ಮಿಶ್ರ ಸರಬರಾಜು (Mixed Supply) ಎಂದರೇನು?


ಜಿಎಸ್ಟಿ (GST) ಕಾಯ್ದೆಯ ಅಡಿಯಲ್ಲಿ ಸಂಯೋಜಿತ ಮತ್ತು ಮಿಶ್ರ ಸರಬರಾಜು
by ನರೇಂದ್ರ ಹಿರೇಕೈ

ಜಿಎಸ್ಟಿ (GST) ಕಾಯ್ದೆಯಲ್ಲಿ ಸರಿಸುಮಾರು ಎಲ್ಲಾ ಸರಕು ಮತ್ತು ಸೇವೆಗಳಿಗೆ ತೆರಿಗೆ ದರಗಳನ್ನು ಸ್ಪಷ್ಟವಾಗಿ ನಮೂದಿಸಿದೆ. ಪ್ರತಿಯೊಂದು ಸರಕು ಮತ್ತು ಸೇವೆಗಳಿಗೆ ಒಂದೊಂದು ಗುರುತಿನ ಸಂಖ್ಯೆಯನ್ನು (HSN CODE) ನೀಡಿರುವುದರಿಂದ ಆ ಮೂಲಕವೂ ತೆರಿಗೆ ದರಗಳನ್ನು ಸುಲಭವಾಗಿ ಕಂಡುಹಿಡಿಯಬಹುದು. ಆದಾಗ್ಯೂ, ಅದು ಪರಿಪೂರ್ಣವೆಂದು ಹೇಳಲು ಸಾಧ್ಯವಿಲ್ಲ. ಎಷ್ಟೋ ಸರಕು ಮತ್ತು ಸೇವೆಗಳ ಮೇಲೆ ಅನ್ವಯವಾಗಬಹುದಾದ ತೆರಿಗೆ ದರಗಳ ಬಗ್ಗೆ ಇನ್ನೂ ಅಸ್ಪಷ್ಟತೆ ಇದ್ದೇ ಇದೆ. ಯಾಕೆಂದರೆ ಕೆಲವೊಂದು ಸರಕು ಅಥವಾ ಸೇವೆಗಳು  ಸಂಯೋಜನೆ (COMPOSIT) ಅಥವಾ ಮಿಶ್ರಣದ (MIXED) ಸ್ವರೂಪವನ್ನು ಹೊಂದಿರುತ್ತವೆ. ಅಂಥಹ ಸರಬರಾಜಿನಲ್ಲಿ ಬೇರೆ ಬೇರೆ ದರಗಳ ಸರಕು ಅಥವಾ ಸೇವೆಗಳು ಸೇರಿಕೊಂಡಾಗ ಅಂಥಹ ಸರಬುರಾಜಿಗೆ ನಿರ್ದಿಷ್ಟ ತೆರಿಗೆ ದರವನ್ನು ಕಂಡುಹಿಡಿಯುವುದು ಸಂಕೀರ್ಣವೆನಿಸುತ್ತದೆ.  ಅಂಥಹ ಸಂದರ್ಭಗಳಲ್ಲಿ, ಸಂಯೋಜಿತ ಅಥವಾ ಮಿಶ್ರ ಸರಬರಾಜಿಗೆ ಸಂಬಂಧಿಸಿದಂತೆ ಜಿಎಸ್ಟಿ ಕಾಯ್ದೆಯಲ್ಲಿರುವ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯವೆನಿಸುತ್ತದೆ. ಹಾಗಾಗಿ, ಜಿಎಸ್ಟಿ (GST) ಕಾಯ್ದೆಯ ಅಡಿಯಲ್ಲಿ ಸಂಯೋಜಿತ ಮತ್ತು ಮಿಶ್ರ ಸರಬರಾಜು.( Composite Supply & Mixed Supply)ಗಳಿಗೆ ಸಂಬಂಧಿಸಿದಂತೆ ಇರುವ ನಿಯಮಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡುವ ಪ್ರಯತ್ನ ಇದಾಗಿದೆ.

ಸಂಯೋಜಿತ ಸರಬರಾಜು (Composite Supply) ಎಂದರೇನು?

ಕೇಂದ್ರ ಸರಕು ಮತ್ತು ಸೇವಾ ಅಧಿನಿಯಮದ ಕಲಂ 2 (30) ರ ಪ್ರಕಾರ ಸಂಯೋಜಿತ ಪೂರೈಕೆ ಎಂದರೆ ಸರಕು ಅಥವಾ ಸೇವೆಗಳ ಅಥವಾ
ಅವೆರಡರ ವಿವಿಧ ಸಂರಚನೆಗಳ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತೆರಿಗೆಗೆ ಒಳಪಡುವ ಪೂರೈಕೆಗಳನ್ನು
ಒಳಗೊಂಡ ಪೂರೈಕೆ. ಈ ಬಗೆಯ ಪೂರೈಕೆ ಸ್ವಾಭಾವಿಕವಾಗಿ ಒಟ್ಟಿಗೇ ಆಗುವಂತಿದ್ದು ವ್ಯವಹಾರದ ಸಾದಾರಣ
ಕ್ರಮದಲ್ಲಿ ಒಂದರೊಡನೆ ಇನ್ನೊಂದನ್ನು ಸಮುಚ್ಛದಲ್ಲಿ ಪೂರೈಸುವಂತಿರಬೇಕು ಮತ್ತು ಅವುಗಳಲ್ಲಿ ಒಂದು
ಪ್ರಧಾನ ಪೂರೈಕೆಯಾಗಿರಬೇಕು.

ಈ ಮೇಲಿನ ವ್ಯಾಖ್ಯಾನದಿಂದ ಸಂಯೋಜಿತ ಸರಬರಾಜು (Composite Supply) ಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದು
ಕಷ್ಟ. ಒಂದು ಉದಾಹರಣೆಯ ಮೂಲಕ ನೋಡೋಣ: ನೀವು ಒಂದು ಮೊಬೈಲನ್ನು ಖರೀದಿಸುತ್ತೀರಿ ಎಂದು ಇಟ್ಟುಕೊಳ್ಳೋಣ,
ಆ ಖರೀದಿಯು ಒಂದು ವರ್ಷದ ವಾರಂಟಿಯನ್ನೂ ಹಾಗೂ ನಿರ್ವಹಣೆಯ ಸೌಲಭ್ಯವನ್ನೂ ಸಹ ಒಳಗೊಂಡಿರುತ್ತದೆ ಅಂತಿಟ್ಟುಕೊಳ್ಳಿ.
ಇದು ಸಂಯೋಜಿತ ಸರಬರಾಜು (Composite Supply) ಎಂದು ಅಂತೆನಿಸಿಕೊಳ್ಳುತ್ತದೆ ಮತ್ತು ಇಲ್ಲಿ ಮೊಬೈಲ್
ಪ್ರಧಾನ ಪೂರೈಕೆಯಾಗಿರುತ್ತದೆ. ಇನ್ನೂ ವಿವರವಾಗಿ ಹೇಳಬೇಕೆಂದರೆ ಈ ಪೂರೈಕೆಯಲ್ಲಿ ಮೊಬೈಲ್ ಒಂದು ಪ್ರಧಾನ
ಸರಕು, ವಾರಂಟಿ ಮತ್ತು ನಿರ್ವಹಣೆ ಅಧೀನ ಸೇವೆ. ಇವು ಮೂರೂ ಸೇರಿದ ಮೇಲೆ ಇದು ಒಂದು ಸರಬರಾಜು ಅಂತ
ಆಗುತ್ತದೆ ಆದರೆ ಒಂದೊಂದನ್ನೇ ಪ್ರತ್ಯೇಕವಾಗಿ ಸರಬರಾಜು ಮಾಡಲು ಸಾಧ್ಯವೇ ಇಲ್ಲ. ಮೂರೂ ಸೇರಿದಾಗ ಮಾತ್ರ
ಇದೊಂದು ಪರಿಪೂರ್ಣ ಪೂರೈಕೆಯಾಗಲು
ಸಾಧ್ಯ. ಇಲ್ಲಿ ಪ್ರಶ್ನೆ ಎಂದರೆ ಈ ಪೂರೈಕೆಯಲ್ಲಿ ಮೊಬೈಲ್ ಗೆ ಒಂದು ದರದ ತೆರಿಗೆ, ವಾರಂಟಿಗೆ ಇನ್ನೊಂದು
ದರದ ತೆರಿಗೆ, ನಿರ್ವಹಣೆಗೆ ಮತ್ತೊಂದು ದರದ ತೆರಿಗೆ ಇದ್ದಾಗ ಇವೆಲ್ಲವೂ ಸೇರಿದಾಗ ಆಗುವ ಒಂದೇ ಪೂರೈಕೆಗೆ
ಯಾವ ತೆರಿಗೆಯ ದರ ಅನ್ವಯಿಸುತ್ತದೆ?   

ಇನ್ನೊಂದು ಉದಾಹರಣೆಯನ್ನು ಗಮನಿಸಿ: ನೀವು ಒಂದು ಐಸ್ಕ್ರೀಮ್ ಖರೀದಿ ಮಾಡಿ, ನೀವು ಐಸ್ ಕ್ರೀಮ್ ಸೇವಿಸುವುದಕ್ಕಾಗಿ ಪ್ಲಾಸ್ಟಿಕ್ ಚಮಚವನ್ನು ಕೊಡುತ್ತಾರೆ ತಾನೆ? ಜಿಎಸ್ಟಿ ಕಾಯ್ದೆಯಲ್ಲಿ ಐಸ್ ಕ್ರೀಮ್ ಗೆ ಒಂದು ದರದ ತೆರಿಗೆ ಮತ್ತು ಪ್ಲಾಸ್ಟಿಕ್ ಚಮಚಕ್ಕಾಗಿ ಬೇರೊಂದು ದರದ ಜಿಎಸ್ಟಿ ತೆರಿಗೆ ಇದೆ. ಹಾಗಾದರೆ ಚಮಚವನ್ನೂ ಸೇರಿ ಐಸ್ ಕ್ರೀಮ್ ಕೊಟ್ಟಾಗ ಯಾವ ದರದ ತೆರಿಗೆ ವಿಧಿಸಬೇಕು?

ಸಂಯೋಜಿತ
ಸರಬರಾಜಿನಲ್ಲಿ (Composite
Supply)  ಪ್ರಧಾನ
ಪೂರೈಕೆಗೆ ಯಾವ ತೆರಿಗೆಯ ದರ ಅನ್ವಯಿಸುವುದೋ ಅದೇ ದರವನ್ನು
ಒಟ್ಟೂ ಪೂರೈಕೆಗೆ ಅನ್ವಯಿಸಬೇಕು. ಮೇಲಿನ ಉದಾಹರಣೆಯಲ್ಲಿ ಮೊಬೈಲ್ ಗೆ ಯಾವ ತೆರಿಗೆ ದರ ಇರುವುದೋ ಅದೇ
ದರದ ತೆರಿಗೆಯನ್ನು ಇನ್ನುಳಿದ ಪೂರೈಕೆಗೂ ಅನ್ವಯಿಸಬೇಕು ಯಾಕೆಂದರೆ ಇಲ್ಲಿ ಮೊಬೈಲ್ ಪ್ರಧಾನ ಪೂರೈಕೆಯಾಗಿರುತ್ತದೆ.
ಎರಡನೇ ಉದಾಹರಣೆಯಲ್ಲಿ ಯಾವ ದರ ಅನ್ವಯವಾಗುವುದೆಂದು ನೀವೇ ಕಂಡುಹಿಡಿಯಿರಿ.

ಮಿಶ್ರ ಸರಬರಾಜು (Mixed Supply) ಎಂದರೇನು?

ಕೇಂದ್ರಸರಕುಮತ್ತುಸೇವಾಅಧಿನಿಯಮದಕಲಂ2 (74) ಪ್ರಕಾರಮಿಶ್ರ ಸರಬರಾಜು (Mixed Supply) ಎಂದರೆ ಸರಕು ಅಥವಾ ಸೇವೆಗಳ ಅಥವಾ ಅವೆರಡರ ವಿವಿಧ ಸಂರಚನೆಗಳ
ಒಂದಕ್ಕಿಂತ ಹೆಚ್ಚಿನ ಪೂರೈಕೆಗಳನ್ನು ಒಂದರ ಸಮುಚ್ಛದಲ್ಲಿ ಮತ್ತೊಂದನ್ನು ಒಂದೇ ಬೆಲೆಗೆ ಪೂರೈಸಲಾಗುತ್ತಿದ್ದರೂ
ಸಾಮಾನ್ಯವಾಗಿ ಬೇರೆ ಬೇರೆಯಾಗಿ ಪೂರೈಸಲು ಸಾಧ್ಯವಿರುವಂಥಹ ಪೂರೈಕೆಗಳು ಮಿಶ್ರ ಸರಬರಾಜು (Mixed
Supply) ಅಂತೆನಿಕೊಳ್ಳುತ್ತದೆ.

ಪುನಃ ಇದನ್ನು ಒಂದು ಉದಾಹರಣೆಯ ಮೂಲಕವೇ ನೋಡುವುದು ಉತ್ತಮ. ನೀವು
ಒಂದು ಅಂಗಡಿಗೆ ಹೋಗಿ ಒಂದು ಪ್ಯಾಕ್ ಆಗಿರುವ ವಸ್ತುವೊಂದನ್ನು ಖರೀದಿ ಮಾಡುತ್ತೀರಿ ಅಂತಿಟ್ಟುಕೊಳ್ಳಿ.
ಅದರೊಳಗೆ ಒಂದಿಷ್ಟು ಚಾಕೊಲೇಟ್, ಒಂದಿಷ್ಟು ಒಣ ಹಣ್ಣುಗಳು, ಪೇಡಾ, ಕೇಕ್, ಹೀಗೆ ಬೇರೆ ಬೇರೆ ವಸ್ತುಗಳೆಲ್ಲ
ಸೇರಿ ಪ್ಯಾಕ್ ಮಾಡಿ ಒಂದು ಬೆಲೆಗೆ ಇಡೀ ಪ್ಯಾಕ್ ನ್ನು ಮಾರಲಾಗುತ್ತದೆ. ಇಲ್ಲಿನ ವಸ್ತುಸ್ಥಿತಿ ಏನೆಂದರೆ
ಪ್ಯಾಕ್ ಒಂದೇ ಆದರೆ ಅದರಲ್ಲಿ ಹಲವಾರು ವಸ್ತುಗಳಿವೆ ಮತ್ತು ಅಲ್ಲಿರುವ ಎಲ್ಲ ವಸ್ತುಗಳಿಗೂ ಬೇರೆ ಬೇರೆ
ತೆರಿಗೆ ದರ ಇದೆ ಹಾಗೆಯೇ ಅವೆಲ್ಲವನ್ನೂ ಬೇರೆ ಬೇರೆಯಾಗಿಯೂ ಮಾರಾಟ ಮಾಡಬಹುದು. ವ್ಯಾಪಾರಿ ಉದ್ಧೇಶಕ್ಕಾಗಿ
ಅಥವಾ ಬೇರೆನೋ ಕಾರಣಕ್ಕಾಗಿ ಪ್ಯಾಕ್ ಮಾಡಿ ಮಾರಲಾಗುತ್ತದೆ ಅಷ್ಟೆ. ಇಲ್ಲಿ ಯಾವ ವಸ್ತುವೂ ಸಾಮಾನ್ಯವಾದ
ಸಂರಚನೆ ಸೂತ್ರಕ್ಕೆ ಬದ್ಧವಾಗಿದೆ ಎಂದು ಹೇಳುವಂತಿಲ್ಲ. ಇಂಥಹ ಪೂರೈಕೆಗಳನ್ನೇ ಜಿಎಸ್ಟಿ ಕಾಯ್ದೆ ಮಿಶ್ರ
ಸರಬರಾಜು (Mixed Supply) ಎಂದು ಗುರುತಿಸುತ್ತದೆ. ಹಾಗಾದರೆ, ಇಂಥಹ ಮಿಶ್ರ ಸರಬರಾಜಿಗೆ (Mixed Supply) ಅನ್ವಯವಾಗುವ ತೆರಿಗೆಯ
ದರ ಏನು? ಕಾಯ್ದೆಯಲ್ಲಿ ಹೇಳಿದ ಹಾಗೆ ಇಂಥಹ ಸರಬರಾಜಿನಲ್ಲಿ ಅತಿ ಹೆಚ್ಚಿನ ತೆರಿಗೆ ದರವನ್ನು ಹೊಂದಿದ
ಸರಕು ಯಾವುದು ಇರುವುದೋ ಆ ಸರಕಿನ ತೆರಿಗೆ ದರವನ್ನೇ ಇಡೀ ಸರಬರಾಜಿಗೂ ಅನ್ವಯಿಸಬೇಕಾಗುತ್ತದೆ.

ಮೇಲಿನ ಉದಾಹರಣೆಯಲ್ಲಿ, ಆ ಪ್ಯಾಕ್ ನಲ್ಲಿ ಇರುವ ವಸ್ತುಗಳಲ್ಲಿ ಸಿಹಿ ತಿಂಡಿಗೆ ಗರಿಷ್ಠ
18% ತೆರಿಗೆ ದರ ಇದ್ದು ಉಳಿದ ವಸ್ತುವಿಗೆ ಕಡಿಮೆ 5% ಅಥವಾ 0% ಇದ್ದರೂ ಇಡೀ ಪ್ಯಾಕ್ ಗೆ 18% ತೆರಿಗೆ
ದರ ಅನ್ವಯಿಸುತ್ತದೆ.

ಜಿಎಸ್ಟಿ ಕಾಯ್ದೆಯಲ್ಲಿ ಸಂಯೋಜಿತ ಮತ್ತು ಮಿಶ್ರ ಸರಬರಾಜು.( Composite Supply & Mixed Supply) ಅತ್ಯಂತ ಮಹತ್ವಪೂರ್ಣ ಸಂಗತಿಯಾಗಿದೆ. ದಿನನಿತ್ಯದ ವ್ಯವಹಾರದಲ್ಲಿ ಇಂಥಹ ಎಷ್ಟೋ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ತೆರಿಗೆ ದರದಲ್ಲಿ ಗೊಂದಲ ಉಂಟಾದಾಗ ಯಾವುದೋ ಒಂದು ದರ ನಮೂದಿಸಿ ವ್ಯವಹಾರ ಮಾಡುವುದು ಸಮಸ್ಯೆಗಳಿಗೆ ಕಾರಣವಾಗಬಹುದು. ಮುಂದೆ ಇಂಥಹ ತಪ್ಪುಗಳು ತೆರಿಗೆ ಆಡಳಿತದ ಗಮನಕ್ಕೆ ಬಂದಲ್ಲಿ ತೆರಿಗೆದಾರ ವ್ಯತ್ಯಾಸದ ಬಾಬ್ತುಗಳನ್ನು ಬಡ್ಡಿ ಸಹಿತ ಮರುಭರಣ ಮಾಡಬೇಕಾದ ಬಾಧ್ಯತೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ತೆರಿಗೆ ದರವನ್ನು ನಿರ್ಧರಿಸುವಾಗ ಕಾಯ್ದೆಯಲ್ಲಿ ಹೇಳಿದ ಈ ಸಂಗತಿಗಳನ್ನು ಗಮನಿಸುವುದು ಉತ್ತಮವೆಂದು ಭಾವಿಸಲಾಗಿದೆ.

ಅಡ್ಮಿನ್ – ಲಾ ಛೇಂಬರ್ ಶಿರಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *