
ಆ ನಿನ್ನ ಸವಿ ಧ್ವನಿ ತಾಗಿದಾಗ ನನ್ನ ಎದೆಗೆ ತುಂಬಿ ಹರಿಯುವ ಸಂಭ್ರಮ ಸಾವಿರ ನದಿಗಳಿಗೆ… ಸೇರಲು ಸಾಗರ ಧುಮ್ಮಿಕ್ಕುವ ನಡಿಗೆ ಹಾದು ಹೋಗುವ ದಾರಿಗೂ ಕೂಡಿ ಬಂತು ಅಮೃತ ಘಳಿಗೆ.. ಎಲೆ ಹೂಗಳಿಗೆ ಎಂತಹ ಸ್ಪರ್ಶ ಸುಮಧುರ ಸ್ವರವಾಲಿಸಲು ಹಚ್ಚಿಕೊಂಡವು ಪರಾಗಸ್ಪರ್ಶ.. ಶಿಶಿರ ಋತುವಿಗೆ ಹಾವಭಾವಗಳ ಅಭಿಷೇಕವೇ ಮೊದಲ ಮಂಜಿನ ಹನಿಗಳು ಕದ್ದಾಲಿಸಲು ಸುಂಯ್ ಎಂದಿವೆ..ಚುಮುಚುಮು ಚಳಿಯು ಆವರಿಸಲು ಮೆಲ್ಲಮೆಲ್ಲನೆ ಕೇಳಿದೆ ಕಾರಣ ಏನೆನ್ನಲು ಉಸಿರಿದವು ಕಿವಿಯಲ್ಲಿ ಥಟ್ಟನೆ.. ಹೊಸ ಕನಸು ಅವುಗಳಿಗೂ ತಂಗಾಳಿಯ ಮೆಚ್ಚಿಸಲು ನಿನ್ನ ರಾಗವ ನಕಲಿಸಿ ಹೊರಡುವುದಂತೆ ಬೆಚ್ಚಗಾಗಿಸಲು..ಪಕ್ಕದ ಮುಳ್ಳ ಬೇಲಿಯಲ್ಲೂ ಅರಳಿ ನಗುವವು ಹೂಗಳು ಸುಗಂಧ ಸೂಸುವವು ಹೆಚ್ಚೆಚ್ಚು ಕೇಳಿ ಖುಷಿಯಾಗಿ ನಿನ್ನ ಮಾತುಗಳು.. ಮಾಧುರ್ಯದ ತುಣುಕುಗಳಿಗೆ ಜಲಪಾತದ ಧುಮುಕು ತೋಯಿದು ಮಿಂದೆದ್ದು ಧನ್ಯತೆ ಅನುಭವಿಸುವುದೇ ಬದುಕು..*ಬಸವರಾಜ ಕಾಸೆ* pradeepbasu40@gmail.com 7829141150ReplyForward |
