ಆಸ್ಫತ್ರೆ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ

ಆಸ್ಫತ್ರೆ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ
(ಸಿದ್ಧಾಪುರ,ಆ.30-)ತಾಲೂಕಿನ ಸರ್ಕಾರಿ ಆಸ್ಫತ್ರೆಯಲ್ಲಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಲು ಕೆಲವು ಸ್ಥಳಿಯರು ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಫತ್ರೆಯ ಓರ್ವ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ಚಿಕಿತ್ಸೆ, ಕ್ಷಕಿರಣ ಮಾಡಿಸುವಾಗ ಅಶಿಸ್ತಿನಿಂದ ವರ್ತಿಸುತ್ತಾರೆ. ಇಂಥ ಸಿಬ್ಬಂದಿ ಮೇಲೆ ಆಸ್ಫತ್ರೆ ಆಡಳಿತವರ್ಗ ಶೀಘ್ರ ಕ್ರಮ ಜರುಗಿಸದಿದ್ದರೆ ಈ ಘಟನೆ, ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಪ್ರಮುಖರಲ್ಲಿ ಸುನಿಲ್ ನಾಯ್ಕ, ಪದ್ಮಾಕರ ನಾಯ್ಕ,ಪಾಂಡು ಹಾಗೂ ಶಂಕರಮೂರ್ತಿ ಸೇರಿದಂತೆ ಕೆಲವರಿದ್ದರು.
ಎಂಎಸ್ಸಿಯಲ್ಲಿ
ಶ್ರದ್ಧಾಗೆ ಬಂಗಾರದ ಪದಕ
ಸಿದ್ದಾಪುರ;ಆ.30- ಇಲ್ಲಿಯ ಕುಮಾರಿ ಶ್ರದ್ಧಾ ಎಂ.ವಿ. ಎಂಎಸ್ಸಿ (ರಸಾಯನಶಾಸ್ತ್ರ) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಬೆಂಗಳೂರಿನ ಜೈನ್ ಡೀಮ್ಡ ಟು ಬಿ ಯುನಿವರ್ಸಿಟಿಯಲ್ಲಿ 2017 ರಿಂದ 2019 ರ ಬ್ಯಾಚ್‍ನಲ್ಲಿ ಅಭ್ಯಸಿಸಿರುವ ಕು.ಶ್ರದ್ಧಾರಿಗೆ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿದ್ದ ಇಸ್ರೋ ಚೇರಮನ್ ಡಾ.ಕೆ.ಶಿವನ್ ಹಾಗೂ ವಿಶ್ವವಿದ್ಯಾಲಯದ ಪ್ರಮುಖರು ಪ್ರಶಸ್ತಿ ಪ್ರದಾನ ಮಾಡಿದರು.
ಶಿರಸಿಯ ಎಂಎಂ ಕಲಾ,ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಓದುವಾಗಲೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದ ಈ ಪ್ರತಿಭಾವಂತ ವಿದ್ಯಾರ್ಥಿನಿಯು ಎಂಜಿಸಿ ಮಹಾವಿದ್ಯಾಲಯದ ಪ್ರೊ.ಎಂ.ಎಸ್.ವಿನಾಯಕ ಹಾಗೂ ಶ್ರೀಮತಿ ಮೇಧಾ ದಂಪತಿಗಳ ಮಗಳು.
ವರ್ಷಕಾಲದ ಹೂವು
ಹೌದು,,, ನಿನ್ನರಳುವಿಕೆಯ ಉದ್ಧೇಶವಾದರೂ ಏನು?
ಮೊದಲ ಮಳೆಗೇ ಚಿಗಿತು
ಚಿಗಿತು ಗಿಡವಾಗಿ ಬೆಳೆದು
ಬೆಳೆದು ಹಸಿಹಸಿರಿನ ನಡುವಲಿ
ಮೊಗ್ಗಾಗಿ ಅವಿತು
ಅವಿತು ಒಡಲೊಳಗಿಂದ
ಹೂವಾಗಿ ಬಿರಿದು
ಹೂವಾಗಿ ನಲಿನಲಿದು
ಶ್ರಾವಣದಿ ಹೊಸದು…………!
ಒಂದೊಮ್ಮೆ ಅರಳಿ
ಮಗದೊಮ್ಮೆ ಮುದುಡಿ
ಮುದ್ದೆಯಾಗುವ ಸುಂದರ ಹೂವೇ,,,
ನಿನ್ನಾಗಮನದ ಸಂದೇಶ ಸಂಕೇತವೇನು?
ದುಂಬಿಯ ಮನತುಂಬಲೆಂದೇ
ದೇವರ ಅಡಿಸೇರಿ ಧನ್ಯವಾಗಲೆಂದೇ?
ನಾರಿಯ ಮುಡಿಸೇರಿ ನಾನೆಂದು ಮೆರೆಯಲೆಂದೇ?
ಕಂಪಸೂಸಿ ತಂಪನ್ನೀಡಲೆಂದೇ?
ಅನಂತಸೌಂದರ್ಯದ ಉಪಮೇಯವಾಗಲೆಂದೇ?
ನಿನಗೆ ನಿನಗಾಗಿ ಎಂಬುದಿಲ್ಲವೇ?
ನಿನಗೆ ನಿನ್ನ ತನವೆಂಬುದಿಲ್ಲವೇ?
ಇದ್ದರೂ ಅನ್ಯರಿಗೊಸ್ಕರ ಅದುಮಿಡುವ
ಸುಂದರ ಸಹಜ ಸಂಸ್ಕಾರವೇ?
ಒಮ್ಮೆ ಅರಳಿ ಮಗದೊಮ್ಮೆ ಮುದುಡಿ
ಮರುಘಳಿಗೆ ಇಲ್ಲವಾಗಿ ಬಿಡುವ
ವರ್ಷಕಾಲದ ನೀಲಿ ಬಣ್ಣದ ಹೂವೇ?
ಅನನ್ಯ ಸೌಂದರ್ಯದ ಖನಿಯೇ
ನಿನ್ನರಳುವಿಕೆಯ,,,,,
ನಿನ್ನ ಬರುವಿಕೆಯ
ಸದುದ್ದೇಶವಾದರೂ ಏನು???
-ರೂಪಾ ಹೆಗಡೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

ಪೂಜೆ, ಪುನಸ್ಕಾರ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧ…!

ದೇವರಿಗಿಂತ ಹೆಚ್ಚಾಗಿ ಕೆಲಸ,ಮಾನವೀಯತೆ ನಂಬುತಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ವೈದಿಕ ಪೂಜೆ, ಪುನಸ್ಕಾರಗಳಂಥ ಕಂದಾಚಾರಗಳನ್ನು ವಿರೋಧಿಸುತಿದ್ದರು. ಅಂಥ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *