
ಸರಳ,ಸಜ್ಜನ ಎನ್ನುವ ಆರೋಪವಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ದಿನಾಚರಣೆ ಮತ್ತು ಬೇಡ್ಕಣಿ ಸರ್ಕಾರಿ ಪದವಿ ಕಾಲೇಜು ಹೆಚ್ಚುವರಿ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಡಾಫೆಯ ಮಾತನಾಡಿದರೆ ಎನ್ನುವ ಚರ್ಚೆ ನಡೆಯುತ್ತಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಹಿಂದೆ ಶಾಸಕರಾಗಿದ್ದಾಗ ನಾನು ವಿರೋಧ ಪಕ್ಷದಲ್ಲಿದ್ದೆ, ನಮಗೆ ಆಡಳಿತ, ಅನುಕೂಲ, ಅವಕಾಶಗಳಿರಲಿಲ್ಲ ಎಂದು ತೇಪೆಹಚ್ಚುತ್ತಾ ವಿರೋಧ ಪಕ್ಷಗಳನ್ನು ಗುರಿ ಮಾಡುತಿದ್ದರು.
ಈಗ ಬಿ.ಜೆ.ಪಿ.ಯ ಸರ್ಕಾರ ರಾಜ್ಯ, ರಾಷ್ಟ್ರದಲ್ಲಿದೆ. ಆದರೆ ಕೆಲಸಗಳೂ ಆಗುತ್ತಿಲ್ಲ, ಪರಿಸ್ಥಿತಿ-ವಾತಾವರಣ ಹದಗೆಡುತ್ತಿದೆ. ಇಂಥ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯಲ್ಲಿ ಬೀದಿ-ಬೀದಿಯಲ್ಲಿ ಗಣೇಶೋತ್ಸವ ಆಚರಣೆ ಸಮರ್ಥಿಸಿದ ಕಾಗೇರಿ ಬಾಲಗಂಗಾಧರ ಟಿಲಕ್ ರ ಪ್ರಯತ್ನದಿಂದ ಸಾರ್ವಜನಿಕ ಗಣೇಶೋತ್ಸವಗಳು ನಡೆಯುವಂತಾಯಿತು ಎಂದು ಅದನ್ನು ಬೇರೆ ಅರ್ಥ ಬರುವ ರೀತಿಯಲ್ಲಿ ವ್ಯಾಖ್ಯಾನಿಸಿದರು. (ದೇವರು ಧರ್ಮ, ದೇಶಪ್ರೇಮ ಬಿ.ಜೆ.ಪಿ.ಗೆ ಮತತರುವ ತಂತ್ರ-ಮಂತ್ರಗಳು)
ಸಿದ್ಧಾಪುರ ಬೇಡ್ಕಣಿ ಸರ್ಕಾರಿ ಪದವಿ ಮಹಾವಿದ್ಯಾಲಯವನ್ನು ದೂರದ ಬೇಡ್ಕಣಿ ಪಂಚಾಯತ್ ವ್ಯಾಪ್ತಿಗೆ ದೂಡಿದವರೇ ಶಾಸಕ ಕಾಗೇರಿ,ಅಲ್ಲಿ ಕಳೆದ ಕೆಲವು ವರ್ಷಗಳಿಂದಲೂ ವಿಶೇಶ ಹೊಸ ಆಯ್ಕೆಗಳಿಗೆ ಅವಕಾಶವಿಲ್ಲ, ಬಸ್ ವ್ಯವಸ್ಥೆ,ಬಸ್ ನಿಲ್ಧಾಣ, ರಸ್ತೆ, ಗ್ರಂಥಾಲಯ ಇತ್ಯಾದಿ ತೊಂದರೆಗಳನ್ನು ಕೇಳುವವರಿಲ್ಲ. ಅಲ್ಲಿಯ ವಿದ್ಯಾರ್ಥಿಗಳು ಕಳೆದ 2-3 ವರ್ಷಗಳಿಂದ ಅವರ ತೊಂದರೆ ಪರಿಹಾರಕ್ಕೆ ಬೇಡಿಕೆ ಸಲ್ಲಿಸುತ್ತಾ ಬರುತಿದ್ದಾರೆ. ಆದರೆ ಈ ಕ್ಷೇತ್ರದ ಶಾಸಕ ಕಾಗೇರಿ ಮತ್ತು ಸಂಸದ ಅನಂತಕುಮಾರ ಹೆಗಡೆ ಸ್ಫಂದಿಸಿದ್ದೇ ಇಲ್ಲ. ಚುನಾವಣಾ ಸಮಯದಲ್ಲಿ ದೇವರು, ಜಾತಿ-ಧರ್ಮಗಳ ನೆರವಿನಿಂದ ಆಯ್ಕೆಯಾಗುವ ಈ ಶಾಸಕ, ಸಂಸದರಿಗೆ ಬಹುಸಂಖ್ಯಾತರಿಗಿಂತ ಅಲ್ಫಸಂಖ್ಯಾತ ತಮ್ಮವರು ಆಪ್ತ ಎನ್ನುವುದಕ್ಕೆ ಅವರ ಕ್ಷೇತ್ರಾಭಿವೃದ್ಧಿ ನಿಧಿ ಹಂಚಿಕೆಗಳೇ ಸಾಕ್ಷಿ. ಶಿಕ್ಷಕರ ದಿನಾಚರಣೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಉತ್ತೇಜನ, ಕಾಲೇಜಿನ ಕಾರ್ಯಕ್ರಮದಲ್ಲೂ ಅನ್ಯರನ್ನೇ ದೂಷಿಸಿ, ತಮ್ಮ ಅಸಮರ್ಥತೆಯನ್ನು ಎತ್ತಿತೋರಿಸಿದ್ದು ಸ್ಪೀಕರ್ ಸ್ಥಾನದ ಘನತೆಗೆ ತಕ್ಕುದಲ್ಲದ ನಡವಳಿಕೆ ಎನ್ನುವ ಟೀಕೆ ಕೇಳಿಬಂದಿದೆ.




