ಜಿಎಸ್ಟಿ ಅಡಿಯಲ್ಲಿ ವಿನಾಯಿತಿ ಹೊಂದಿದ ಸರಕು ಮತ್ತು ಸೇವೆಗಳು


ಜಿಎಸ್ಟಿ ಅಡಿಯಲ್ಲಿ ವಿನಾಯಿತಿ ಹೊಂದಿದ ಸರಕು ಮತ್ತು ಸೇವೆಗಳು. (EXEMPTED GOODS AND SERVICES UNDER GST)
by lawchambersirsi

ಜಿಎಸ್ಟಿ ಜಾರಿಯಾದ ಜಾರಿಗೆ ಬಂದ ದಿನದಿಂದ ಪ್ರತಿ ಗ್ರಾಹಕನಿಂದ ಹಿಡಿದು ಪ್ರತಿ ವ್ಯಾಪಾರಿ ವಲಯದಲ್ಲಿಯೂ ಭಯ ಅಥವಾ ಹಿಂಜರಿಕೆ ಆರಂಭವಾಗಿರುವುದಂತೂ ಸತ್ಯ. ಹತ್ತಾರು ಕಾಯ್ದೆಗಳಿಗೆ ಇತಿಶ್ರೀ ಹಾಡಿ ತನ್ನ ಕದಂಬ ಬಾಹುಗಳನ್ನು ವಿಸ್ತರಿಸಿಕೊಂಡ ಜಿಎಸ್ಟಿ ಎಲ್ಲ ಸರಕು, ಸೇವೆಯ ಕ್ಷೇತ್ರಗಳಿಗೆ ಬಿಸಿ ಮುಟ್ಟಿಸಿದೆ. ಜಿಎಸ್ಟಿಯಿಂದ ಜನಸಾಮಾನ್ಯರ ಚೌಕಾಶಿ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ಎಲ್ಲದರ ಮೇಲೆಯೂ ಜಿಎಸ್ಟಿ ತೆರಿಗೆ ಹಾಗಾಗಿ ಗ್ರಾಹಕ ಮರುಮಾತನ್ನಾಡದೇ ಪಾವತಿಸಬೇಕಾಗಿದೆ ಎನ್ನುವ ಭಾವನೆ ಹಲವರದ್ದು. ಆದರೆ ಇದು ಸತ್ಯವಲ್ಲ, ಜನಸಾಮಾನ್ಯರಿಗೆ ಹೊರೆಯಾಗಬಾರದು ಎನ್ನುವ ಉದ್ದೇಶಕ್ಕೆ ಜಿಎಸ್ಟಿ ಕಾಯ್ದೆಯಲ್ಲಿ ಹಲವಾರು ವಿನಾಯಿತಿಯನ್ನು ನೀಡಲಾಗಿದೆ. ಜನಸಾಮಾನ್ಯರು ನಿತ್ಯ ಬಳಸುವ ಬಹಳಷ್ಟು ಸರಕು ಮತ್ತು ಸೇವೆಗಳ ಮೇಲೆ ಜಿಎಸ್ಟಿ ವಿನಾಯಿತಿಯನ್ನು ನೀಡಿದ್ದು ಈ ಬಗ್ಗೆ ತಿಳುವಳಿಕೆ ಹೊಂದುವ ಮೂಲಕ ಪ್ರಯೋಜನವನ್ನು ಪಡೆಯಬಹುದು.

ಜಿಎಸ್‌ಟಿ ಅಡಿಯಲ್ಲಿ ವಿನಾಯಿತಿ ಹೊಂದಿದ ಸರಕು ಮತ್ತು ಸೇವೆಗಳ ಬಗ್ಗೆ ಒಂದು ಅವಲೋಕನ:

ವಿನಾಯಿತಿ ಪಡೆದ ಸರಕುಗಳು: (Exempted Goods)

ಆಹಾರ (Food Products)

ಸಿರಿಧಾನ್ಯಗಳು,
ಖಾದ್ಯ ಹಣ್ಣುಗಳು ಮತ್ತು ತರಕಾರಿಗಳು, ಖಾದ್ಯ
ಬೇರುಗಳು ಮತ್ತು ಗೆಡ್ಡೆಗಳು, ಪ್ಯಾಕ್
ಮಾಡದ ಅಥವಾ ಸಂಸ್ಕರಿಸದ ಮೀನು
ಮತ್ತು ಮಾಂಸ, ತೆಂಗಿನಕಾಯಿ, ಬೆಲ್ಲ,
 ಸಂಸ್ಕರಿಸದ
ಚಹದ ಎಲೆಗಳು, ಹುರಿಯದ ಕಾಫಿ ಬೀಜಗಳು,
ಬೀಜಗಳು (Seeds), ಶುಂಠಿ , ಅರಿಶಿನ, ತಾಂಬೂಲದ
ಎಲೆಗಳು, ಹಪ್ಪಳ, ಹಿಟ್ಟು, ಮೊಸರು,
ಲಸ್ಸಿ, ಮಜ್ಜಿಗೆ, ಹಾಲು, ಮತ್ತು ಜಲಚರಗಳ
ಆಹಾರ.

ಕಚ್ಚಾ ವಸ್ತುಗಳು (Raw Matirials)

ಕಚ್ಚಾ ರೇಷ್ಮೆ, ರೇಷ್ಮೆ ತ್ಯಾಜ್ಯ,
ಸಂಸ್ಕರಿಸದ  ಉಣ್ಣೆ,
ಖಾದಿ ಬಟ್ಟೆ, ಖಾದಿ ನೂಲಿಗೆ
ಬಳಸುವ ಹತ್ತಿ, ಕಚ್ಚಾ ಸೆಣಬಿನ
ನಾರು, ಉರುವಲು, ಇದ್ದಿಲು ಮತ್ತು
ಕೈಮಗ್ಗ ಬಟ್ಟೆಗಳು.

ಪರಿಕರಗಳು / ಉಪಕರಣಗಳು (Tools/Instruments)

ಶ್ರವಣ ಸಾಧನಗಳು, ಕೈ ಉಪಕರಣಗಳು, ಕೃಷಿ
ಉದ್ದೇಶಗಳಿಗಾಗಿ ಬಳಸುವ ಉಪಕರಣಗಳು, ಕೈಯಿಂದ
ತಯಾರಿಸಿದ ಸಂಗೀತ ಉಪಕರಣಗಳು ಮತ್ತು
ದೈಹಿಕವಾಗಿ ಶ್ರಮಕ್ಕಾಗಿ ಜನರು ಬಳಸುವ ಸಾಧನಗಳು
ಮತ್ತು ಉಪಕರಣಗಳು.

ಇತರೇ ಸರಕುಗಳು (Miscellaneous Goods)

ಪುಸ್ತಕಗಳು,
ನಕ್ಷೆಗಳು, ಪತ್ರಿಕೆಗಳು, ನಿಯತಕಾಲಿಕಗಳು,  ಅಂಚೆಚೀಟಿಗಳು
(Non-Judicial Stamps), ಅಂಚೆ
ಸ್ಟೇಷನರಿಗಳು, ಜೀವಂತ ಪ್ರಾಣಿಗಳು (ಕುದುರೆಗಳನ್ನು
ಹೊರತುಪಡಿಸಿ), ಜೇನುಗೂಡುಗಳು, ಮಾನವ ರಕ್ತ, ವೀರ್ಯ,
ಬಳೆಗಳು, ಸೀಮೆಸುಣ್ಣದ ಕೋಲುಗಳು, ಗರ್ಭನಿರೋಧಕಗಳು, ಮಣ್ಣಿನ ಮಡಿಕೆಗಳು, ಪೂಜೆಯಲ್ಲಿ
ಬಳಸುವ ಪರಿಕರಗಳು (ವಿಗ್ರಹಗಳು, ಬಿಂದಿ, ಕುಂಕುಮ), ಗಾಳಿಪಟಗಳು,
ಸಾವಯವ ಗೊಬ್ಬರ ಮತ್ತು ಲಸಿಕೆಗಳು.

ವಿನಾಯಿತಿ ಪಡೆದ ಸೇವೆಗಳು: (Exempted services)

 ಕೃಷಿ ಸೇವೆಗಳು (Agricultural services)

ಕುದುರೆಗಳ
ಪಾಲನೆ ಪೋಷಣೆಯನ್ನು ಹೊರತುಪಡಿಸಿ ಕೃಷಿಗೆ ಸಂಬಂಧಿಸಿದ ಎಲ್ಲಾ
ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ವಿನಾಯಿತಿ ಸೇವೆಗಳಲ್ಲಿ ಕೃಷಿ ಉತ್ಪಾದನೆ, ಕಟಾವು,
ಕೃಷಿ ಕಾರ್ಮಿಕರ ಪೂರೈಕೆ, ಪ್ಯಾಕೇಜಿಂಗ್, ಕೃಷಿ
ಉದ್ದೇಶಗಳಿಗಾಗಿ ಯಂತ್ರೋಪಕರಣಗಳ ಬಾಡಿಗೆ ಅಥವಾ ಗುತ್ತಿಗೆ,
ಗೋದಾಮಿನ ಚಟುವಟಿಕೆಗಳು ಮತ್ತು ಏಜೆಂಟರ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ ಮಂಡಳಿಯ
ನೀಡುವ ಎಲ್ಲಾ ಸೇವೆಗಳನ್ನು ಜಿಎಸ್ಟಿಯಿಂದ
ವಿನಾಯಿತಿ ನೀಡಲಾಗಿದೆ.

ಸಾರಿಗೆ ಸೇವೆಗಳು (Transportation services)

ಸಾರಿಗೆ ಸಂಸ್ಥೆ
ಅಥವಾ ಕೊರಿಯರ್ ಏಜೆನ್ಸಿ ಹೊರತುಪಡಿಸಿ ರಸ್ತೆ ಮೂಲಕ
ಸಾರಿಗೆ ಸೇವೆ.

ಒಳನಾಡಿನ
ಜಲಮಾರ್ಗಗಳಿಂದ ಮೂಲಕ ಸರಕುಗಳ ಸಾಗಾಣಿಕೆ.

ಮಣಿಪುರ, ಮೇಘಾಲಯ,
ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ ರಾಜ್ಯಗಳಲ್ಲಿ ವಿಮಾನದ
ಮೂಲಕ ಪ್ರಯಾಣಿಕರ ಸಾಗಾಣಿಕೆ

ಹವಾನಿಯಂತ್ರಿತ ವ್ಯವಸ್ಥೆ
ಇಲ್ಲದ ಕುದುರೆ ಅಥವಾ ಗುತ್ತಿಗೆ ಗಾಡಿಗಳಿಂದ
ಸಾರಿಗೆ ಸೇವೆಗಳು

 ಕೃಷಿ ಉತ್ಪನ್ನಗಳು, ಹಾಲು,
ಉಪ್ಪು, ಪತ್ರಿಕೆಗಳು ಅಥವಾ ಧಾನ್ಯಗಳ ಸಾಗಾಣಿಕೆ.

ಸಾಗಾಣಿಕ ಶುಲ್ಕ
ರೂ. 1500/- ಕ್ಕಿಂತ ಕಡಿಮೆ ಇರುವ ಸಾಗಾಣಿಕಾ ಸೇವೆಗಳು.

12 ಕ್ಕೂ
ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವಿರುವ ಮೋಟಾರು
ವಾಹನಗಳ ಸೇವೆಗಳು ಮತ್ತು ಯಾವುದೇ
ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಒದಗಿಸುವ ಸಾರಿಗೆ ಸೇವೆಗಳು

ಸರ್ಕಾರ ಮತ್ತು ರಾಜತಾಂತ್ರಿಕ ಮಿಷನರಿಗಳು ಒದಗಿಸುವ ಸೇವೆಗಳು (Services provided by the government and diplomatic missionaries)

  1. ಭಾರತದಲ್ಲಿರುವ ಯಾವುದೇ ವಿದೇಶಿ ರಾಜತಾಂತ್ರಿಕ ಕಾರ್ಯಾಚರಣೆಯ ಸೇವೆಗಳು.
  2. ಭಾರತೀಯ ರಿಸರ್ವ್ ಬ್ಯಾಂಕ್ ಒದಗಿಸುವ ಸೇವೆಗಳು.
  3. ಈ ಕೆಳಗಿನ ಸೇವೆಗಳನ್ನು ಹೊರತುಪಡಿಸಿ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಸೇವೆಗಳು:
  • ಸರ್ಕಾರವನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗೆ ಒದಗಿಸುವ ಅಂಚೆ ಇಲಾಖೆಯ ಸೇವೆಗಳು: ಸ್ಪೀಡ್‌ ಪೋಸ್ಟ್‌, ಎಕ್ಸ್‌ಪ್ರೆಸ್‌ ಪಾರ್ಸಲ್‌ ಪೋಸ್ಟ್‌, ಜೀವ ವಿಮೆ ಇತ್ಯಾದಿ.
  • ಬಂದರು ಅಥವಾ ವಿಮಾನ ನಿಲ್ದಾಣದ ಗಡಿಯೊಳಗೆ ವಿಮಾನ / ಹಡಗಿಗೆ ಸಂಬಂಧಿಸಿದ ಸೇವೆಗಳು.
  • ಸರಕು ಅಥವಾ ಪ್ರಯಾಣಿಕರ ಸಾಗಣೆ.

4. ವಿಶ್ವಸಂಸ್ಥೆ ಸೇರಿದಂತೆ ರಾಜತಾಂತ್ರಿಕರಿಗೆ ಒದಗಿಸುವ ಸೇವೆಗಳು.

5. ಭಾರತೀಯ ಸೈನ್ಯ, ನೌಕೆ ಮತ್ತು ವಾಯುಪಡೆಯು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಒದಗಿಸುವ ಜೀವ ವಿಮಾ ಸೇವೆಗಳು.

ನ್ಯಾಯಾಂಗ ಸೇವೆಗಳು (Judicial services)

  1. ನ್ಯಾಯಾಲಯ ಅಥವಾ ನ್ಯಾಯಾಧೀಶರು ಒದಗಿಸುವ ಸೇವೆಗಳು (ಕೆಲವು ನಿಯಮಗಳಿಗೆ ಒಳಪಟ್ಟು).
  2. ನ್ಯಾಯವಾದಿಗಳ ಪಾಲುದಾರಿಕೆ ಸಂಸ್ಥೆಯಿಂದ ಒದಗಿಸಲಾದ ಸೇವೆಗಳು (ಕೆಲವು ನಿಯಮಗಳಿಗೆ ಒಳಪಟ್ಟು).
  3. ಹಿರಿಯ ವಕೀಲರು ಒದಗಿಸುವ ಕಾನೂನು ಸೇವೆಗಳು (ಕೆಲವು ನಿಯಮಗಳಿಗೆ ಒಳಪಟ್ಟು).

ಶೈಕ್ಷಣಿಕ ಸೇವೆಗಳು (Educational services)

ವಿದ್ಯಾರ್ಥಿಗಳು
ಮತ್ತು ಶಿಕ್ಷಕ ವರ್ಗದವರಿಗೆ ನೀಡುವ ಸಾರಿಗೆ ಸೇವೆಗಳು,
ಮಧ್ಯಾಹ್ನ ಭೋಜನ, ಅಡುಗೆ ಸೇವೆ,
ಪ್ರವೇಶ ಶುಲ್ಕ, ಪರೀಕ್ಷಾ ಸೇವೆಗಳು ಮತ್ತು
ಭದ್ರತೆ ಮತ್ತು ಮನೆಗೆಲಸ ಸೇವೆಗಳು.

ಕೆಲವು ನಿಯಮಗಳಿಗೆ
ಒಳಪಟ್ಟು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್
(IMA) ಒದಗಿಸುವ ಸೇವೆಗಳು

ವೈದ್ಯಕೀಯ ಸೇವೆಗಳು (Medical services)

ಪಶುವೈದ್ಯಕೀಯ
ಚಿಕಿತ್ಸಾಲಯದಿಂದ ಒದಗಿಸಲಾದ ಸೇವೆಗಳು ಮತ್ತು ವೈದ್ಯರು ಮತ್ತು ಅರೆವೈದ್ಯರು (paramedics) ಒದಗಿಸುವ ಆರೋಗ್ಯ ರಕ್ಷಣೆ
ಸೇವೆಗಳು.

ಆಂಬ್ಯುಲೆನ್ಸ್‌ ಸೇವೆಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಒದಗಿಸುವ ಸೇವೆಗಳು.

ಸಂಘಟಕರು ಒದಗಿಸುವ ಸೇವೆಗಳು (Services provided by organizers)

ಭಾರತದ ಹೊರಗೆ ನಡೆಯುವ ವ್ಯಾಪಾರ
ಪ್ರದರ್ಶನಗಳಿಗಾಗಿ ಸಂಘಟಕರು ಒದಗಿಸುವ ಸೇವೆಗಳು.

ವಿದೇಶಿ
ಪ್ರವಾಸಿಗರಿಗೆ ಪ್ರವಾಸಿ ನಿರ್ವಾಹಕರು (tour operators) ಒದಗಿಸುವ
ಸೇವೆಗಳು

ಇತರೇ ಸೇವೆಗಳು (Miscellaneous  services)

ವಿದ್ಯುತ್
ಪ್ರಸರಣ ಅಥವಾ ವಿತರಣೆ.

ಮಾನ್ಯತೆ
ಪಡೆದ ಕ್ರೀಡಾ ಸಂಸ್ಥೆಗಳು ಒದಗಿಸುವ
ಸೇವೆಗಳು.

ಪತ್ರಕರ್ತರು,
ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ,
ಅಥವಾ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ
ಒದಗಿಸುವ ಸುದ್ದಿ ಸಂಗ್ರಹ ಮತ್ತು ಸುದ್ದಿಯನ್ನು
ಬಿತ್ತರಿಸುವ ಸೇವೆಗಳು.

ಕಸಾಯಿಖಾನೆಗಳು
ಒದಗಿಸುವ ಸೇವೆಗಳು.

ಗ್ರಂಥಾಲಯಗಳು
ಒದಗಿಸುವ ಸೇವೆಗಳು.

ಸಾರ್ವಜನಿಕ ಅನುಕೂಲಗಳಿಗಾಗಿ
ಒದಗಿಸುವ ಶೌಚಾಲಯ ಮತ್ತು ಮೂತ್ರಾಲಯಗಳ ಸೇವೆಗಳು

ಧಾರ್ಮಿಕ ಸಮಾರಂಭಗಳನ್ನು
ನಡೆಸಲು ಯಾವುದೇ ಧಾರ್ಮಿಕ
ಸ್ಥಳದ ಬಾಡಿಗೆ ಸೇವೆಗಳು

ಇತ್ತೀಚೆಗೆ ಸೇರ್ಪಡೆಗೊಂಡ ವಿನಾಯಿತಿಗಳು:

 ಕೇಂದ್ರ
ಸರ್ಕಾರ, ರಾಜ್ಯ ಸರ್ಕಾರ ಮತ್ತು
ಕೇಂದ್ರಾಡಳಿತ ಪ್ರದೇಶಗಳಿಗೆ GSTIN ಒದಗಿಸುವ ಸೇವೆಗಳು.

ದಿನಕ್ಕೆ 1000 ರೂ
ಕ್ಕಿಂತ ಕಡಿಮೆ ದರದಲ್ಲಿ ವಸತಿ ಉದ್ದೇಶಗಳಿಗಾಗಿ
ಆಸ್ತಿಯನ್ನು ಬಾಡಿಗೆ ನೀಡುವುದು.

ಸರ್ಕಸ್‌, ನಾಟಕ  ಪ್ರದರ್ಶನ,
ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು
ಮಾನ್ಯತೆ ಇಲ್ಲದ ಕ್ರೀಡಾಕೂಟಗಳ ಪ್ರವೇಶ ಶುಲ್ಕ. ಮಾನ್ಯತೆ
ಪಡೆದ ಕ್ರೀಡಾಕೂಟಗಳ ಪ್ರವೇಶ ಶುಲ್ಕ ಪ್ರತಿ ವ್ಯಕ್ತಿಗೆ
250 / – ರೂಗಳಿಗಿಂತ ಕಡಿಮೆ ಇದ್ದಲ್ಲಿ
ಜಿಎಸ್ಟಿ ವಿನಾಯಿತಿಯನ್ನು ಸೇರಿಸಲಾಗಿದೆ. ವಸ್ತುಸಂಗ್ರಹಾಲಯಗಳು,
ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು, ಮೃಗಾಲಯಗಳು ಇತ್ಯಾದಿಗಳ ಪ್ರವೇಶ ಶುಲ್ಕಗಳೂ ಕೂಡ ಜಿಎಸ್ಟಿಯಲ್ಲಿ ವಿನಾಯಿತಿಯನ್ನು ಹೊಂದಿವೆ.

ಅಡ್ಮಿನ್- ಲಾ ಛೇಂಬರ್ ಶಿರಸಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *