಸಿಕೊಳ್ಳಲು ಸಮೀಪಕ್ಕೆ ಹೋದ ಬೇಟೆಗಾರನನ್ನು ಕಾಡು ಕೋಣ ತಿವಿದು ಕೊಂದಿದೆ. ಈ ಆಘಾತದಿಂದ ಕಂಗಾಲಾದ ಮೃತವ್ಯಕ್ತಿಯ ಮಗ ಈಗಲೂ ಆ ಶಾಕ್‍ನಿಂದ ಹೊರಬಂದಂತಿಲ್ಲ. ಈ ಪ್ರಕರಣ ದೊಡ್ಡದಾಗಬಾರದೆಂದು ಯೋಚಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡುಕೋಣನ ಸಾವಿಗೆ ಕಾರಣ ಸ್ಫಷ್ಟವಿಲ್ಲ ಎಂದು ಶರಾ ಬರೆದಿದ್ದಾರೆ.
ಆದರೆ ಪೊಲೀಸರು ಬೈಕ್ ಮೇಲೆ ಹೋಗುತಿದ್ದ ವ್ಯಕ್ತಿ ಮೇಲೆ ಕಾಡುಹಂದಿ ದಾಳಿ ಮಾಡಿದೆ ಎಂದು ನಿಧಾನಿಸಿ ಪ್ರಕರಣ ದಾಖಲಿಸಿದ್ದಾರಲ್ಲ. ಆ ಪ್ರಕರಣದ ನಂತರ ಸ್ಥಳಿಯ ಮಾಹಿತಿ ಮೇರೆಗೆ ಮತ್ತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕಾಡುಕೋಣನ ದೇಹದಲ್ಲಿ ಗುಂಡುಗಳು ಪತ್ತೆಯಾಗಿವೆ!.
ಹೀಗೆ ರೋಚಕ ಪತ್ತೆದಾರಿ ಕತೆಯಂತಿರುವ ಈ ಪ್ರಕರಣ ಉತ್ತರಕನ್ನಡಕ್ಕೆ ಹೊರಜಿಲ್ಲೆಗಳಿಂದ ಬಂದು ಬೇಟೆಯಾಡುವ ಜನರಜಾಲವೊಂದನ್ನು ಭೇದಿಸಿದೆ.
ಕಾಡುಕೋಣ, ಕಾಡೆಮ್ಮೆಗಳ ಮಾಂಸ ಔಷಧಿಯಾಗಿ ಬಳಕೆಯಾಗುತ್ತಿರುವುದು, ಅದರ ಮಾಂಸ, ಕೊಬ್ಬು, ಕೊಂಬು ಸೇರಿದಂತೆ ಕಾಡುಕೋಣಕ್ಕೆ ಲಕ್ಷಾಂತರ ಮೌಲ್ಯವಿರುವ ಹಿನ್ನೆಲೆಯಲ್ಲಿ ಕಾಡುಕೋಣಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಕಾಡುಕೋಣ, ಕೋಡಗಗಳಿಗೆ ಪ್ರತ್ಯೇಕ ಪಾರ್ಕ್ ಮಾಡದಿದ್ದರೆ ಸ್ಥಳಿಯರ ನೆರವಿನಿಂದ ಈ ಸಂಕುಲ ನಾಶವಾಗುವ ಅಪಾಯವಂತೂ ಮುಂದಿದೆ. ಅಂದಹಾಗೆ ಬಾಳೂರಿನಲ್ಲಿ ಹತ್ಯೆಯಾದ ಕಾಡುಕೋಣ ಸತ್ತರೂ ಲಕ್ಷ, ಬದುಕಿದ್ದರೂ ಲಕ್ಷ ಎಂಬುದನ್ನು ಸಾಬೀತುಮಾಡಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *