ಗಣೇಶ ವಿಸರ್ಜನೆ
ಸಿದ್ದಾಪುರ ಪಟ್ಟಣದ ಅಶೋಕ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ 45ನೇ ಗಣೇಶೋತ್ಸವದ ಅಂಗವಾಗಿ ಗಣಹೋಮ ಹಾಗೂ ವಿಸರ್ಜನೆ ಪೂಜಾ ಕಾರ್ಯಕ್ರಮ ಜರುಗಿತು. ವೇದಮೂರ್ತಿ ನಾಗರಾಜ ಭಟ್ಟ ನೇತೃತ್ವದಲ್ಲಿ ದರ್ಶನ ಡಿ.ರೇವಣಕರ್ ದಂಪತಿಗಳು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಸಮಾಜದ ಗಣ್ಯರು, ಯುವಕ ಸಂಘದ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಅನ್ನಸಂತರ್ಪಣೆ ಹಾಗೂ ಸಾಯಂಕಾಲ ವಿಜೃಂಭಣೆಯಿಂದ ಡೊಳ್ಳು ವಾದ್ಯ ಮೆರವಣಿಗೆ ಮೂಲಕ ಗಣಪತಿ ವಿಸರ್ಜಿಸಲಾಯಿತು.
ಸಿದ್ಧಾಪುರ ತಾಲೂಕಿನ ಹೆಗ್ಗರಣಿಯ ಸಾರ್ವಜನಿಕ ಗಣೇಶೋತ್ಸವ ಸಮೀತಿ 38 ನೇ ವಾರ್ಷಿಕ ಕಾರ್ಯಕ್ರಮ ನೆರವೇರಿಸಿತು.
ಗಣಪತಿ ವಿಸರ್ಜನೆಯ ದಿವಸ ಅನ್ನ ಸಂತರ್ಪಣೆ,ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಆರೋಗ್ಯ ಕಾರ್ಡ್ ನೋಂದಣಿ ಪ್ರಾರಂಭ
ಕೇಂದ್ರದ ಆಯುಷ್‍ಮಾನ್ ಭಾರತ ಮತ್ತು ಆರೋಗ್ಯ ಕರ್ನಾಟಕ ಫಲಾನುಭವಿಗಳ ನೋಂದಣಿ ಪ್ರತಿ ತಾಲೂಕುಗಳ ಸರ್ಕಾರಿ ಆಸ್ಫತ್ರೆಗಳಲ್ಲಿ ನಡೆಯುತ್ತಿದೆ.
ಈ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ವ್ಯಾಪ್ತಿಯ ಜಿಲ್ಲಾ ಅರೋಗ್ಯಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಈ ನೋಂದಣಿ ಮತ್ತು ಆಧಾರ್ ಜೋಡಣೆ ಪ್ರಕ್ರೀಯೆ ಕೆಲವು ದಿವಸ ನಡೆಯಲಿದ್ದು ಸರ್ಕಾರದ ರಿಯಾಯತಿ ಆರೋಗ್ಯ ಸೇವೆ ಪಡೆಯಲು ಈ ಕಾರ್ಡ್ ಕಡ್ಡಾಯ ಎನ್ನಲಾಗಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಎಲ್ಲಾ ತಾಲೂಕಾ ಆಸ್ಫತ್ರೆಯಲ್ಲಿ ಈ ನೋಂದಣಿಕಾರ್ಯ ಪ್ರಾರಂಭವಾಗಿ 4ದಿವಸ ಕಳೆದಿದೆ. ಸಿಬ್ಬಂದಿಗಳ ಕೊರತೆ,ತಾಂತ್ರಿಕ ಅನುಕೂಲಗಳಿಲ್ಲದ ವ್ಯವಸ್ಥೆಗಳ ಪರಿಣಾಮ ದಿನವೊಂದಕ್ಕೆ ನೂರು ಜನರ ನೋಂದಣಿ ಕೂಡಾ ನಡೆಯದಿರುವುದು ಸ್ಥಳಿಯರ ಅಸಮಧಾನಕ್ಕೆ ಕಾರಣವಾಗಿದೆ.