ಸಿದ್ದಾಪುರ
ತಾಲೂಕಿನ ಹೂಡ್ಲಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಶಿಯಾ ಗುರುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಹಾಗೂ ಇನ್ನಿತರ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಅಡಿಕೆ ವರ್ತಕರ ಸಂಘಕ್ಕೆ ಪಿ.ಎಂ.ಹೆಗಡೆ ಅಧ್ಯಕ್ಷ
ಕಾಮತ್
ಉಪಾಧ್ಯಕ್ಷ
ಸಿದ್ಧಾಪುರ ತಾಲೂಕಿನ ಪ್ರತಿಷ್ಠಿತ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಉದ್ಯಮಿ ಪ್ರಕಾಶ ಹೆಗಡೆ ಗುಂಜಗೋಡು ಮತ್ತು ಉಪಾಧ್ಯಕ್ಷರಾಗಿ ವರ್ತಕ ಎನ್.ಜಿ.ಕಾಮತ್ ಆಯ್ಕೆಯಾಗಿದ್ದಾರೆ.