ಸನ್ಮಾನದೊಂದಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಆತಂಕದಿಂದ ಬಂದು ಆನಂದದಿಂದ ಹೋಗುತ್ತಿದ್ದೇನೆ. ಕಳೆದ ಹನ್ನೆರಡು ವರ್ಷಗಳ ಸೇವೆಯ ಸಾರ್ಥಕದ ಕ್ಷಣ ಇದು ಎಂದುಕೊಳ್ಳುತ್ತೇನೆ. ನೌಕರರೆಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಇದು ನನ್ನ ಭಾಗ್ಯ ಎಂದು ಸೇವಾನಿವೃತ್ತಿ ಹೊಂದಿದ ಪ್ರಾಚಾರ್ಯ ಎಂ.ಜಿ.ಪೋಳ ಹೇಳಿದರು. ಅವರು ನಾಣಿಕಟ್ಟಾ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ, ಸ್ಥಳೀಯ ಸೇವಾ ಸಹಕಾರಿ ಸಂಘ, ಗಜಾನನ ವಿದ್ಯಾವರ್ಧಕ ಸಂಘ ಹಾಗೂ ಪ್ರೌಢಶಾಲಾ ವಿಭಾಗದ ಸಿಬ್ಬಂದಿಗಳು ಶನಿವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಕೃತÀಜ್ಞತೆ ಸಲ್ಲಿಸಿ ಮಾತನಾಡಿದರು. ದೂರದ ಮುಧೋಳದವನಾದ ನಾನು, ಜೇವರ್ಗಿಯಲ್ಲಿ ಉಪನ್ಯಾಸಕನಾಗಿ ಸೇವೆ ಪ್ರಾರಂಭಿಸಿದರೂ, ಮಲೆನಾಡಿನ ಮಂಚಿಕೇರಿಯಲ್ಲಿ 17 ವರ್ಷ ಉಪನ್ಯಾಸಕನಾಗಿ ಸೇವೆಸಲ್ಲಿಸಿದ್ದೇನೆ. ಪ್ರಾಚಾರ್ಯನಾಗಿ ನಾಣಿಕಟ್ಟಾ ಕಾಲೇಜಿನಲ್ಲಿ 12ವರ್ಷಗಳ ತೃಪ್ತಿಯ ಸೇವೆ ಸಲ್ಲಿಸಿದ್ದೇನೆ.ಈ ಅವಧಿಯಲ್ಲಿ ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಸ್ಥಳೀಯರ ಉತ್ತಮ ಸಹಕಾರಸಿಕ್ಕಿದೆ. ಕಳೆದ ಮಾರ್ಚದಿಂದ ಉ.ಕ.ಜಿಲ್ಲೆಯ ಪ.ಪೂ.ಶಿ.ಇಲಾಖೆಯ ಉಪನಿರ್ದೇಶಕನಾಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು ಮತ್ತಷ್ಟು ಖುಷಿಕೊಟ್ಟಿದೆ. ಪ್ರೀತಿಯ ಸನ್ಮಾನ, ಬೀಳ್ಕೊಡುಗೆಯಿಂದ ಹೃದಯ ತುಂಬಿಬಂದಿದೆ ಎಂದರು.
ಅವರ ಪತ್ನಿ ರೇಣುಕಾ ಜೊತೆಯಲ್ಲಿದ್ದು ಗೌರವ ಸ್ವೀಕರಿಸಿದರು. ಉಪನ್ಯಾಸಕ ಎಂ.ಆಯ್ ಹೆಗಡೆ ಅಭಿನಂದನಾ ನುಡಿಗಳನ್ನಾಡಿದರು. ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ ಒಬ್ಬ ಅಧಿಕಾರಿ ಆಡಳಿತ ಹಾಗೂ ಸಾಮಾಜಿಕ ಸ್ಪಂದನೆಯಿಂದ ಗುರುತಿಸಿಕೊಳ್ಳುತ್ತಾನೆ. ಎಂ.ಜಿ.ಪೋಳ ಅವರು ನಮ್ಮೊಂದಿಗೆ ಮನೆಯ ಸದಸ್ಯರಂತೆ ಹೊಂದಿಕೊಂಡಿದ್ದರು ಎಂದರು.
ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತಿಹಳ್ಳಿ, ತಾ.ಪಂ.ಸ್ಥಾಯಿ ಸಮಿತಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ಗ್ರಾ.ಪಂ.ಉಪಾಧ್ಯಕ್ಷ ವಸಂತ ಹೆಗಡೆ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಜಿ.ಹೆಗಡೆ ಬೆಳ್ಳೆಕೇರಿ, ಗಜಾನನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಿ.ವಿ.ಹೆಗಡೆ ಗೋರನಮನೆ, ಸಾಮಾಜಿಕ ಕಾರ್ಯಕರ್ತ ವಿ.ಎಂ.ಹೆಗಡೆ ತ್ಯಾಗಲಿ, ಪ್ರೌಢಶಾಲಾ ಮುಖ್ಯಸ್ಥೆ ಸಾವಿತ್ರಿ ನಾಯಕ್, ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ದತ್ತಾತ್ರೇಯ ಆರ್ ಹೆಗಡೆ ಎಂ.ಜಿ.ಪೋಳರ ಸೇವೆ ಹಾಗೂ ಕ್ರಿಯಾಶೀಲತೆಯನ್ನು ಶ್ಲಾಘಿಸಿ ಶುಭಕೋರಿದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಎಂ.ಕೆ.ನಾಯ್ಕ ಮಾತನಾಡಿ ಎಂ.ಜಿ.ಪೋಳರ ದೂರದರ್ಶಿತ್ವ, ಆಡಳಿತ ವೈಖರಿ ಮಾರ್ಗದರ್ಶಕವಾಗಿತ್ತು ಎಂದರು. ವಿದ್ಯಾರ್ಥಿಗಳಾದ ಸೌಮ್ಯ ನಾಯ್ಕ, ರಮಾನಂದ ಗೌಡ, ತನುಶ್ರೀ.ಕೆ. ಉಪನ್ಯಾಸಕರಾದ ಓಂಕಾರಪ್ಪ, ಶ್ರೀನಿವಾಸ ನಾಗರಕಟ್ಟೆ, ಎಂ.ಎಂ.ಭಟ್ಟ, ತನುಜಾ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು.ಎ.ಎಲ್.ನಾಯ್ಕ ಸನ್ಮಾನಪತ್ರ ವಾಚಿಸಿದರು. ನಾಗವೇಣಿ ಎಚ್ ನಾಯ್ಕ ಸ್ವಾಗತಿಸಿದರು. ಕು.ಮಧುರಾ ಮತ್ತು ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಆನಂದ.ಡಿ.ಕೆ. ವಂದಿಸಿದರು. ಮಾಲಾ.ಎ. ಮತ್ತು ಶೈಲಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.