
ಮಳೆಯಿಂದ ಕುಸಿದ ಗೋಡೆ, ಗಾಯಾಳುಗಳು ಅಪಾಯದಿಂದ ಪಾರು
ಶಿರಸಿ ಹೃದಯ ಭಾಗದ ಹೋಟೆಲ್ ಒಂದರ ಗೋಡೆ ಕುಸಿದ ಪರಿಣಾಮ 4-5 ಜನರಿಗೆ ಗಾಯಗಳಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮಳೆ ಹಿನ್ನೆಲೆಯಲ್ಲಿ ಹಳೆ ಮಣ್ಣು ಕಲ್ಲುಗಳ ಗೋಡೆ ಕುಸಿದ ಪರಿಣಾಮ ಈ ದುರ್ಘಟನೆ ನಡೆದಿದ್ದು ಗಾಯಾಳುಗಳಾದ 4-5 ಜನರೂ ಅಪಾಯದಿಂದ ಪಾರಾಗಿದ್ದಾರೆ.
ಪ್ರತಿಭಟನೆ-
ಇ.ಡಿ.ಯಿಂದ ಡಿ.ಕೆ.ಶಿವಕುಮಾರ ಬಂಧನ, ಕಿರುಕುಳಗಳ ಹಿನ್ನೆಲೆಯಲ್ಲಿ ಕೆ.ಪಿ.ಸಿ.ಸಿ.ಕರೆಕೊಟ್ಟಿದ್ದ ಪ್ರತಿಭಟನೆಗೆ ಉತ್ತರ ಕನ್ನಡ ಸ್ಫಂದಿಸಿದೆ. ಶಿರಸಿಯಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸೇರಿದ್ದ ಎಲ್ಲಾ ಬ್ಲಾಕ್‍ಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರ ಪ್ರತಿಕೃತಿ ಸುಡುವ ಮೂಲಕ ಪ್ರತಿಭಟನೆ ದಾಖಲಿಸಿದರು.
ಈ ಪ್ರತಿಭಟನೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ನಡೆಯಿತು.




