
ಸಿದ್ದಾಪುರ.
ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಹೂಡ್ಲಮನೆ ಹಿ.ಪ್ರಾ.ಶಾಲೆಯ ಶಿಕ್ಷಕಿ ಸಂಶಿಯಾರಿಗೆ ಈ ವರ್ಷದ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭ್ಯವಾಗಿದೆ.
ಕಳೆದ 12 ವರ್ಷಗಳಿಂದ ಹೂಡ್ಲಮನೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನೂ, ನಲಿ-ಕಲಿ, ಕಲಿಕೋತ್ಸವ ಮುಂತಾದ ಶೈಕ್ಷಣಿಕವಾದ ಯೋಜನೆಗಳಲ್ಲಿ ಹಾಗೂ ಇಂಗ್ಲೀಷ್ ಸಂಪನ್ಮೂಲ ವ್ಯಕ್ತಿಯಾಗಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕೆ ವಿಭಾಗಮಟ್ಟದಲ್ಲೂ ಪುರಸ್ಕಾರ ಪಡೆದಿದ್ದರು.
ಶಾಲೆಯಲ್ಲಿನ ಗ್ರಾಮೋತ್ಸವ, ಗ್ರಂಥಾಲಯ ಅಭಿವೃದ್ಧಿ ಮುಂತಾದವುಗಳಲ್ಲಿ ಉಳಿದ ಶಿಕ್ಷಕರ ಜೊತೆ ಹೆಚ್ಚಿನ ಶ್ರಮ ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳ ಮೂಲಕ ಅವರಲ್ಲಿ ಕಲಿಕಾ ಸಾಮಥ್ರ್ಯ ಹೆಚ್ಚಿಸಿರುವದಲ್ಲದೇ ಹೂಡ್ಲಮನೆ ವ್ಯಾಪ್ತಿಯ ಮಹಿಳಾ ಪಾಲಕರಿಗೆ ಹಾಗೂ ಆಸಕ್ತ ಮಹಿಳೆಯರಿಗೆ ಲೇಡಿಸ್ ಕ್ಲಬ್ ರೂಪಿಸಿ ವಾರಕ್ಕೊಮ್ಮೆ ಇಂಗ್ಲೀಷ್ ಭಾಷೆ ಕಲಿಸುತ್ತಿರುವುದು ಅವರ ಹೆಗ್ಗಳಿಕೆ.
ಸಮಾಜಮುಖಿಯೊಂದಿಗೆ ಮಾತನಾಡಿದ ಶ್ರೀಮತಿ ಸಂಶಿಯಾ ನನಗೆ ದೊರೆತಿರುವ ಪುರಸ್ಕಾರ ನನ್ನ ಶಾಲೆಗೆ ಸಲ್ಲಬೇಕು. ಅಲ್ಲಿನ ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ, ಸಹ ಶಿಕ್ಷಕರ, ಪಾಲಕರ,ಪೋಷಕರ ಸಹಕಾರದಿಂದ ಇಂಥ ಪುರಸ್ಕಾರ ಪಡೆಯಲು ಸಾಧ್ಯವಾಗಿದೆ. ಶಾಲೆಗೆ ಇನ್ನೂ ಹೆಚ್ಚಿನ ಪ್ರಗತಿಯಾಗಲು ಈ ಪುರಸ್ಕಾರ ಕಾರಣವಾಗಲಿ ಎಂದರು.

ಮೊಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ…
ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.”
ವಿಜಯ ಕಿರೇಸೂರ ಅವರು ಪ್ರಗತಿಪರ ಆಲೋಚನೆಯ ಚಿತ್ರಕಲಾ ಶಿಕ್ಷಕರು. ಗದಗ ಹತ್ತಿರದ ನಿರಲಗಿ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತುಂಬಾ ವಿಶಿಷ್ಟ ಕನಸಿನೊಂದಿಗೆ ಕಾವ್ಯದಂತಹ ಚಿತ್ರಗಳನ್ನು ಬರೆಯುತ್ತಿದ್ದಾರೆ. ನಾಡಿನ ದಾರ್ಶನಿಕರ ಪುಟ್ಟ ಪುಟ್ಟ ಸಂದೇಶಗಳಿಗೆ ಕಲೆಯ ಸ್ಪರ್ಶ ನೀಡಿ ‘ಮಾತುಗಳು ಮಾರಾಟಕ್ಕಿವೆ’ ಶಿರ್ಷಿಕೆಡಿಯಲ್ಲಿ ಮಾತುಮಾರಿ ಜನಜಾಗೃತಿ ಮೂಡಿಸಿದ್ದಾರೆ.
ಚಿತ್ರಕಲಾ ಪದವಿಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿರುವ ಇವರು ನಾಡಿನ ಹಲವಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ, ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಚಿತ್ರ ಬರೆಯುವುದರ ಜೊತೆಜೊತೆಗೆ ಮಕ್ಕಳಲ್ಲಿ ವೈಚಾರಿಕ ಹೊಳಹುಗಳನ್ನು, ಚಿತ್ರದಾಚೆಗಿರುವ ಚಿಂತನೆಗಳನ್ನು ಬಿತ್ತುವ ಕೃಷಿಕರು. ಇವರ ರೇಖಾಚಿತ್ರಗಳು, ಕಲಾಕೃತಿಗಳು ತಕ್ಷಣ ನೋಡುಗರ ಮನಸೆಳೆಯುತ್ತವೆ.
ತಮ್ಮದೇ ಆದ ಒಂದು ಪುಟ್ಟ ಕಲಾಗ್ಯಾಲರಿಯ ಕನವರಿಕೆಯೊಂದಿಗೆ, ಜನಸಾಮಾನ್ಯರಿಗೂ ಕಲಾಕೃತಿಗಳನ್ನು ಅರ್ಥೈಸಬೇಕೆಂಬ ಸದಾಶಯದೊಂದಿಗೆ ಶ್ರಮಿಸುತ್ತಿದ್ದಾರೆ. ಕಲೆಯೊಳಗಡಗಿರುವ ಸಂಪ್ರದಾಯ ಮೌಢ್ಯದ ಚೌಕಟ್ಟನ್ನು ಮುರಿದು ಕಟ್ಟುವ ಕಾಯಕದಲಿ ತಲ್ಲೀನರಾಗಿದ್ದಾರೆ. ವೈಚಾರಿಕ ಚಿಂತನೆಯುಳ್ಳ ಕಿರೇಸೂರಂತಹ ಶಿಕ್ಷಕರ ಸಂಖ್ಯೆ ಹೆಚ್ಚೆಚ್ಚು ಹಿರಿದಾಗಬೇಕಿದೆ.
ಇವರ ಒಂದು ಕಲಾಕೃತಿ ಹೀಗೆ ಹೇಳುತ್ತದೆ
“ಬಂಧುಗಳೇ.. ನನಗೆ ಯಾವುದೇ ಪಕ್ಷ ಪಂಥ ಜಾತಿ ಧರ್ಮ ಲಿಂಗಗಳ ಮೊಹರೊತ್ತಬೇಡಿ, ದಯವಿಟ್ಟು ನನ್ನನ್ನು ಮನುಷ್ಯನ್ನನ್ನಾಗಿ ನೋಡಿ, ಹೃದಯದ ಪ್ರೀತಿಕೊಡಿ, ಮೋಹರೊತ್ತಲು ಮೇಲೊಬ್ಬ ಮಹಾರಾಯನಿದ್ದಾನೆ.” ಅಪ್ಪಟ ಜೀವಪರ ಕಾಳಜಿಯುಳ್ಳ ವಿಜಯ ಕಿರೇಸೂರವರ ಕಲಾಪಯಣ ಯಶಸ್ವಿಯಾಗಲಿ.
ಕೆ.ಬಿ.ವೀರಲಿಂಗನಗೌಡ್ರ.
ಎಸ್.ಆರ್.ಜಿ.ಹೆಚ್.ಎಂ ಪ್ರೌಢಶಾಲೆ, ಸಿದ್ದಾಪುರ-581355. ಉ.ಕ ಜಿಲ್ಲೆ. ದೂ-9448186099.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
